BMW: ಭಾರತದಲ್ಲಿ i7 ಸೆಡಾನ್ ಜೋರು: 1,000 ಕಾರುಗಳು ಡೆಲಿವರಿ... ಇದಕ್ಕೆ ಸೆಲೆಬ್ರಿಟಿಗಳು ಕೂಡ ಫಿದಾ!
ಬಿಎಂಡಬ್ಲ್ಯು ಇಂಡಿಯಾ (BMW India) ತನ್ನ ಜನಪ್ರಿಯ ಬಿಎಂಡಬ್ಲ್ಯು ಐ7 (BMW i7) ಐಷಾರಾಮಿ ಎಲೆಕ್ಟ್ರಿಕ್ ಕಾರನ 1,000 ಯೂನಿಟ್‌ಗಳನ್ನು ಭಾರತದಲ್ಲಿ ಡೆಲಿವರಿ ನೀಡಿರುವುದಾಗಿ ತಿಳಿಸಿದೆ. ಈ ಮಾಡುವ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರನ್ನು ಸೆಳೆದಿರುವ ಈ ಕಾರು, ಸದ್ಯ ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಅಷ್ಟಕ್ಕೂ ಈ ಕಾರಿನಲ್ಲಿ ಅಂತಹದ್ದೇನಿದೆ, ಇದರ ವಿಶೇಷತೆಗಳೇನು, ಬೆಲೆಯೆಷ್ಟು ಬನ್ನಿ ನೋಡೋಣ.
ಭಾರತದ ಅನೇಕ ಸೆಲೆಬ್ರಿಟಿಗಳಿಗೆ BMW i7 ಐಷಾರಾಮಿ ಸೆಡಾನ್ ನಾವೀನ್ಯತೆಯ ಸಂಕೇತವಾಗಿದೆ. ಈ ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ ಹೊಂದಿರುವ ಕೆಲವು ಗಮನಾರ್ಹ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಆಕರ್ಷಕ ಕಾರುಗಳಿಗೆ ಹೆಸರುವಾಸಿಯಾಗಿದ್ದಾರೆ, ಇತ್ತೀಚೆಗೆ ಕಪ್ಪು ಬಣ್ಣದ BMW i7 ನೊಂದಿಗೆ ಕಾಣಿಸಿಕೊಂಡಿದ್ದರು, ಮೂಲಗಳ ಪ್ರಕಾರ 2025 ರಲ್ಲಿ ಈ ಕಾರು ಖರೀದಿಸಿದ್ದಾರೆ.

ಬಾಲಿವುಡ್‌ನ ಐಕಾನಿಕ್ ಸೂಪರ್‌ಸ್ಟಾರ್ ರೇಖಾ ಅವರು BMW i7 ಅನ್ನು ಹೊಂದಿದ್ದಾರೆ, ಪ್ರಸಿದ್ಧ ಗಾಯಕ ಸಲೀಮ್ ಮರ್ಚೆಂಟ್ ಇತ್ತೀಚೆಗೆ ತಮ್ಮ 55ನೇ ಹುಟ್ಟುಹಬ್ಬದಂದು BMW i7 ಅನ್ನು ಖರೀದಿಸಿದ್ದರು. ತಮಿಳು ನಟ ಧನುಷ್ ಅವರು ಕೂಡ i7 ಖರೀದಿಸಿದ್ದಾರೆ. ಈ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಜೀವನಶೈಲಿಯ ಭಾಗವಾಗಿ BMW i7 ಅನ್ನು ಬಳಸುತ್ತಿದ್ದಾರೆ. ಪ್ರೀಮಿಯಂ ಫೀಚರ್ಸ್ ಹಾಗೂ ಪರ್ಫಾಮೆನ್ಸ್ ಎರಡನ್ನೂ ಬಯಸುವವರಿಗೆ ಎದ್ದು ಕಾಣುವ ಆಯ್ಕೆಯಾಗಿದೆ.
BMW i7 ವಿಶೇಷತೆಗಳು
ಇದು ಬ್ರಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ ಆಗಿದ್ದು, ವಿಶೇಷ ಚಾಲನಾ ಅನುಭವ, ಐಷಾರಾಮಿ ವಿನ್ಯಾಸ ಮತ್ತು ಗಮನಾರ್ಹ ಪ್ರಭಾವ ಬೀರುವ ಪವರ್‌ಫುಲ್ ಡ್ರೈವ್ ಡೈನಾಮಿಕ್ಸ್ ನೀಡುತ್ತದೆ. ಇದರ ಹೆಡ್‌ಲೈಟ್‌ಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೇಲ್ಭಾಗದಲ್ಲಿ ಹಗಲಿನಲ್ಲೂ ಚಾಲನೆಯಲ್ಲಿರುವ ಲೈಟ್‌ಗಳಿದ್ದರೇ (DRL), ಇನ್ನೊಂದು ಸ್ವರೋವ್ಸ್ಕಿ ತಯಾರಿಸಿದ BMW ಕ್ರಿಸ್ಟಲ್ ಹೆಡ್‌ಲೈಟ್‌ಗಳೊಂದಿಗೆ ಮುಂಭಾಗವು ಪೂರ್ಣಗೊಂಡಿದೆ.

ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಗಮನಾರ್ಹವಾಗಿ ಕಾಣಿಸುವ BMW ಐಕಾನಿಕ್ ಗ್ಲೋ ಕಿಡ್ನಿ ಗ್ರಿಲ್ ಸರೌಂಡ್, ಇದು ಕಾರಿನ ಒಟ್ಟಾರೆ ಡಿಸೈನ್‌ಗೆ ಸ್ಪಷ್ಟವಾದ ಐಷಾರಾಮಿ ನೋಟವನ್ನು ನೀಡುತ್ತದೆ. ಈ ಕಾರು ಕೇವಲ 5.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ಪವರ್‌ಫುಲ್ ಮೋಟಾರ್ 449 hp ಪವರ್ ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ 603 ಕಿ.ಮೀ (WLTP) ಓಡಿಸಬಹುದು.
ಇಂಟೀರಿಯರ್‌ನಲ್ಲಿ, ಹೊಸ BMW ಇಂಟರಾಕ್ಷನ್ ಬಾರ್ ಕಾಕ್‌ಪಿಟ್ ವಿನ್ಯಾಸವು ಎಂಥವರನ್ನೂ ಸೆಳೆಯುತ್ತದೆ. BMW ಲೈವ್ ಕಾಕ್‌ಪಿಟ್ ಪ್ರೊಫೆಷನಲ್ ರಿಯಲ್ - ಟೈಮ್ ಸಂಚಾರ ಮಾಹಿತಯನ್ನು ಒದಗಿಸುತ್ತದೆ. ನ್ಯಾವಿಗೇಷನ್‌ನೊಂದಿಗೆ ಫ್ರೀಸ್ಟ್ಯಾಂಡಿಂಗ್ BMW ಕರ್ವ್ಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಹಿಂಭಾಗದಲ್ಲಿರುವ ವಿಶಿಷ್ಟ ಮತ್ತು ನವೀನ ವೈಶಿಷ್ಟ್ಯಗಳು ಹೊಸ ಮಟ್ಟಕ್ಕೆ ಸೌಕರ್ಯವನ್ನು ಕೊಂಡೊಯ್ಯುತ್ತವೆ.
31-ಇಂಚಿನ 8K BMW ಥಿಯೇರ್ ಸ್ಕ್ರೀನ್, ಅಂತರ್ನಿರ್ಮಿತ Amazon FireTV, ಮುಂಭಾಗದ ಪ್ರಯಾಣಿಕರ ಹಿಂಭಾಗದ ಎಕ್ಸಿಕ್ಯುಟಿವ್ ಲೌಂಜ್ ಆಸನವು 42.5 ಡಿಗ್ರಿ ಕೋನದಲ್ಲಿ ಒರಗುತ್ತದೆ. ಇದು ಪ್ರೀಮಿಯಂ ಲೆದರ್ ಮೆರಿನೊದಲ್ಲಿ ಲ್ಯಾಪ್ ಮಾಡಲಾದ ಆಸನಗಳಲ್ಲಿ ನಿಜವಾದ ಪ್ರಥಮ ದರ್ಜೆ ಅನುಭವವನ್ನು ನೀಡುತ್ತದೆ. ಹಿಂಭಾಗದ ಆಸನಗಳು ಮಲ್ಟಿ-ಲೆವಲ್ ಮಸಾಜ್ ಮತ್ತು ವೆಂಟಿಲೇಷನ್ ಸಹ ಒಳಗೊಂಡಿವೆ.
ಪನೋರಮಾ ಗ್ಲಾಸ್ ರೂಫ್ ಸ್ಕೈ ಲೌಂಜ್ ಸಂಪೂರ್ಣವಾಗಿ ಕಸ್ಟಮೈಸ್ ಮಾಡಬಹುದಾದ LED ಲೈಟಿಂಗ್ ಅಂಶಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇಂಟೀರಿಯರ್‌ನ್ನು ಪ್ರೈವೇಟ್ ಜೆಟ್‌ನಲ್ಲಿ ಪ್ರಯಾಣಿಸುವಂತಹ ಅನುಭವ ನೀಡುವಂತೆ ಡಿಸೈನ್ ಮಾಡಲಾಗಿದೆ. ಪ್ರಯಾಣದ ವೇಲೆ ಪ್ರಯಾಣಿಕರಿಗೆ ಆರಾಮ, ಸೌಕರ್ಯ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವಂತಿರುತ್ತದೆ ಎಂದು ಬಿಎಂಡಬ್ಲ್ಯು ಹೇಳಿದೆ.


Click it and Unblock the Notifications








