ರೂ.4.99 ಲಕ್ಷಕ್ಕೆ ಬೆಸ್ಟ್ ಮಾರುತಿ ಕಾರಿದು.. ಮುಗಿಬಿದ್ದ ಜನ.. ಭಾರೀ ಸಂಖ್ಯೆಯಲ್ಲಿ ಸೇಲ್ಸ್!
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಎಸ್‌ಯುವಿ ಹಾಗೂ ಎಂಪಿವಿಗಳ ತೀವ್ರ ಪೈಪೋಟಿ ನಡುವೆಯೂ ಮಧ್ಯಮ ವರ್ಗದ ಜನರು ಆಯ್ಕೆಯ ವಾಹನವಾಗಿದೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಈ 2026ರ ಫೆಬ್ರವರಿಯಲ್ಲಿಯೂ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದಾರೆ. ಒಟ್ಟು 14,885 ಯುನಿಟ್‌ಗಳನ್ನು ವಿತರಿಸಲಾಗಿದೆ. ಇದೇ ಜನವರಿ ತಿಂಗಳಲ್ಲಿ ಸರಿ ಸುಮಾರು 15,118 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
2025ರ ಕಡೆಯ 6 ತಿಂಗಳಲ್ಲೂ 'ಮಾರುತಿ ವ್ಯಾಗನ್ಆರ್' ಉತ್ತಮ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಡಿಸೆಂಬರ್‌ನಲ್ಲಿ 14,575 ಯುನಿಟ್, ನವೆಂಬರ್‌ನಲ್ಲಿ 14,619 ಯುನಿಟ್, ಅಕ್ಟೋಬರ್‌ನಲ್ಲಿ 18,970 ಯುನಿಟ್, ಸೆಪ್ಟೆಂಬರ್‌ನಲ್ಲಿ 15,388 ಯುನಿಟ್, ಆಗಸ್ಟ್‌ನಲ್ಲಿ 14,552 ಯುನಿಟ್, ಜುಲೈನಲ್ಲಿ 14,710 ಯುನಿಟ್‌ಗಳನ್ನು ಮಾರಲಾಗಿತ್ತು.

'ಮಾರುತಿ ಸುಜುಕಿ ವ್ಯಾಗನ್ಆರ್' ವಿಶೇಷತೆಗಳೇನು:
ಇದು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ ಆಕರ್ಷಕವಾದ ರೂಪಾಂತರಗಳೊಂದಿಗೂ ಲಭ್ಯವಾಗುತ್ತದೆ.
ಈ ಕಾರು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಪೂಲ್‌ಸೈಡ್ ಬ್ಲೂ, ಪರ್ಲ್ ಮೆಟಾಲಿಕ್ ಗ್ಯಾಲಂಟ್ ರೆಡ್ ಹಾಗೂ ಪರ್ಲ್ ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಸಾಕಷ್ಟು ವಿಶಾಲವಾಗಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,435 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ವ್ಯಾಗನ್ಆರ್' 3 ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 5,500 ಆರ್‌ಪಿಎಂನಲ್ಲಿ 67 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 3,500 ಆರ್‌ಪಿಎಂನಲ್ಲಿ 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಮತ್ತೊಂದು 1.2-ಲೀಟರ್ ಪೆಟ್ರೋಲ್ ಎಂಜಿನ್, 6,000 ಆರ್‌ಪಿಎಂನಲ್ಲಿ 88.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4,400 ಆರ್‌ಪಿಎಂನಲ್ಲಿ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನೊಂದು 1-ಲೀಟರ್ ಸಿಎನ್‌ಜಿ ಎಂಜಿನ್, 5,300 ಆರ್‌ಪಿಎಂನಲ್ಲಿ 56 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 3,400 ಆರ್‌ಪಿಎಂನಲ್ಲಿ 82 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 23.56 ರಿಂದ 34.05 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 12.73 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ 'ಮಾರುತಿ ವ್ಯಾಗನ್ಆರ್' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು. ವೀಕೆಂಡ್‌ಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಸಾಧ್ಯವಾಗುವಂತೆ 341 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಪವರ್ ವಿಂಡೋಗಳು, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಹಾಗೂ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಸುರಕ್ಷತೆಯಿಂದಲೂ ಎಲ್ಲೆಡೆ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, ಸ್ಪೀಡ್-ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ವಾರ್ನಿಂಗ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.


Click it and Unblock the Notifications








