Best 7-Seater: 26.11 ಕಿ.ಮೀ ಮೈಲೇಜ್... ಡೀಲರ್‌ಗಳ ಫೆವರೆಟ್ 7-ಸೀಟರ್: ನಿತ್ಯ 526 ಕಾರುಗಳು ಡೆಲಿವರಿ!

ದೇಶದ ಅತ್ಯಂತ ಜನಪ್ರಿಯ 7-ಸೀಟರ್ (Best 7-Seater) MPV ಆಗಿರುವ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), 2025 ರಲ್ಲೂ ತನ್ನ ಮಾರಾಟ ಪ್ರಾಬಲ್ಯವನ್ನು ತೋರಿಸಿದೆ. ದೇಶದ ಅತಿ ಹೆಚ್ಚು ಮಾರಾಟ ಕಾಣುವ 7-ಸೀಟರ್ ಕಾರಾಗಿ ಗುರ್ತಿಸಿಕೊಂಡಿದೆ. ಇದು ಪ್ರತಿ ತಿಂಗಳು ತನ್ನ ವಿಭಾಗದಲ್ಲಿ ಸ್ಥಿರವಾಗಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 2025 ರಲ್ಲಿಯೂ ಇದರ ಏಕಪಕ್ಷೀಯ ಪ್ರಾಬಲ್ಯವು ಸ್ಪಷ್ಟವಾಗಿ ಕಂಡುಬಂದಿದ್ದು, 2025 ರಲ್ಲಿ ಪ್ರತಿದಿನ 526 ಜನರು ಮಾರುತಿ ಎರ್ಟಿಗಾವನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

2025 ರಲ್ಲಿ, ಬರೋಬ್ಬರಿ 1,92,025 ಯುನಿಟ್‌ ಎರ್ಟಿಗಾ ಕಾರುಗಳು ಮಾರಾಟವಾಗಿವೆ, 2024 ರಲ್ಲಿ 1,90,091 ಯುನಿಟ್‌ ಕಾರುಗಳು ಮಾರಾಟವಾಗಿದ್ದವು. 2024 ಕ್ಕೆ ಹೋಲಿಸಿದರೆ 2025 ರಲ್ಲಿ 1,934 ಹೆಚ್ಚುವರಿ ಕಾರುಗಳು ಮಾರಾಟವಾಗಿದ್ದು, ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಭಾರತದಲ್ಲಿ ಪ್ರತಿದಿನ 526 ಜನ ಮಾರುತಿ ಎರ್ಟಿಗಾವನ್ನು ಖರೀದಿಸಿದ್ದಾರೆ.

best-7-seater-mpv-maruti-suzuki-ertiga-sold-everyday-526-units

ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ.8.80 ಲಕ್ಷದಿಂದ ಪ್ರಾರಂಭವಾಗುವುದರಿಂದ ಅಗ್ಗದ ಬೆಲೆಯ 7-ಸೀಟರ್ MPV ಆಗಿ ಭಾರತದಲ್ಲಿ ಭಾರೀ ಮಾರಾಟ ಕಾಣುತ್ತಿದೆ. ಅದರ ವಿಭಾಗದಲ್ಲಿ ಟೊಯೋಟಾ ರುಮಿಯನ್, ಟೊಯೋಟಾ ಇನ್ನೋವಾ, ರೆನಾಲ್ಟ್ ಟ್ರೈಬರ್ ಮತ್ತು ಕಿಯಾ ಕ್ಯಾರೆನ್ಸ್‌ನಂತಹ 7-ಸೀಟರ್ ಮಾಡಲ್‌ಗಳನ್ನು ಹಿಂದಿಕ್ಕಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಇದು CNG ಆಯ್ಕೆಯಲ್ಲೂ ಲಭ್ಯವಿರುವುದು ಮತ್ತೊಂದು ಹೈಲೆಟ್ ಆಗಿದೆ.

ಮಾರುತಿ ಎರ್ಟಿಗಾ ವಿಶೇಷತೆಗಳು

ಭಾರತದಲ್ಲಿ ಪ್ರಸ್ತುತ 2025 ರ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ಬೆಲೆಯು ರೂ.8,80,000 (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 12,94,100 (ಎಕ್ಸ್ - ಶೋರೂಂ) ಇದೆ. ತನ್ನ ಮೌಲ್ಯಯುತ ಬೆಲೆ, ಅತ್ಯುತ್ತಮ ಸ್ಥಳಾವಕಾಶ, ಇಂಧನ-ಸಮರ್ಥ ಎಂಜಿನ್‌ಗಳು ಮತ್ತು ಘನ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಭಾರತೀಯ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿದೆ.

best-7-seater-mpv-maruti-suzuki-ertiga-sold-everyday-526-units

ಈ ಕಾರು ಸಾಕಷ್ಟು ಸ್ಥಳಾವಕಾಶ, ಹಗುರವಾದ ಸ್ಟೀರಿಂಗ್, ಮೂರು-ಸಾಲುಗಳ ಸಂರಚನೆ ಮತ್ತು 550-ಲೀಟರ್ ಬೂಟ್ ಜಾಗವನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ (ಒ) ಎಂಬ ರೂಪಾಂತರಗಳ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಕ್ಯಾಬಿನ್ ವಿಶಾಲವಾದದ್ದು, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ದೊಡ್ಡ ಟಚ್‌ಸ್ಕ್ರೀನ್ (ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ), ಸಾಫ್ಟ್ - ಟಚ್ ಮೆಟಿರಿಯಲ್‌ಗಳನ್ನು ಒಳಗೊಂಡಿದೆ.

ಸುರಕ್ಷತೆ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ ವೇರಿಯೆಂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್, EBD ಜೊತೆಗೆ ABS, ISOFIX ಚೈಲ್ಡ್ ಸೀಟ್ ಮೌಂಟ್‌ಗಳೊಂದಿಗೆ ಬರುತ್ತದೆ. ಟಾಪ್ ವೇರಿಯೆಂಟ್‌ಗಳು ESC, ರಿವರ್ಸ್ ಕ್ಯಾಮೆರಾ, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ನಂತಹ ಸುಧಾರಿತ ಸೇಫ್ಟಿ ಫೀಚರ್ಸ್ ಪಡೆಯುತ್ತವೆ. ಹಾಗೆಯೇ ಇದರ ಇಂಧನ ಟ್ಯಾಂಕ್ ಸಾಮರ್ಥ್ಯವು 45 ಲೀಟರ್ ಇದೆ.

best-7-seater-mpv-maruti-suzuki-ertiga-sold-everyday-526-units

ಮಾರುತಿ ಎರ್ಟಿಗಾ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 1.5L - CNG ಎಂಜಿನ್, 86.63 bhp ಪವರ್ ಮತ್ತು 122 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ, ಸಿಎನ್‌ಜಿ ಕಾರು ಬರೋಬ್ಬರಿ 26.11 km/kg ಮೈಲೇಜ್ ನೀಡುತ್ತದೆ. 1.5L - ಪೆಟ್ರೋಲ್ ಎಂಜಿನ್, 101.64 bhp ಪವರ್ ಮತ್ತು 139 Nm ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಪೆಟ್ರೋಲ್‌ ಎಂಜಿನ್ 20.51 kmpl ಮೈಲೇಜ್ ನೀಡುತ್ತದೆ.

ಎರಡೂ ಎಂಜಿನ್‌ಗಳು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಇದು ಸಾಮಾನ್ಯವಾಗಿ 7-ಸೀಟರ್ ಕಾರಾಗಿದ್ದು, ಟಾಪ್ ವೇರಿಯೆಂಟ್‌ಗಳು ಹೆಚ್ಚುವರಿ ಸೌಕರ್ಯಕ್ಕಾಗಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಪಡೆಯುವ ಆಯ್ಕೆಯನ್ನು ಸಹ ನೀಡುತ್ತವೆ. ಮೂರನೇ ಸಾಲನ್ನು ಮಡಚುವ ಮೂಲಕ 209 ಲೀಟರ್ ಬೂಟ್ ಜಾಗವನ್ನು ಪಡೆಯಬಹುಗಿದೆ.

More from DriveSpark

Article Published On: Saturday, January 24, 2026, 10:20 [IST]
English summary
Best 7 seater mpv maruti suzuki ertiga sold everyday 526 units
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+