Maruti: ಬೆಲೆ ಬರೀ ಇಷ್ಟೇನಾ? 30 ಲಕ್ಷ ಮಂದಿ ಮುಗಿಬಿದ್ದು ಖರೀದಿ: 33.73 ಕಿ.ಮೀ ಮೈಲೇಜ್!

ಭಾರತದಲ್ಲಿ ಎಸ್‌ಯುವಿಗಳು ಬಂದ ನಂತರ ಸೆಡಾನ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಈ ಒಂದು ಸೆಡಾನ್ ಕಾರು ಎಸ್‌ಯುವಿಗಳನ್ನು ಮೀರಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಎಸ್‌ಯುವಿಗಳ ಅಬ್ಬರದ ನಡೆಯುವೆಯೂ ಈ ಸಣ್ಣ ಕಾಂಪ್ಯಾಕ್ಟ್ ಸೆಡಾನ್ ಕಾರು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 30 ಲಕ್ಷ ಕಾರುಗಳು ಮಾರಾಟವಾಗಿವೆ. ಹೌದು, ಭಾರತದಲ್ಲಿ ಮಾರುತಿ ಡಿಜೈರ್ (Maruti Suzuki Dzire) ಕಾಂಪ್ಯಾಕ್ಟ್ ಸೆಡಾನ್ 30 ಲಕ್ಷ (3 ಮಿಲಿಯನ್) ಮಾರಾಟದ ಗಡಿಯನ್ನು ದಾಟಿದೆ ಎಂದು ಮಾರುತಿ ಸುಜುಕಿ (Maruti Suzuki) ಘೋಷಿಸಿದೆ. ಡಿಜೈರ್ ಮಾಲೀಕರಲ್ಲಿ ಸುಮಾರು ಅರ್ಧದಷ್ಟು ಜನರು ಮೊದಲ ಬಾರಿಯ ಕಾರು ಖರೀದಿದಾರರಾಗಿರುವುದು ವಿಶೇಷ.

2008 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಮಾರುತಿ ಡಿಜೈರ್ ಈಗ 4ನೇ ಜೆನರೇಷನ್ ಮಾಡಲ್‌ನೊಂದಿಗೆ ಮುಂದುವರಿಯುತ್ತಿದೆ. ಹೊಸ ಅಪ್‌ಡೇಟ್‌ ಪಡೆದ ಬಳಿಕ 2025ರಲ್ಲಿ ಬರೋಬ್ಬರಿ 2.14 ಲಕ್ಷಕ್ಕೂ ಹೆಚ್ಚು ಮಂದಿ ಖರೀದಿಸಿದ್ದು, ಕಂಪನಿಯ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಲು ಕಾರಣವಾಗಿರುವ ಪ್ರಮುಖಾಂಶಗಳನ್ನು ಇಲ್ಲಿ ನೋಡೋಣ.

best-compact-sedan-maruti-suzuki-dzire-price-mileage-safety

ಸುರಕ್ಷತೆ: ಒಂದು ಕಾಲದಲ್ಲಿ ಸುರಕ್ಷೆತೆಯಲ್ಲಿ ಕೇವಲ 2 ಸ್ಟಾರ್‌ಗಳೊಂದಿಗೆ ಕಳೆಪೆ ಕಾರು ಎನ್ನಿಸಿಕೊಂಡಿದ್ದ ಡಿಜೈರ್, ಈಗ 4ನೇ ಜೆನ್ ಮಾಡಲ್‌ನೊಂದಿಗೆ ಭಾರತ್ NCAP ಮತ್ತು ಗ್ಲೋಬಲ್ NCAP ಎರಡರಿಂದಲೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಪ್ರಯಾಣಿಕರಿಗೆ ಗರಿಷ್ಟ ರಕ್ಷಣೆ ನೀಡುವುನ್ನು ಸಾಭೀತುಪಡಿಸಿದೆ. ಜೊತೆಗೆ ಡಿಜೈರ್ ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದೆ.

ಮಾರುತಿ ಸುಜುಕಿ ಡಿಜೈರ್‌ನಲ್ಲಿ ಪ್ರಯಾಣಿಕರ ರಕ್ಷಣೆ ಖಚಿತಪಡಿಸಲು ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್‌ನೊಂದಿಗೆ ಎಬಿಎಸ್ ಮತ್ತು ISO ಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು ಸೇರಿದಂತೆ 15 ಕ್ಕೂ ಹೆಚ್ಚು ಸುರಕ್ಷತಾ ಫೀಚರ್‌ಗಳನ್ನು ಒದಗಿಸಲಾಗಿದೆ.

best-compact-sedan-maruti-suzuki-dzire-price-mileage-safety

ಬೆಲೆ ಮತ್ತು ಮೈಲೇಜ್: ಹೊಸ ಮಾರುತಿ ಸುಜುಕಿ ಡಿಜೈರ್ ಪ್ರಸ್ತುತ ಕೇವಲ ರೂ. 6.25 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇಷ್ಟು ಕಡಿಮೆ ಬೆಲೆ ಮಾತ್ರವಲ್ಲದೆ ಮೈಲೇಜ್ ವಿಷಯದಲ್ಲೂ ಗ್ರಾಹಕರ ಮೆಚ್ಚುಗೆ ಪಡೆದುಕೊಂಡಿದೆ. ಕಂಪನಿಯು ಡಿಜೈರ್ ಅನ್ನು ತನ್ನ ವಿಭಾಗದಲ್ಲಿ ಅತ್ಯಂತ ಇಂಧನ-ಸಮರ್ಥ ಸೆಡಾನ್ ಕಾರು‌ಗಳಲ್ಲಿ ಒಂದೆಂದು ಸ್ಥಾನೀಕರಿಸಿದೆ. ಇದು ವೆಚ್ಚ-ಪ್ರಜ್ಞೆಯ ಭಾರತೀಯ ಗ್ರಾಹಕರಲ್ಲಿ ಬಲವಾದ ಆಕರ್ಷಣೆಯನ್ನು ಹೊಂದಿದೆ.

ಹೊಸ ಡಿಜೈರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ, ಇದು 82 ಪಿಎಸ್ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಹಾಗೂ 5-ಸ್ಪೀಡ್ AMT ಆಯ್ಕೆಗಳಲ್ಲಿ ನೀಡಲಾಗುತ್ತದೆ. ಐಚ್ಛಿಕ ಸಿಎನ್‌ಜಿ ಕೂಡ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಲಭ್ಯವಿದೆ. ಪೆಟ್ರೋಲ್‌ನಲ್ಲಿ 24.79 ಕಿ.ಮೀ ಮತ್ತು ಸಿಎನ್‌ಜಿನಲ್ಲಿ 33.73 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

best-compact-sedan-maruti-suzuki-dzire-price-mileage-safety

ಫೀಚರ್ಸ್ ಅಪ್‌ಗ್ರೇಡ್: ಪ್ರಸ್ತುತ ಡಿಜೈರ್ ಎಲೆಕ್ಟ್ರಿಕ್ ಸನ್‌ರೂಫ್, 360-ಡಿಗ್ರಿ HD ಕ್ಯಾಮೆರಾ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 22.86 ಸೆಂ.ಮೀ (9-ಇಂಚಿನ) ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಫೀಚರ್‌ಗಳನ್ನು ನೀಡುತ್ತಿರುವುದರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರು ಆಕರ್ಷಕ ಫೀಚರ್ಸ್ ಪಡೆಯುತ್ತಿದ್ದು, ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ.

ತಂತ್ರಜ್ಞಾನ-ಬುದ್ಧಿವಂತ ನಗರ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಅಲೆಕ್ಸಾ ಸ್ಕಿಲ್ ಮೂಲಕ ಸ್ಮಾರ್ಟ್‌ವಾಚ್ ಏಕೀಕರಣ ಮತ್ತು ವಾಯಿಸ್-ಅಸಿಸ್ಟ್ ಕಾರ್ಯಗಳನ್ನು ಸಪೋರ್ಟ್ ಮಾಡುವ ನೆಕ್ಸ್ಟ್ ಜನರೇಷನ್ ಸುಜುಕಿ ಕನೆಕ್ಟ್ ಮೂಲಕ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇವೆಲ್ಲಾ ವಿಷಯಗಳಿಂದ ಈ ಕಾರಿಗೆ ತುಂಬಾ ಡಿಮ್ಯಾಂಡ್ ಇದೆ, ಮಾರಾಟವು ದಾಖಲೆಯಲ್ಲಿ ಸಂಖ್ಯೆಯಲ್ಲಿ ಆಗುತ್ತಿದೆ.

More from DriveSpark

Article Published On: Sunday, March 15, 2026, 19:30 [IST]
English summary
Best compact sedan maruti suzuki dzire price mileage safety
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+