ಭಾರತದಲ್ಲಿ ಕಮ್ಮಿ ಬೆಲೆಯ ಬೆಸ್ಟ್ ಟರ್ಬೊ-ಪೆಟ್ರೋಲ್ ಎಸ್‌ಯವಿಗಳು: ದರ ಕಡಿಮೆ, ಪವರ್ ಜಾಸ್ತಿ!

ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆಟೋಮೋಟೋಟಿವ್ ಉದ್ಯಮಗಳನ್ನು ಒಳಗೊಂಡೊರಿವ ದೇಶಗಳಲ್ಲಿ ಭಾರತವು ಒಂದು. ಇಲ್ಲಿ ಎಲ್ಲಾ ಐಷರಾಮಿಯಿಂದ ಹಿಡಿದು ಬಜೆಟ್ ಬೆಲೆಗೆ ಎಲ್ಲಾ ರೀತಿಯ ಕಾರುಗಳು ಸಿಗುತ್ತವೆ. ನೀವು ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಕಾಂಪ್ಯಾಕ್ಟ್ SUV ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅದು ಕೂಡ ನಿಮ್ಮ ಬಜೆಟ್ 9 ಲಕ್ಷವಾಗಿದ್ದರೆ ಹಲವಾರು ಆಯ್ಕೆಗಳಿವೆ. ಜನಪ್ರಿಯ ನೆಕ್ಸಾನ್‌ನಿಂದ ಕೈಲಾಕ್ ಮತ್ತು ಮ್ಯಾಗ್ನೈಟ್‌ವರೆಗೆ, ಪ್ರತಿಯೊಂದು ರೀತಿಯ ಖರೀದಿದಾರರಿಗೂ ಹೊಂದಿಕೊಳ್ಳುವ ಕಾರುಗಳು ಮಾರಾಟದಲ್ಲಿವೆ. ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿರುವ ಕೈಗೆಟುಕುವ ಕಾಂಪ್ಯಾಕ್ಟ್ SUV ಗಳ ಪಟ್ಟಿ ಇಲ್ಲಿದೆ.

ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರ ಬೆಲೆ ಹೆಚ್ಚು ಆಕರ್ಷಕವಾಗಿದೆ. ಕೇವಲ ರೂ. 8.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ನಗರ ಮತ್ತು ಹೆದ್ದಾರಿ ಚಾಲನೆಗಳನ್ನು ಸ್ವಲ್ಪ ಸುಲಭಗೊಳಿಸುತ್ತದೆ. CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸುಗಮ ಮತ್ತು ಆರಾಮ ಪ್ರಯಾಣ ಅನುಭವ ನೀಡುತ್ತದೆ.

best-turbo-petrol-suvs-with-low-cost-in-india

ಕಿಯಾ ಸೈರೋಸ್: ಸೈರೋಸ್ ವೆನ್ಯೂ, i20 ಮತ್ತು ಸೋನೆಟ್‌ನಂತೆಯೇ ಅದೇ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಆದರೆ ಕಿಯಾ ಸೈರೋಸ್ ಇವುಗಳಿಗೆ ಹೋಲಿಸಿದರೆ ಅತ್ಯಂತ ಕೈಗೆಟುಕುವ ಟರ್ಬೋ ಪೆಟ್ರೋಲ್ ಆಗಿದೆ. ಇದು NA ಪೆಟ್ರೋಲ್ ಎಂಜಿನ್‌ಗಳನ್ನು ನೀಡುವ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಮಾತ್ರ ಪಡೆಯುತ್ತದೆ (ಡೀಸೆಲ್ ಹೊರತುಪಡಿಸಿ). ಬೆಲೆಯು ರೂ. ರೂ. 8.67 ಲಕ್ಷದಿಂದ ಪ್ರಾರಂಭವಾಗುತ್ತದೆ.

ಟಾಟಾ ಪಂಚ್: ಇತ್ತೀಚಿನ ಪಂಚ್ ಹೆಚ್ಚಿನ ಟ್ರಿಮ್‌ಗಳಲ್ಲಿ ನೆಕ್ಸಾನ್‌ಗಿಂತ ಹೆಚ್ಚು ಶಕ್ತಿಶಾಲಿ 120hp ಪವರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ನೆಕ್ಸಾನ್‌ಗಿಂತ ಭಿನ್ನವಾಗಿ, ಈ ಸೆಟಪ್ ಅನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಇದು ಸಣ್ಣ SUV ಆಗಿದ್ದರು ಚಾಲನೆ ಮಾಡಲು ಹೆಚ್ಚು ಮೋಜು ನೀಡುತ್ತದೆ. ಬೆಲೆಯು ರೂ. 8.29 ಲಕ್ಷದಿಂದ ಪ್ರಾರಂಭವಾಗುತ್ತದೆ.

best-turbo-petrol-suvs-with-low-cost-in-india

ಸ್ಕೋಡಾ ಕೈಲಾಕ್: ಕೈಲಾಕ್ 1.0-ಲೀಟರ್ TSI ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 115hp ಪವರ್ ಮತ್ತು 178Nm ಟಾರ್ಕ್ ಉತ್ಪಾದಿಸುತ್ತದೆ. ಖರೀದಿದಾರರು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ನಡುವೆ ಆಯ್ಕೆ ಮಾಡಬಹುದು. ಎಂಜಿನ್ ಬಲವಾದ ಮತ್ತು ಶಕ್ತಿಯುತವಾಗಿದೆ, ಇದರ ಬೆಲೆಯು ರೂ. 7.59 ಲಕ್ಷದಿಂದ ಪ್ರಾರಂಭವಾಗುತ್ತದೆ.

ಟಾಟಾ ನೆಕ್ಸಾನ್: ನೆಕ್ಸಾನ್ ಪ್ರಸ್ತುತ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಅತ್ಯಂತ ಕೈಗೆಟುಕುವ ಕಾಂಪ್ಯಾಕ್ಟ್ SUV ಆಗಿದೆ. ಇದರ 1.2-ಲೀಟರ್ ಎಂಜಿನ್ 120hp ಪವರ್ ಮತ್ತು 170Nm ಟಾರ್ಕ್ ಉತ್ಪಾದಿಸುತ್ತದೆ. ಇದು ಮ್ಯಾನುವಲ್ AMT ಮತ್ತು DCT ಸೇರಿದಂತೆ ಬಹು ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಎಂಜಿನ್ ದೈನಂದಿನ ಚಾಲನೆಯಲ್ಲಿ ಸುಗಮವಾಗಿರುತ್ತದೆ, ಅಗತ್ಯವಿದ್ದಾಗ ಸ್ಪೋರ್ಟ್ ಮೋಡ್ ಹೆಚ್ಚುವರಿ ಪವರ್ ನೀಡುತ್ತದೆ. ಬೆಲೆಯು ರೂ. 7.31 ಲಕ್ಷದಿಂದ ಪ್ರಾರಂಬವಾಗುತ್ತದೆ.

best-turbo-petrol-suvs-with-low-cost-in-india

ಇವು ಪ್ರಸ್ತುತ ಭಾರತದಲ್ಲಿ ಅತ್ಯಂತ ಕೈಗೆಟುಕುವ ಟರ್ಬೊ-ಪೆಟ್ರೋಲ್ SUV ಗಳಾಗಿವೆ. ನೀವು ಕೂಡ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಕಾಂಪ್ಯಾಕ್ಟ್ SUV ಖರೀದಿಸಲು ಯೋಜಿಸುತ್ತಿದ್ದರೆ, ಹತ್ತು ಲಕ್ಷಕ್ಕಿಂತ ಕಮ್ಮಿ ಬೆಲೆಯಲ್ಲಿ ಮನೇಲಿನ ಕಾರುಗಳನ್ನು ಖರೀದಿಸಬಹುದು, ನಿಮಗೆ ಇನ್ನೂ ಹಲವಾರು ಆಯ್ಕೆಗಳಿವೆ ಆದರೆ ಬೆಲೆ ಹತ್ತು ಲಕ್ಷ ದಾಟುತ್ತದೆ. ಇವು ನಿಜವಾಗಿಯೂ ಕೈಗೆಟುಕುವ ಬೆಲೆಗೆ ಬೆಸ್ಟ್ ಆಯ್ಕೆಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 25, 2026, 10:03 [IST]
English summary
Best turbo petrol suvs with low cost in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+