TATA: 7-ಸೀಟರ್‌ನ ಜನಪ್ರಿಯ ಟಾಟಾ ಕಾರಿದು.. ಬಿಸಿ ದೋಸೆಯಂತೆ ಸೇಲ್ಸ್.. 13.29 ಲಕ್ಷ ರೂಪಾಯಿ!
ಟಾಟಾ ಸಫಾರಿ (Tata Safari) ಜನಮೆಚ್ಚಿದ ಎಸ್‌ಯುವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 2,375 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,548 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 53.42% ಬೆಳವಣಿಗೆಯಾಗಿದೆ.
ನೂತನ 'ಟಾಟಾ ಸಫಾರಿ' ಎಸ್‌ಯುವಿಯು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ರೂ.13.29 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಮಾರ್ಟ್ (Smart), ಪ್ಯೂರ್ ಎಕ್ಸ್ (Pure X), ಅಡ್ವೆಂಚರ್ ಎಕ್ಸ್ ಪ್ಲಸ್ (Adventure X Plus) ಹಾಗೂ ಅಕಂಪ್ಲಿಶ್ಡ್ ಎಕ್ಸ್ (Accomplished X) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸ್ಟೆಲ್ತ್ ಬ್ಲ್ಯಾಕ್, ಸೂಪರ್ನೋವಾ ಕಾಪರ್, ಫ್ರಾಸ್ಟ್ ವೈಟ್, ರಾಯಲ್ ಬ್ಲೂ, ಪ್ಯೂರ್ ಗ್ರೇ ಮತ್ತು ಕಾರ್ಬನ್ ಬ್ಲ್ಯಾಕ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.
ಈ ಎಸ್‌ಯುವಿಯು ಹೆಚ್ಚು ವಿಶಾಲವಾಗಿದೆ. 4,668 ಎಂಎಂ ಉದ್ದ, 1,922 ಎಂಎಂ ಅಗಲ ಹಾಗೂ 1,795 ಎಂಎಂ ಎತ್ತರವಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,741 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,825 ಕೆಜಿ ತೂಕವಿದೆ.

ನೂತನ 'ಟಾಟಾ ಸಫಾರಿ' ಬಲಿಷ್ಠವಾದ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5-ಲೀ. ಟರ್ಬೊ ಪೆಟ್ರೋಲ್ ಎಂಜಿನ್, 5,000 ಆರ್‌ಪಿಎಂನಲ್ಲಿ 170 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3,500 ಆರ್‌ಪಿಎಂನಲ್ಲಿ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 14.1 ರಿಂದ 16.8 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.
ಮತ್ತೊಂದು 2.0-ಲೀ. ಡೀಸೆಲ್ ಎಂಜಿನ್, 3,750 ಆರ್‌ಪಿಎಂನಲ್ಲಿ 170 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 3,500 ಆರ್‌ಪಿಎಂನಲ್ಲಿ 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 14 ರಿಂದ 16.9 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಹೆಚ್ಚಿನ ಲಗೇಜ್ ಕೊಂಡೊಯ್ಯಲು 420 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 175 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ.
ಇದು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 4-ಸ್ಪೋಕ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, 10-ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ಆಟೋಮೆಟಿಕ್ ಎಸಿಯನ್ನು ಹೊಂದಿದೆ.
ಹೊಸ 'ಟಾಟಾ ಸಫಾರಿ' ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಗ್ಲೋಬಲ್ ಎನ್‌ಸಿಎಪಿ ಹಾಗೂ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. 7-ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








