Best Budget cars: ಮಧ್ಯಮ ವರ್ಗದ ಫೇವರೆಟ್: 5 ಲಕ್ಷಕ್ಕಿಂತ ಕಮ್ಮಿ ಬೆಲೆ... ಬೊಂಬಾಟ್ ಮೈಲೇಜ್ !
ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ SUV ಗಳು ಪ್ರಾಬಲ್ಯ ಸಾಧಿಸುತ್ತಿದ್ದರೂ ಭಾರತೀಯರು ಇನ್ನೂ ಹ್ಯಾಚ್‌ಬ್ಯಾಕ್ ಮೇಲಿನ ಪ್ರೀತಿಯನ್ನು ಬಿಟ್ಟಿಲ್ಲ. ನೀವು ಮಧ್ಯಮ ವರ್ಗದ ಕುಟುಂಬದವರಾಗಿದ್ದರೆ ಸುಲಭವಾಗಿ ಕಾರು ಖರೀದಿಸಬಹುದಾಗಿದೆ. ನಿಮಗೆ ಕಮ್ಮಿ ಬೆಲೆಯ ಹ್ಯಾಚ್‌ಬ್ಯಾಕ್‌ಗಳು ಪ್ರಾಯೋಗಿಕತೆ, ಕೈಗೆಟುಕುವಿಕೆ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ನಗರ ಪರಿಸ್ಥಿತಿಗಳಲ್ಲಿ ಚಾಲನೆಯ ಸುಲಭತೆಯನ್ನು ನೀಡುತ್ತವೆ. ಮಾರುತಿ ಸುಜುಕಿ ಮತ್ತು ಟಾಟಾದಂತಹ ಪ್ರಮುಖ ಕಾರು ಬ್ರಾಂಡ್‌ಗಳು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮುಂಚೂಣಿಯಲ್ಲಿವೆ.
ಟಾಟಾ ಟಿಯಾಗೊ: ಟಾಟಾ ಟಿಯಾಗೊ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದ್ದು, ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 4.57 ಲಕ್ಷವಿದೆ. ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಇದು ಬೆಸ್ಟ್ ಕಾರಾಗಿದೆ. 1.2 ಲೀಟರ್ ಎಂಜಿನ್‌ನಿಂದ ಚಾಲಿತವಾಗಿದ್ದು, CNG ಎಂಜಿನ್ ಆಯ್ಕೆಯು ಸಿಗುತ್ತದೆ. 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ತನ್ನ ಬಲಿಷ್ಠವಾದ ದೇಹ ಮತ್ತು ಉತ್ತಮ ಸುರಕ್ಷತೆಯಿಂದಾಗಿ ಖರೀದಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಮಾರುತಿ ಸೆಲೆರಿಯೊ: ಮಾರುತಿ ಸೆಲೆರಿಯೊ ಸಣ್ಣ ಕಾರಾದರೂ, ಭಾರತೀಯ ಮಾರುಕಟ್ಟೆಯಲ್ಲಿ ತನಗೆಂದೆ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚಿನ ಮೈಲೇಜ್ ನೀಡುವ ಕಾರನ್ನು ನೀವು ಬಯಸಿದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 4.69 ಲಕ್ಷವಿದೆ. ತನ್ನ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳಲ್ಲಿ ಒಂದಾಗಿದ್ದು, ಬಜೆಟ್ ಬೆಲೆಯ ಬೆಸ್ಟ್ ಆಯ್ಕೆಯಾಗಿದೆ.
ಮಾರುತಿ ಆಲ್ಟೊ ಕೆ10: ಮಾರುತಿ ಆಲ್ಟೊ ಕೆ10 ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ಮೊದಲ ಬಾರಿಗೆ ಖರೀದಿಸುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಯೋಗ್ಯ ಸ್ಥಳಾವಕಾಶ, ಪರಿಣಾಮಕಾರಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿಯೂ ಸಿಗುತ್ತದೆ. ಆಲ್ಟೊ ಕೆ10 ಎಸ್‌ಟಿಡಿ(ಒ) ವೇರಿಯೆಂಟ್ ಎಕ್ಸ್ - ಶೋರೂಂ ಬೆಲೆ ರೂ. 3.69 ಲಕ್ಷದಿಂದ ಪ್ರಾರಂಭವಾಗುತ್ತದೆ.

ರೆನಾಲ್ಟ್ ಕ್ವಿಡ್: ರೆನಾಲ್ಟ್ ಕ್ವಿಡ್ ಒಂದು ಆರಂಭಿಕ ಹಂತದ ಹ್ಯಾಚ್‌ಬ್ಯಾಕ್ ಆಗಿದ್ದು, ಕ್ವಿಡ್ 1.0 RXE ವೇರಿಯೆಂಟ್ ಬೆಲೆಯು ಈಗ ರೂ. 4.29 ಲಕ್ಷಕ್ಕೆ (ಎಕ್ಸ್ ಶೋರೂಂ) ಇಳಿದಿದೆ. ಇದರ ಎತ್ತರದ ನೋಟ ಮತ್ತು ಕಡಿಮೆ ಬೆಲೆ ಮೊದಲ ಬಾರಿಯ ಖರೀದಿದಾರರನ್ನು ಆಕರ್ಷಿಸುತ್ತದೆ. ಇದು ಯೋಗ್ಯವಾದ ಸ್ಥಳಾವಕಾಶ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ. ಕಡಿಮೆ ಬಜೆಟ್, ಹೆಚ್ಚಿನ ಮೈಲೇಜ್ ನೀಡುವ ಕಾರಾಗಿದೆ.
ಮಾರುತಿ ಎಸ್-ಪ್ರೆಸ್ಸೊ: ಮಾರುತಿ ಎಸ್-ಪ್ರೆಸ್ಸೊ ಕಡಿಮೆ ಬೆಲೆಯಿಂದಾಗಿ, ಇದು ಬಜೆಟ್ ಖರೀದಿದಾರರಲ್ಲಿ ಬೇಗನೆ ಜನಪ್ರಿಯವಾಗುತ್ತಿದೆ. ಯೋಗ್ಯವಾದ ಒಳಾಂಗಣ ಸ್ಥಳ, ಹೆಚ್ಚಿನ ಉಪಯುಕ್ತತೆ ಮತ್ತು ಬಳಕೆಯ ಸುಲಭತೆಯನ್ನು ಹೊಂದಿದೆ. ಇದರ STD(O) ವೇರಿಯೆಂಟ್ ಆರಂಭಿಕ ಎಕ್ಸ್-ಶೋರೂಂ ಬೆಲೆ ಕೇವಲ 3.49 ಲಕ್ಷ ರೂ. ಇದೆ. ಗ್ರಾಹಕರು 1.0-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ಗಳ ನಡುವೆ ಆಯ್ಕೆ ಮಾಡಬಹುದು.

ಬಜೆಟ್ ಬೆಲೆಯಲ್ಲಿ ಸಿಗುವಂತಹ ಕಾರುಗಳನ್ನು ಈಗ ಬಹುತೇಕ ಎಲ್ಲಾ ಬ್ರಾಂಡ್‌ಗಳು ನೀಡುತ್ತಿವೆ. ಅನೇಕರು ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ಮತ್ತು ತಮಗೆ ಹೊರೆಯಾಗದ ಕಾರುಗಳನ್ನು ಹುಡುಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಾರು ಕಂಪನಿಗಳು ಕೆಳ ವಿಭಾಗದಲ್ಲಿ ಉತ್ತಮ ಆಯ್ಕೆಗಳನ್ನು ನೀಡುತ್ತಿವೆ. ಸದ್ಯ ಮಾರಾಟದಲ್ಲಿರುವ ಬೆಸ್ಟ್ ಆಯ್ಕೆಗಳನ್ನು ಮೇಲೆ ತಿಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications