Toyota: ಬೆಸ್ಟ್ 7-ಸೀಟರ್: ಡೀಲರ್‌ಗಳ ಫೇವರೆಟ್ ಕಾರು, 26 ಕಿ.ಮೀ ಮೈಲೇಜ್: ಆದ್ರೆ ಇನ್ನೋವಾ ಅಲ್ಲ!
ಟೊಯೊಟಾ ರುಮಿಯಾನ್ (Toyota Rumion) ಎಂಪಿವಿ ಕಾರು, ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಒಟ್ಟಾರೆ ವಿನ್ಯಾಸ ಮತ್ತು ಇಂಟೀರಿಯರ್ ಡಿಜೈನ್‌ವರೆಗೆ ಕ್ಯಾಬಿನ್ ಒಂದೇ ಆಗಿರುತ್ತದೆ. ಈ ಟೊಯೊಟಾ ರುಮಿಯಾನ್ ಭಾರತದಲ್ಲಿ ಖರೀದಿಗೆ ಸಿಗುವ ಬೆಸ್ಟ್ 7-ಸೀಟರ್ ಕಾರುಗಳಲ್ಲಿ ಒಂದಾಗಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಟೊಯೋಟಾ ಇನ್ನೋವಾವನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿಡಿಲ್‌ಕ್ಲಾಸ್ ಫ್ಯಾಮಿಲಿ ಕಾರಾಗಿದೆ. ಈ ಎಂಪಿವಿಯ ಮೈಲೇಜ್, ಬೆಲೆ, ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಇಲ್ಲಿ ನೋಡೋಣ.
ಈ 7-ಸೀಟರ್ ಕಾರಿನಲ್ಲಿ ಎಲ್ಲಾ ಮೂರು ಸಾಲುಗಳು ಆರಾಮದಾಯಕ ಆಸನಗಳನ್ನು ನೀಡುತ್ತವೆ. ನೀವು 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ನಿಮ್ಮ ಕುಟುಂಬಕ್ಕೆ ಆರಾಮದಾಯಕ 7-ಸೀಟರ್ ಎಂಪಿವಿಯನ್ನು ಹುಡುಕುತ್ತಿದ್ದರೆ, ಟೊಯೊಟಾ ರುಮಿಯಾನ್ ಬೆಸ್ಟ್ ಆಯ್ಕೆಯಾಗಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಗರಿಷ್ಟ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ಈಗ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಟೊಯೊಟಾ ರುಮಿಯಾನ್ ವಿಶೇಷತೆಗಳು
ಟೊಯೊಟಾ ರುಮಿಯಾನ್‌ನ ಬೇಸ್ ವೇರಿಯೆಂಟ್ ಆನ್-ರೋಡ್ ಬೆಲೆಯು 13.86 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಇದರ ಟಾಪ್ ವೇರಿಯೆಂಟ್ ಆನ್-ರೋಡ್ ಬೆಲೆಯು 18.17 ಲಕ್ಷ ರೂ.ಗಳವರೆಗೆ ಇದೆ. ಕಾರು ಪ್ರೀಮಿಯಂ ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಮತ್ತು ಡ್ಯುಯಲ್ - ಟೋನ್ ಮೆಷಿನ್ಡ್ ಅಲಾಯ್ ವೀಲ್‌ಗಳೊಂದಿಗೆ ಆಧುನಿಕ ಕುಟುಂಬಗಳಿಗೆ ಸೊಗಸಾದ ಆಯ್ಕೆಯಾಗಿದೆ.
ಕಾರಿನಲ್ಲಿ ಹೊಂದಿಕೊಳ್ಳುವ 60:40 ಸ್ಪ್ಲಿಟ್ 2ನೇ ಸಾಲು ಮತ್ತು ಒರಗಿಕೊಳ್ಳುವ 3ನೇ ಸಾಲಿನ ಸೀಟುಗಳು, 2ನೇ ಮತ್ತು 3ನೇ ಸಾಲಿನ AC ವೆಂಟ್‌ಗಳು ಮತ್ತು ಉದಾರವಾದ ಲಗೇಜ್ ಸ್ಥಳವನ್ನು ನೀಡಲಾಗಿದೆ. ಇಂಟೀರಿಯರ್‌ನಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒದಗಿಸಲಾಗಿದೆ.

ಇವಿಷ್ಟೆ ಅಲ್ಲದೆ ಕೀಲೆಸ್ ಎಂಟ್ರಿ, ಆಟೋಮ್ಯಾಟಿಕ್ ಹೆಡ್ ಲೈಟ್, ಪುಶ್ - ಬಟನ್ ಎಂಜಿನ್ ಸ್ಟಾರ್ಟ್ / ಸ್ಟಾಪ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿಗಳನ್ನು ಸಹ ಹೊಂದಿದೆ. ರುಮಿಯನ್ ಕಾರು ಟೊಯೋಟಾ ಐ-ಕನೆಕ್ಟ್‌ನೊಂದಿಗೆ ಬರಲಿದ್ದು, ಇದು ಸ್ಮಾರ್ಟ್‌ವಾಚ್ ಹೊಂದಾಣಿಕೆ, ವಾಯಿಸ್ ಅಸಿಸ್ಟ್ ಸಪೋರ್ಟ್, ರಿಮೋಟ್ ಲಾಕ್/ಅನ್‌ಲಾಕ್, ಕ್ಲೈಮೆಟ್ ಕಂಟ್ರೋಲ್ ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ನೀಡುತ್ತದೆ.
ಟೊಯೊಟಾ ರುಮಿಯನ್ ಎಂಪಿವಿ, 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಗ್ರಾಹಕರು ಪೆಟ್ರೋಲ್ ಎಂಜಿನ್‌ನಲ್ಲಿ 20.51 ಕಿಮೀ/ಲೀ (MT) ಮತ್ತು CNG ನಲ್ಲಿ 26.11 ಕಿ.ಮೀ/ಕೆ.ಜಿ ವರೆಗೆ ಮೈಲೇಜ್ ಪಡೆಯಬಹುದು ಎಂದು ಟೊಯೋಟಾ ಹೇಳಿಕೊಂಡಿದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5MT ಮತ್ತು 6AT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಬಹುದು. ಸಿಎನ್‌ಜಿ ಕೇವಲ 5-ಸ್ಪೀಡ್ ಮ್ಯಾನುವಲ್ ಮಾತ್ರ ಬರುತ್ತದೆ.

ಇದರ ಪೆಟ್ರೋಲ್ ಎಂಜಿನ್ 102 ಬಿಎಚ್ ಪವರ್ ಹಾಗೂ 137 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿನಲ್ಲಿ 87 ಬಿಎಚ್ ಪವರ್ ಹಾಗೂ 121 ಎನ್ಎಂ ಟಾರ್ಕ್ ಹೊರಹಾಕುತ್ತದೆ. 45 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಉದ್ದಳತೆಗಳ ವಿಷಯಕ್ಕೆ ಬಂದರೆ 4,420 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,690 ಮಿ.ಮೀ ಎತ್ತರವಿದೆ.
ಸುರಕ್ಷತೆ ವಿಷಯಕ್ಕೆ ಬಂದರೆ ಎಲ್ಲಾ ವೇರಿಯೆಂಟ್‌ಗಳು ಈಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎರಡು ಸೈಡ್ ಏರ್‌ಬ್ಯಾಗ್‌ಗಳು ಮತ್ತು ಎರಡು ಕರ್ಟನ್ ಶೀಲ್ಡ್ ಏರ್‌ಬ್ಯಾಗ್‌ಗಳು ಸೇರಿದಂತೆ ಒಟ್ಟು 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಹೆಚ್ಚುವರಿ ಸೇಫ್ಟಿ ಫೀಚರ್‌ಗಳಲ್ಲಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಹೋಲ್ಡ್ ಅಸಿಸ್ಟ್, EBD ಯೊಂದಿಗೆ ABS, ಬ್ರೇಕ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸುಧಾರಿತ ಸುರಕ್ಷತಾ ಫೀಚರ್ಸ್ ಹೊಂದಿದೆ.


Click it and Unblock the Notifications








