Best CNG Cars: CNG ಕಾರುಗಳ ಪಟ್ಟಿ: ನಿಮ್ಮ ಬಜೆಟ್ 10 ಲಕ್ಷಕ್ಕಿಂತ ಕಮ್ಮಿನಾ? ಇವು ಬೆಸ್ಟ್ ನೋಡಿ!

ಇಂಧನ ಬೆಲೆಗಳು ಗಗನಕ್ಕೇರಿರುವುದರಿಂದ ಎಲೆಕ್ಟ್ರಿಕ್, ಹೈಬ್ರಿಡ್ ಹಾಗೂ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಸಿಎನ್‌ಜಿ ಕಾರುಗಳನ್ನು ಜನ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ, ಇದಕ್ಕೆ ಮುಖ್ಯ ಕಾರಣ ವಾಹನ ತಯಾರಕರು ಈಗ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ಗಳನ್ನು ನೀಡುತ್ತಿದ್ದಾರೆ. ಮೊದಲಿನಂತಲ್ಲದೆ ಈಗ ಸಿಎನ್‌ಜಿ ಕಾರುಗಳು ತುಂಬಾ ಸೌಕರ್ಯಯುತ, ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಸಿಎನ್‌ಜಿ ಬೆಲೆಯು ಗ್ರಾಹಕರ ಹಣ ಉಳಿಸುತ್ತಿದೆ. ನೀವು ಕೂಡ ಸಿಎನ್‌ಜಿ ಕಾರೊಂದನ್ನು ಖರೀದಿಸಲು ಬಯಸುತ್ತಿದ್ದರೆ ಟಾಪ್-5 ಕಾರುಗಳ ಪಟ್ಟಿ ಇಲ್ಲಿದೆ.

ಮಾರುತಿ ಸುಜುಕಿ ಡಿಜೈರ್: ಮಾರುತಿ ಸುಜುಕಿ ಡಿಜೈರ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಇಂಧನ-ಸಮರ್ಥ ಕಾರುಗಳಲ್ಲಿ ಒಂದಾಗಿದೆ. ಇದರ CNG ವೇರಿಯೆಂಟ್ ಆರಂಭಿಕ ಎಕ್ಸ್-ಶೋರೂಂ ಬೆಲೆಯು ರೂ.8.03 ಲಕ್ಷವಿದೆ. ಡಿಜೈರ್ 1.2L Z-ಸಿರೀಸ್ 3-ಸಿಲಿಂಡರ್ NA ಎಂಜಿನ್‌ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. 68.79 bh ಪವರ್ ಮತ್ತು 101.8 Nm ಟಾರ್ಕ್ ಉತ್ಪಾದಿಸುತ್ತದೆ. 33.73 ಕಿ.ಮೀ ಮೈಲೇಜ್ ನೀಡುತ್ತದೆ.

best-cng-cars-under-10-lakh-in-india

ಟಾಟಾ ಪಂಚ್: ಟಾಟಾದ ಮೈಕ್ರೋ ಎಸ್‌ಯುವಿಯಾಗಿರುವ ಪಂಚ್, CNG ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಟಾಟಾ ಪಂಚ್‌ನ CNG ವೇರಿಯೆಂಟ್ ರೂ.6.69 ಲಕ್ಷದ ಆರಂಭಿಕ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಪಂಚ್ CNG ವೇರಿಯೆಂಟ್ 1.2L NA 3-ಸಿಲಿಂಡರ್ ಎಂಜಿನ್‌ನೊಂದಿಗೆ 72.3 bh ಪವರ್ ಮತ್ತು 103 Nm ಟಾರ್ಕ್ ನೀಡುತ್ತದೆ. ಇದು ಮ್ಯಾನುವಲ್ ಅಥವಾ AMT ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ.

ಹುಂಡೈ ಎಕ್ಸ್‌ಟರ್: ಹುಂಡೈನ ಮೈಕ್ರೋ-ಎಸ್‌ಯುವಿಯಾಗಿರುವ ಎಕ್ಸ್‌ಟರ್, 67.72 ಬಿಎಚ್‌ಪಿ ಮತ್ತು 95.2 ಎನ್‌ಎಂ ಟಾರ್ಕ್ ಉತ್ಪಾದಿಸುವ 1.2 ಲೀಟರ್ NA 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಹೊಸ ಹುಂಡೈ ಎಕ್ಸ್‌ಟರ್‌ನ ಸಿಎನ್‌ಜಿ ವೇರಿಯೆಂಟ್ ಆರಂಭಿಕ ಎಕ್ಸ್-ಶೋರೂಂ ಬೆಲೆಯು ರೂ. 6.95 ಲಕ್ಷವಿದೆ.

best-cng-cars-under-10-lakh-in-india

ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ ಅನ್ನು ಸಿಎನ್‌ಜಿ ರೂಪಾಂತರಗಳಲ್ಲಿಯೂ ನೀಡಲಾಗುತ್ತದೆ. ಕಂಪನಿಯು ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ರೆಟ್ರೋಫಿಟೆಡ್ ಸಿಎನ್‌ಜಿಯನ್ನು ನೀಡಲು ನಿರ್ಧರಿಸಿದೆ. CNG ಕಿಟ್ ಆಯ್ಕೆಯು 1.0 ಲೀಟರ್ NA ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ, ಇದು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಎಲ್ಲಾ CNG ಕಿಟ್‌ಗಳನ್ನು ಸರ್ಕಾರದಿಂದ ಅನುಮೋದಿತ ಮಾರಾಟಗಾರರು ರೂ.74,999 ಹೆಚ್ಚುವರಿ ವೆಚ್ಚದಲ್ಲಿ ಮರುಹೊಂದಿಸಲಾಗುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ₹5.61 ಲಕ್ಷದ ಆರಂಭಿಕ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ.

ಟೊಯೋಟಾ ಗ್ಲಾಂಝಾ: ಟೊಯೋಟಾ ಗ್ಲಾಂಝಾವನ್ನು CNG ಯೊಂದಿಗೆ ಸಹ ನೀಡಲಾಗುತ್ತದೆ. ಈ ಕಾರು 1.2 ಲೀಟರ್ 4-ಸಿಲಿಂಡರ್ NA K12N ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಸಿಗುತ್ತದೆ. ಇದರ ಎಂಜಿನ್ 76.4 bh ಪವರ್ ಮತ್ತು 98.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG-ಸಜ್ಜಿತ ಟೊಯೋಟಾ ಗ್ಲಾಂಝಾದ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ.8.17 ಲಕ್ಷವಿದೆ.

best-cng-cars-under-10-lakh-in-india

ಮೇಲೆ ತಿಳಿಸಲಾದ ಕಾರುಗಳು ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಜನಪ್ರಿಯವಾಗಿವೆ, ಬಜೆಟ್‌ನಲ್ಲಿ CNG ವಾಹನವನ್ನು ಖರೀದಿಸಲು ಬಯಸುವವರಿಗೆ ಇವು ಉತ್ತಮ ಆಯ್ಕೆಗಳಾಗಿವೆ. ಒಂದು ವೇಳೆ ನೀವು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯ CNG ಕಾರನ್ನು ಖರೀದಿಸಲು ಬಯಸಿದರೆ, ಪರಿಗಣಿಸಬೇಕಾದ ಪ್ರಮುಖ ಆಯ್ಕೆಗಳು ಇವಾಗಿವೆ. ಈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, February 22, 2026, 10:20 [IST]
English summary
Best cng cars under 10 lakh in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+