Skoda: ಹೊಸ ಸ್ಕೋಡಾ SUV ಇಷ್ಟು ಕಮ್ಮಿ ಬೆಲೆಗೆ ಸಿಕ್ಕರೆ ಬಿಡ್ತಾರಾ? ಫುಲ್ ಡಿಮ್ಯಾಂಡ್

ಪ್ರಮುಖ ಕಾರು ತಯಾರಕರಾದ ಸ್ಕೋಡಾ, ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಿದೆ. ತನ್ನ ಸ್ಟೈಲಿಷ್ ಹಾಗೂ ರಗಡ್ ಆಗಿ ಕಾಣುವ 'ಸ್ಕೋಡಾ ಕೈಲಾಕ್' ಎಸ್‌ಯುವಿ ಮೂಲಕ ಭಾರತದಲ್ಲಿ ಗ್ರಾಹಕರ ಮನ ಗೆದ್ದಿದೆ. ಈ ಎಸ್‌ಯುವಿ ಫುಲ್‌ ಡಿಮ್ಯಾಂಡ್ ಪಡೆದುಕೊಂಡು ಮುನ್ನುಗ್ಗುತ್ತಿದ್ದು, ಕಂಪನಿಗೆ ಗ್ರಾಹಕರಿಂದ ಬರುತ್ತಿರುವ ಬುಕಿಂಗ್ಸ್ ಪೂರೈಸಲು ಬರೋಬ್ಬರಿ 50,000 ಯೂನಿಟ್ ಎಸ್‌ಯುವಿಗಳನ್ನು ಉತ್ಪಾದಿಸುವ ಮೂಲಕ ಹೊಸ ಮೈಲಿಗಲ್ಲನ್ನು ದಾಟಿದೆ. 2025 ರಲ್ಲಿ ಕಂಪನಿಯ ಶೇ36 ರಷ್ಟು ಬೆಳವಣಿಗೆಗೆ ಕೈಲಾಕ್ ಪ್ರಮುಖ ಕೊಡುಗೆ ನೀಡಿದೆ ಎಂದು ಸ್ಕೋಡಾ ಹೇಳಿಕೊಂಡಿದೆ.

ಸ್ಕೋಡಾ ಕೈಲಾಕ್‌ನ 50,000 ಯೂನಿಟ್‌ ಕಾರುಗಳ ಮೈಲಿಗಲ್ಲು ಗ್ರಾಹಕರು ಈ ಎಸ್‌ಯುವಿ ಮೇಲೆ ತೋರಿಸಿರುವ ಆಳವಾದ ನಂಬಿಕೆ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ಕೈಲಾಕ್ ಅನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸಲು, ಕಂಪನಿಯು ಚಕನ್ ಸ್ಥಾವರದಲ್ಲಿರುವ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸಿರುವುದಾಗಿ ಬ್ರಾಂಡ್ ಸಿಇಒ ಪಿಯೂಷ್ ಅರೋರಾ ತಿಳಿಸಿದ್ದಾರೆ.

best-sub-4-meter-suv-skoda-kylaq-price-features-mileage

ಸ್ಕೋಡಾ ಕೈಲಾಕ್ ವಿಶೇಷತೆಗಳು

ಕಂಪನಿಯ ಪ್ರಕಾರ 'ಮೇಕ್ ಇನ್ ಇಂಡಿಯಾ'ಗೆ ಅನುಗುಣವಾಗಿ ಸ್ಕೋಡಾ ಕೈಲಾಕ್ ಅನ್ನು ಸ್ಥಳೀಯವಾಗಿ ತಯಾರಿಸಲಾಗುತ್ತಿದೆ. ಸುರಕ್ಷತೆ, ಸೌಕರ್ಯ, ಗುಣಮಟ್ಟ ಮತ್ತು ಜಾಗತಿಕ ವಿನ್ಯಾಸ ಎಂಬ ನಾಲ್ಕು ಪ್ರಧಾನ ಅಂಶಗಳ ಮೇಲೆ ಈ ಕಾರನ್ನು ನಿರ್ಮಿಸಲಾಗಿದೆ. ಹೊಚ್ಚ ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಸ್ಕೋಡಾ ಎಸ್‌ಯುವಿಯಾಗಿದೆ.

ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಬೇಸ್ ವೇರಿಯೆಂಟ್ ಬೆಲೆಯು ರೂ. 7.59 ಲಕ್ಷವಿದ್ದು, ಟಾಪ್ ವೇರಿಯೆಂಟ್ ಬೆಲೆ ರೂ. 12.99 ಲಕ್ಷವಿದೆ (ಎಕ್ಸ್ ಶೋರೂಂ ಬೆಲೆಗಳು). ಈ ಕಾರಿನಲ್ಲಿ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 115 ಪಿಎಸ್ ಪವರ್ ಹಾಗೂ 178 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

best-sub-4-meter-suv-skoda-kylaq-price-features-mileage

ಸ್ಕೋಡಾ ಕೈಲಾಕ್‌ನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸೆಮಿ-ಲೆದರ್ ಸೀಟ್ ಅಪ್ ಹೋಲ್ಸ್ಟರಿಯನ್ನು ನೀಡಲಾಗಿದೆ. ಇದು ಸ್ಕೋಡಾ ಕುಶಾಕ್‌ನಲ್ಲಿ ಕಾಣುವಂತೆಯೇ ಸೆಂಟರ್ ಎಸಿ ವೆಂಟ್‌ಗಳ ಕೆಳಗೆ ಕ್ಲೈಮೆಟ್ ಕಂಟ್ರೋಲ್‌ಗಳ ಪ್ಯಾನಲ್ ನೀಡಲಾಗಿದೆ. ಕ್ಯಾಬಿನ್ ಸುತ್ತಲೂ ಸಿಲ್ವರ್ ಮತ್ತು ಕ್ರೋಮ್ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಮತ್ತು ಗ್ರೇ ಬಣ್ಣದ ಕ್ಯಾಬಿನ್ ಥೀಮ್ ಹೊಂದಿದೆ.

ಈ ಕಾರಿನಲ್ಲಿ 10.1 ಇಂಚಿನ ಟಚ್ ಸ್ಕ್ರೀನ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್, ಸಿಂಗಲ್-ಪ್ಯಾನ್ ಸನ್ ರೂಫ್ ಮತ್ತು 6-ವೇ ಫ್ರಂಟ್ ಫಂಕ್ಷನಲ್ ಸೀಟ್‌ಗಳನ್ನು ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ ಪ್ರತಿ ಲೀಟರ್‌ಗೆ 15 ರಿಂದ 18 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.

best-sub-4-meter-suv-skoda-kylaq-price-features-mileage

ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ-ಕೊಲಿಷನ್ ಬ್ರೇಕಿಂಗ್ ‌ನಂತಹ ಸೇಫ್ಟಿ ಫೀಚರ್ಸ್ ಪಡೆದಿದೆ. ಪ್ರಮುಖವಾಗಿ ಇದು ಭಾರತದ ಪ್ರಮುಖ ಕಾರುಗಳಾದ ಟಾಟಾ ನೆಕ್ಸಾನ್ (Tata Nexon)ಮತ್ತು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ (Mahindra XUV3X0) ಕಾರುಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 29, 2026, 19:48 [IST]
English summary
Best sub 4 meter suv skoda kylaq price features mileage
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+