Maruti: ದೊಡ್ಡ ಕುಟುಂಬಕ್ಕೆ ಬೆಸ್ಟ್ 7-ಸೀಟರ್: ಫುಲ್ ಸೇಫ್ಟಿ, 26 ಕಿ.ಮೀ ಮೈಲೇಜ್: ಬೆಲೆ ಇಷ್ಟೇನಾ?
ದೇಶದಲ್ಲಿ 7-ಸೀಟರ್ MPV ಗಳಿಗೆ ತುಂಬಾ ಬೇಡಿಕೆ ಇದೆ, ಸಣ್ಣ ಕುಟುಂಬಗಳಿಗೆ 6 ರಿಂದ 7 ಲಕ್ಷ ಬೆಲೆಯಲ್ಲಿ ಐದು ಮಂದಿ ಆರಾಮವಾಗಿ ಪ್ರಯಾಣಿಸುವ ಹ್ಯಾಚ್‌ಬ್ಯಾಕ್‌ಗಳು ತುಂಬಾ ಸಿಗುತ್ತವೆ. ಆದರೆ 9 ಲಕ್ಷದೊಳಗೆ 7-ಸೀಟರ್ ಎಂಪಿವಿಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತವೆ. ಅದರಲ್ಲೂ ಮಾರುತಿ ಸುಜುಕಿ ಎರ್ಟಿಗಾ ಪ್ರತಿ ತಿಂಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತದೆ. ಈ 7-ಸೀಟರ್ MPV ಕಾರು ಕಮ್ಮಿ ಬೆಲೆ, ಅತ್ಯುತ್ತಮ ಮೈಲೇಜ್, ಆಕರ್ಷಕ ಫೀಚರ್ಸ್ ಜೊತಗೆ 7 ಮಂದಿಗೆ ಆರಾಮ ಪ್ರಯಾಣ ನೀಡುವ ಅತ್ಯುತ್ತಮ ಕಾರಾಗಿ ಗುರ್ತಿಸಿಕೊಂಡಿದೆ.
ಮಾರುತಿ ಸುಜುಕಿ ಎರ್ಟಿಗಾ 2026 ಜನವರಿ ತಿಂಗಳಲ್ಲಿ ಬರೋಬ್ಬರಿ 17,892 ವಾಹನಗಳು ಮಾರಾಟವಾಗಿವೆ. ಅಲ್ಲದೆ 2025 ರಲ್ಲಿ, ಬರೋಬ್ಬರಿ 1,92,025 ಯುನಿಟ್ ಎರ್ಟಿಗಾ ಕಾರುಗಳನ್ನು ಜನ ಮುಗಿಬಿದ್ದು ಖರೀದಿ ಮಾಡಿದ್ದಾರೆ. ಟೊಯೋಟಾ ರುಮಿಯನ್, ಇನ್ನೋವಾ, ರೆನಾಲ್ಟ್ ಟ್ರೈಬರ್ ಮತ್ತು ಕಿಯಾ ಕ್ಯಾರೆನ್ಸ್‌ನಂತಹ 7-ಸೀಟರ್ ಮಾಡಲ್‌ಗಳನ್ನು ಹಿಂದಿಕ್ಕಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಭಾರತದಲ್ಲಿ ಪ್ರಸ್ತುತ 2025 ರ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ಬೆಲೆಯು ರೂ.8,80,000 (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 12,94,100 (ಎಕ್ಸ್ - ಶೋರೂಂ) ಇದೆ. ಇದು CNG ಆಯ್ಕೆಯಲ್ಲೂ ಲಭ್ಯವಿರುವುದು ಮತ್ತೊಂದು ಹೈಲೆಟ್ ಆಗಿದೆ. ಕ್ಯಾಬಿನ್ ಒಳಗೆ ಮೂರು-ಸಾಲುಗಳ ಆಸನ ಸಂರಚನೆ ಮತ್ತು 550-ಲೀಟರ್ ಬೂಟ್ ಜಾಗವನ್ನು ಹೊಂದಿದೆ.
ತನ್ನ ಮೌಲ್ಯಯುತ ಬೆಲೆ, ಅತ್ಯುತ್ತಮ ಸ್ಥಳಾವಕಾಶ, ಇಂಧನ-ಸಮರ್ಥ ಎಂಜಿನ್‌ಗಳು ಮತ್ತು ಘನ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಭಾರತೀಯ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ವಿಶಾಲವಾದ ಕ್ಯಾಬಿನ್ ಹೊಂದಿದ್ದು, ಕಾರಿನ ಒಟ್ಟಾರೆ ಉದ್ದವು 4,395 ಎಂಎಂ, 1,735 ಎಂಎಂ ಅಗಲ ಹಾಗೂ 1,690 ಎಂಎಂ ಎತ್ತರವಿದೆ. ಜೊತೆಗೆ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,740 ವೀಲ್‌ಬೇಸ್ ಇದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಫೀಚರ್ಸ್ ವಿಷಯಕ್ಕೆ ಬಂದರೆ, ವೇರಿಯೆಂಟ್ಸ್‌ಗೆ ಅನುಗುಣವಾಗಿ ಪ್ಯಾಡಲ್ ಶಿಫ್ಟರ್ಸ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.
ಮಾರುತಿ ಎರ್ಟಿಗಾ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ. 1.5L - ಪೆಟ್ರೋಲ್ ಎಂಜಿನ್, 1.5L - CNG ಎಂಜಿನ್ ಆಯ್ಕೆಯಲ್ಲಿವೆ, ಎರಡು ಎಂಜಿನ್‌ಗಳು ಕ್ರಮವಾಗಿ 101.64 bhp ಪವರ್ ಮತ್ತು 139 Nm ಟಾರ್ಕ್ ಹಾಗೆಯೇ ಸಿಎನ್‌ಜಿ 86.63 bhp ಪವರ್ ಮತ್ತು 122 Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ.

ಕಂಪನಿಯ ಪ್ರಕಾರ ಪೆಟ್ರೋಲ್‌ನಲ್ಲಿ 20.51 kmpl ಮೈಲೇಜ್ ಹಾಗೂ ಸಿಎನ್‌ಜಿ ನಲ್ಲಿ 26.11 km/kg ಮೈಲೇಜ್ ಕೊಡುತ್ತದೆ. ಇದು ಸಾಮಾನ್ಯವಾಗಿ 7-ಸೀಟರ್ ಕಾರಾಗಿದ್ದು, ಟಾಪ್ ವೇರಿಯೆಂಟ್‌ಗಳು ಹೆಚ್ಚುವರಿ ಸೌಕರ್ಯಕ್ಕಾಗಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಪಡೆಯುವ ಆಯ್ಕೆಯನ್ನು ಸಹ ನೀಡುತ್ತವೆ. ಮೂರನೇ ಸಾಲನ್ನು ಮಡಚುವ ಮೂಲಕ 209 ಲೀಟರ್ ಬೂಟ್ ಜಾಗವನ್ನು ವಿಸ್ತರಿಸಬಹುದಾಗಿದೆ.
ಸೇಫ್ಟಿ ವಿಷಯಕ್ಕೆ ಬಂದರೆ ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರಿವರ್ಸ್ ಕ್ಯಾಮೆರಾ, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ನಂತಹ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಇದರ ಇಂಧನ ಟ್ಯಾಂಕ್ ಸಾಮರ್ಥ್ಯವು 45 ಲೀಟರ್ ಇದೆ.


Click it and Unblock the Notifications








