ಮೊದಲೇ ಕಡಿಮೆ ಬೆಲೆ... ಮತ್ತೇ 20,000 ವರೆಗೆ ಡಿಸ್ಕೌಂಟ್: ಖರೀದಿಗೆ ಕ್ಯೂ ನಿಂತ ಜನ!
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ (Ather Energy), ಪ್ರಸ್ತುತ ದೇಶದಲ್ಲಿ ತನ್ನ ಇವಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಹಲವರು ಪ್ರತಿಸ್ಪರ್ಧಿಗಳ ನಡೆವೆಯು ಉತ್ತಮ ಫೀಚರ್ಸ್, ಆಕರ್ಷಕ ಡಿಸೈನ್, ಅತ್ಯುತ್ತಮ ರೇಂಜ್ ನೀಡುವ ಸ್ಕೂಟರ್‌ಗಳ ಮೂಲಕ ಗ್ರಾಹಕರಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಈಗ ಹೊಸ ಆಫರ್ ಘೋಷಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಕೊಳ್ಳಲು ಪ್ಲಾನ್ ಮಾಡಿದೆ. ಹೌದು, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ರಿಜ್ಟಾ ಮತ್ತು 450 ಸಿರೀಸ್ ಸ್ಕೂಟರ್‌ಗಳ ಮೇಲೆ ರೂ. 20,000 ವರೆಗಿನ ಸೀಮಿತ ಅವಧಿಯ ಪ್ರಯೋಜನಗಳನ್ನು ಘೋಷಿಸಿದೆ.
ಈ ಆಫರ್ ಭಾಗವಾಗಿ, ಗ್ರಾಹಕರು ರೂ. 10,000 ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್, ರೂ. 6,500 ಕ್ಯಾಷ್ ಡಿಸ್ಕೌಂಟ್ ಮತ್ತು ರೂ. 3,500 ಮೌಲ್ಯದ ವಿಸ್ತೃತ ಘಟಕಗಳ ವಾರಂಟಿ ಸೇರಿದಂತೆ ಒಟ್ಟು ರೂ. 20,000 ವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ಈ ಕೊಡುಗೆಗಳು ಮಾರ್ಚ್ 31, 2026 ರವರೆಗೆ ಭಾರತದಾದ್ಯಂತ ಇರುವ ಎಥರ್ ಎಕ್ಸ್ಪೀರಿಯನ್ಸ್ ಸೆಂಟರ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಎಥರ್ ಎನರ್ಜಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಫರ್‌ಗಳನ್ನು ಪರಿಚಯಿಸಿದ ನಂತರ, ರಿಜ್ಟಾ ಎಸ್ ಈಗ ಕೇವಲ ರೂ. 1,04,758 (ಮುಂಬೈ ಎಕ್ಸ್‌ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ 450S ಈಗ ರೂ. 1,13,100 (ಮುಂಬೈ ಎಕ್ಸ್‌ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಈ ಆಫರ್ ಮಾರ್ಚ್ 31, 2026 ರವರೆಗೆ ಲಭ್ಯವಿದೆ. ಗ್ರಾಹಕರು ತಮ್ಮ ಹತ್ತಿರದ ಎಥರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಎಥರ್ ಎನರ್ಜಿಯ ಅಧಿಕೃತ ವೆಬ್‌ಸೈಟ್ ಮೂಲಕ ಆಫರ್‌ಗಳ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.
ಗ್ರಾಹಕರು ಕಂಪನಿಯು ನೀಡುವ ಈ ಪ್ರಯೋಜನಗಳನ್ನು ಈ ತಿಂಗಳು ಮಾತ್ರ ಪಡೆಯಬಹುದು. ಪ್ರಸ್ತುತ ಮಾರ್ಚ್ 31, 2026 ರವರೆಗೆ ಮಾತ್ರ ಜಾರಿಯಲ್ಲಿರುವ PM E-ಡ್ರೈವ್ ಯೋಜನೆಯ ಭಾಗವಾಗಿ ರೂ. 5,000 ಮೌಲ್ಯದ ನಗದು ಸಬ್ಸಿಡಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಆಫರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನೋಡುತ್ತಿರುವವರಿಗೆ ಈಗ ಮನೆಗೆ ಕೊಂಡೊಯ್ಯಲು ಉತ್ತಮ ಅವಕಾಶವಾಗಿದೆ.

ಎಥರ್ ರಿಜ್ಟಾ ವಿಶೇಷತೆಗಳು: ಎಥರ್ ರಿಜ್ಟಾ' ಎಸ್ ಮತ್ತು ರಿಜ್ಟಾ ಝಡ್ ಎಂಬ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ಲೈಟ್‌ಗಳು & ಎಲ್ಇಡಿ ಟೈಲ್‌ಲೈಟ್‌ನ್ನು ಹೊಂದಿದೆ. ಹಾಗೆಯೇ ಸ್ಟೈಲಿಶ್ ಆಗಿರುವ 12-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಇದು ಎಲ್‌ಸಿಡಿ ಸ್ಕ್ರೀನ್ (7-ಇಂಚು) ಮತ್ತು ಮಲ್ಟಿ ಪರ್ಪಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಸ್ಮಾರ್ಟ್ (Smart), ಇಕೋ (Eco) ಮತ್ತು ಜಿಪ್ (Zip) ಎಂಬ 3 ಆಕರ್ಷಕ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 34 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಹೊಂದಿದೆ. ಸೀಟ್ ಎತ್ತರವು 780 ಎಂಎಂ ಇದೆ.

ಎಥರ್ 450 ವಿಶೇಷತೆಗಳು: ಎಥರ್ 450 ಸ್ಕೂಟರ್ ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ್ನು ಪಡೆದಿದೆ. ಸ್ಮಾರ್ಟ್ ಇಕೋ, ಇಕೋ, ರೈಡ್ ಹಾಗೂ ಸ್ಪೋರ್ಟ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ 5.4 ಕೆಡಬ್ಲ್ಯೂ ಎಲೆಕ್ಟ್ರಿಕ್ ಮೋಟಾರ್, 22 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಬಹುಮುಖ್ಯವಾಗಿ 7-ಇಂಚಿರುವ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಆಟೋಮೆಟಿಕ್ ಬ್ರೈಟ್‌ನೆಸ್, ಎಥರ್‌ಸ್ಟ್ಯಾಕ್ ಪ್ರೊ ಸಾಫ್ಟ್‌ವೇರ್, ಆಟೋಹೋಲ್ಡ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಹಾಗೂ ಅಲೆಕ್ಸಾ ಇಂಟಿಗ್ರೇಷನ್‌ನ್ನು ಪಡೆದಿದೆ.


Click it and Unblock the Notifications








