ಅತ್ಯಂತ ಅಗ್ಗದ AMT ಕಾರುಗಳು: 25 ಕಿಮೀ ಮೈಲೇಜ್, ಬಲಿಷ್ಠ ಎಂಜಿನ್: 5 ಲಕ್ಷವಿದ್ದರು ಸಾಕು!
ನೀವು ಹೊಸ ಕಾರನ್ನು ಖರೀದಿಸಲು ನಿರ್ಧರಿಸಿದಾಗ ಅತ್ಯಂತ ಮುಖ್ಯವಾಗಿ ಪರಿಗಣಿಸುವ ಅಂಶವೆಂದರೆ ಟ್ರಾನ್ಸ್ಮಿಷನ್ ಆಯ್ಕೆ. ಕಾರುಗಳ ಜಗತ್ತಿನಲ್ಲಿ ನೀವು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೋಡುತ್ತೀರ. ಮ್ಯಾನುವಲ್ (MT) ಟ್ರಾನ್ಸ್‌ಮಿಷನ್‌ಗಳು ಹಿಂದೆ ಜನಪ್ರಿಯವಾಗಿದ್ದರೂ, ಜನರು ಈಗ ಆಟೋಮೇಟೆಡ್ (AMT) ಟ್ರಾನ್ಸ್‌ಮಿಷನ್‌ಗಳನ್ನು ಹೆಚ್ಚಾಗಿ ಬಯಸುತ್ತಾರೆ. ಇದಕ್ಕೆ ಕಾರಣ ಮೆಟ್ರೋ ನಗರಗಳಲ್ಲಿ, ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿಕೊಂಡಾಗ AMT ಟ್ರಾನ್ಸ್‌ಮಿಷನ್ ತುಂಬಾ ಉಪಯುಕ್ತವಾಗಿರುತ್ತದೆ, ಇದು ಚಾಲಕರಿಗೆ ವರದಾನವೆಂದು ಹೇಳಬಹುದು.
ಆದರೆ ಮ್ಯಾನುವಲ್‌ಗಿಂತ ಆಟೋಮೇಟೆಡ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳು ದುಬಾರಿಯಾಗಿರುತ್ತವೆ. ನಿಮಗೆ ತಿಳಿಯದೆ ಮತ್ತೊಂದು ವಿಷಯವೆಂದರೆ ಕೆಲವು ಬ್ರ್ಯಾಂಡ್‌ಗಳು ಕಡಿಮೆ ಬೆಲೆಯಲ್ಲಿ ಆಟೋಮೇಟೆಡ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳನ್ನು ನೀಡುತ್ತಿವೆ. ಪ್ರಸ್ತುತ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಕಡಿಮೆ ಬೆಲೆಯ ಟಾಪ್ - 5 ಕಾರುಗಳ ಪಟ್ಟಿಯನ್ನು ಕೆಳಗೆ ನೋಡೋಣ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಮಾರುತಿ ಸುಜುಕಿ ಎಸ್-ಪ್ರೆಸ್ಸೊ VXi Opt AT ಭಾರತದ ಅತ್ಯಂತ ಕೈಗೆಟುಕುವ ಆಟೋಮೇಟೆಡ್ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ ಸುಮಾರು 4.75 ಲಕ್ಷ ರೂ. (ಎಕ್ಸ್-ಶೋರೂಂ) ಇದೆ. ಇದು 998 ಸಿಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಸುಮಾರು 25 ಕಿಮೀ / ಲೀಟರ್ ಮೈಲೇಜ್ ನೀಡುತ್ತದೆ. ಈ ಎಂಜಿನ್ 65 ಬಿಎಚ್ ಪವರ್ ಉತ್ಪಾದಿಸುತ್ತದೆ.
ಮಾರುತಿ ಸುಜುಕಿ ಆಲ್ಟೊ K10: ಮಾರುತಿ ಸುಜುಕಿ ಆಲ್ಟೊ K10 LXI/VXI AGS ಮತ್ತೊಂದು ಜನಪ್ರಿಯ ಬಜೆಟ್ ಸ್ನೇಹಿ ಆಟೋಮೇಟೆಡ್ ಕಾರಾಗಿದೆ. ಇದರ ಬೆಲೆಯು ಬೆಲೆ ಸುಮಾರು ರೂ. 5.6 ಲಕ್ಷ (ಎಕ್ಸ್-ಶೋರೂಂ) ಇದೆ. ಇದು 998cc ಪೆಟ್ರೋಲ್ ಎಂಜಿನ್‌ನೊಂದಿಗೆ, 67 bhp ಪವರ್ ಮತ್ತು 90 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಪೆಟ್ರೋಲ್ ವೇರಿಯೆಂಟ್ 24.9 ಕಿಮೀ ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕ್ವಿಡ್ 1.0: ಈ ಪಟ್ಟಿಯಲ್ಲಿ, ರೆನಾಲ್ಟ್ ಕ್ವಿಡ್ 1.0 AMT ಕಡಿಮೆ ಬೆಲೆಗೆ ಸಿಗುವ ಸ್ಪೋರ್ಟಿ SUV ಆಗಿದ್ದು, ರೂ. 5.99 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 999cc 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸುಮಾರು 69 hp ಪವರ್ ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿದ್ದು, ಸುಮಾರು 22 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ VXI AMT ಉತ್ತಮ ಮೈಲೇಜ್ ಮತ್ತು ಸುಗಮ ಚಾಲನೆಗೆ ಹೆಸರುವಾಸಿಯಾಗಿದೆ. ಬೆಲೆ ಸುಮಾರು 5.60 ಲಕ್ಷ ರೂ. (ಎಕ್ಸ್ ಶೋ ರೂಂ) ಇದೆ. ಇದು 998cc ಪೆಟ್ರೋಲ್ ಎಂಜಿನ್ ಹೊಂದಿದ್ದು, 68 hp ಪವರ್ ಮತ್ತು 91 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಸುಮಾರು 26.6 kmpl ಮೈಲೇಜ್ ನೀಡುತ್ತದೆ.

ಟಾಟಾ ಟಿಯಾಗೊ: ಟಾಟಾ ಟಿಯಾಗೊ XTA AMT ಕೂಡ ಈ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ. ಇದು 1.2-ಲೀಟರ್ (1199cc) ಪೆಟ್ರೋಲ್ ಎಂಜಿನ್‌ನೊಂದಿಗೆ ಸುಮಾರು 86 hp ಪವರ್ ಉತ್ಪಾದಿಸುತ್ತದೆ. XTA AMT ಆಟೋಮೇಟೆಡ್ ವೇರಿಯೆಂಟ್ ಬೆಲೆಯು ರೂ. 7 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ಸುಮಾರು 19 ರಿಂದ 20 kmpl ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








