ಮಾರುತಿ, ಟಾಟಾ, ಟೊಯೋಟಾದಿಂದ ದೊಡ್ಡ ಅಪ್‌ಡೇಟ್: ಪುಟ್ಟ ಕಾರುಗಳಿಗೆ ಬೊಂಬಾಟ್ ನವೀಕರಣ!
ಭಾರತದಲ್ಲಿ ಆಟೋ ಉದ್ಯಮ ವೇಗವಾಗಿ ಬೆಳೆಯುತ್ತಿದೆ, ನಿತ್ಯ ಲಕ್ಷಾಂತರ ವಾಹನಗಳು ಮಾರಾಟವಾಗುತ್ತಿವೆ. ಕಾರು ಉದ್ಯಮದ ವಿಷಯಕ್ಕೆ ಬಂದರೆ ಕಮ್ಮಿ ಬೆಲೆಗೆ ಸಿಗುವ ಸಬ್-4 ಮೀಟರ್ ಎಸ್‌ಯುವಿಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಈ ವಿಭಾಗದಲ್ಲಿ ಬರುವ ಯಾವುದೇ ಕಾರಾಗಲಿ ಪ್ರತಿ ತಿಂಗಳಲ್ಲಿ ಅತ್ಯುತ್ತಮ ಮಾರಾಟವನ್ನು ಕಾಣುತ್ತವೆ. ಬ್ರಾಂಡ್‌ಗಳು ಕೂಡ ಗ್ರಾಹಕರ ಆದ್ಯತೆಗೆ ತಕ್ಕಂತೆ ಹೊಸ ಅಪ್‌ಡೇಟ್‌ಗಳು ಹಾಗೂ ಹೊಸ ಫೇಸ್‌ಲಿಫ್ಟ್‌ಗಳು ಸೇರಿದಂತೆ ಹೊಚ್ಚ ಹೊಸ ಮಾಡಲ್‌ಗಳನ್ನು ಪರಿಚಯಿಸುತ್ತವೆ. ಸದ್ಯ ಮುಂಬರುವ ದಿನಗಳಲ್ಲಿ ಹೊಸ ಅಪ್‌ಡೇಟ್‌ಗಳು ಪಡೆದಯುವ ಪ್ರಮುಖ ಮಾಡಲ್‌ಗಳ ಕುರಿತ ಮಾಹಿತಿ ಇಲ್ಲಿದೆ.
ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್: ನವೀಕರಿಸಿದ ಎಕ್ಸ್‌ಟರ್ 2026 ರ ಮಧ್ಯಭಾಗದಲ್ಲಿ ಹೊಸ ಅಪ್‌ಡೇಟ್ ಪಡೆದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಸ್ಟೈಲಿಂಗ್, ಅದೇ ಬಾಕ್ಸಿ ಲುಕ್‌ನೊಂದಿಗೆ ಕೆಲವು ಸ್ಟೈಲಿಂಗ್ ಅಂಶಗಳು ಬಾರಿ ಕಾಣಿಸಿಕೊಳ್ಳಲಿವೆ. ಇಂಟೀರಿಯರ್‌ನಲ್ಲಿ, ದೊಡ್ಡ ಟಚ್‌ಸ್ಕ್ರೀನ್, ಹೊಸ ಸೀಟ್ ಟ್ರಿಮ್‌ಗಳು ಮತ್ತು ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯಬಹುದು. ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆ ಮುಂದುವರಿಯುವ ಸಾಧ್ಯತೆಯಿದೆ.

ಮಾರುತಿ ಬ್ರೆಝಾ ಫೇಸ್‌ಲಿಫ್ಟ್: 2026ರ ಬ್ರೆಝಾ ಫೇಸ್‌ಲಿಫ್ಟ್ ಮಾಡಲ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದರ ರೋಡ್ ಟೆಸ್ಟ್ ವೇಗವಾಗಿ ನಡೆಯುತ್ತಿದೆ. ರಸ್ತೆ ಪರೀಕ್ಷೆ ವೇಳೆ ಹಲವು ಬಾರಿ ಈ ಕಾರನ್ನು ಗುರುತಿಸಲಾಗಿದೆ. ಈ ಎಸ್‌ಯುವಿಯು ಆಕರ್ಷಕ ಡಿಸೈನ್ ಬದಲಾವಣೆಗಳನ್ನು ಮತ್ತು ಕೆಲವು ಹೊಸ ಫೀಚರ್ಸ್ ಪಡೆದು ಈ ಬಾರಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಪ್ರತಿಸ್ಪರ್ಧಿ ಕಾರುಗಳ ಪೈಪೋಟಿ ಹೆಚ್ಚಾಗಿದ್ದು, ಮಾರುತಿ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಿದೆ.
ವರದಿಗಳು ಹೇಳುವಂತೆ ಮುಂಬರಲಿರುವ ಮಾರುತಿ ಬ್ರೆಝಾ ಫೇಸ್‌ಲಿಫ್ಟ್ ಮಾಡಲ್, ಪ್ರಸ್ತುತ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ರಾಂಕ್ಸ್‌ನಲ್ಲಿ ನೀಡಲಾದ ಹೊಸ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸಹ ಪರಿಚಯಿಸುವ ಸಾಧ್ಯತೆ ಇದೆ. ಟರ್ಬೊ ವೇರಿಯೆಂಟ್‌ಗಳೊಂದಿಗೆ ಹೊಸ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡಬಹುದು ಎಂದು ಮೂಲಗಳು ಹೇಳಿವೆ.

ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ ಪ್ರಸ್ತುತ ಪರೀಕ್ಷೆಯಲ್ಲಿದ್ದು, 2027 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಮುಖ ಹೈಲೈಟ್ ಎಂದರೆ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್) ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಸೇರ್ಪಡೆಯಾಗುವ ಎಲ್ಲಾ ಸೂಚನೆಗಳಿವೆ. ಇದು ಮಾರುತಿಯ ಇನ್-ಹೌಸ್ 1.2-ಲೀಟರ್ ಪೆಟ್ರೋಲ್ ಹೈಬ್ರಿಡ್ ಸೆಟಪ್ ಅನ್ನು ಬಳಸುವ ಮೊದಲ ಮಾಡಲ್ ಎಂದು ಸಹ ಹೇಳಲಾಗುತ್ತಿದೆ.
ಟೊಯೋಟಾ ಟೈಸರ್ ಫೇಸ್‌ಲಿಫ್ಟ್: ಟೊಯೋಟಾ ಟೈಸರ್ ಮಾರುತಿ ಸುಜುಕಿ ಫ್ರಾಂಕ್ಸ್‌ನ ಮರುಬ್ಯಾಡ್ಜ್ ಮಾಡಿದ ಆವೃತ್ತಿಯಾಗಿರುವುದರಿಂದ, ಫ್ರಾಂಕ್ಸ್ ನಂತರ ಇದು ಫೇಸ್‌ಲಿಫ್ಟ್ ಪಡೆಯುವ ನಿರೀಕ್ಷೆಯಿದೆ. ವೈಶಿಷ್ಟ್ಯಗಳು ಮತ್ತು ಎಂಜಿನ್ ಆಯ್ಕೆಗಳು ಫ್ರಾಂಕ್ಸ್‌ನಂತೆಯೇ ಇರುತ್ತವೆ, ಆದರೆ ವಿನ್ಯಾಸದ ವಿಷಯದಲ್ಲಿ ಮಾರುತಿ ಫ್ರಾಂಕ್ಸ್‌ಗಿಂತ ಟೈಸರ್ ವಿಭಿನ್ನ ಬಾಹ್ಯ ಡಿಸೈನ್ ಹೊಂದಿರುತ್ತದೆ.

ಹೊಸ-ಜನರೇಷನ್ ಟಾಟಾ ನೆಕ್ಸಾನ್: ಮುಂದಿನ ಪೀಳಿಗೆಯ ಟಾಟಾ ನೆಕ್ಸಾನ್, 2027 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಹೊಸ ಡಿಸೈನ್ ಥೀಮ್ ಜೊತೆಗೆ ADAS ಮತ್ತು ಹೊಸ ಇಂಟೀರಿಯರ್ ಟ್ರಿಮ್‌ಗಳನ್ನು ನಿರೀಕ್ಷಿಸಲಾಗಿದೆ. ಪೆಟ್ರೋಲ್ ಎಂಜಿನ್ ಹಾಗೆಯೇ ಮುಂದುವರಯಿಲಿದೆ, ಆದರೆ ಮುಂಬರುವ BS7 ರೂಢಿಗಳಿಂದಾಗಿ ಡೀಸೆಲ್ ಎಂಜಿನ್ ಅನ್ನು ಕೈಬಿಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಸ್ತುತ, ಖರೀದಿದಾರರಿಗೆ ಸಬ್-4 ಮೀಟರ್ SUV ಮತ್ತು ಕಾಂಪ್ಯಾಕ್ಟ್ ಕ್ರಾಸ್‌ಒವರ್ ವಿಭಾಗಗಳಲ್ಲಿ ಹಲವಾರು ಆಯ್ಕೆಗಳಿವೆ. ಪಟ್ಟಿ ಬೆಳೆಯುತ್ತಲೇ ಇದೆ, ಮುಂಬರುವ ವರ್ಷಗಳಲ್ಲಿ ಹಲವಾರು ಜನಪ್ರಿಯ ಮಾಡಲ್‌ಗಳು ಫೇಸ್‌ಲಿಫ್ಟ್‌ಗಳು ಅಥವಾ ಹೊಸ ಪೀಳಿಗೆಯ ನವೀಕರಣಗಳಿಗೆ ಬರಲಿವೆ. ಈ ನವೀಕರಣಗಳು ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಕೆಲವು ಸಂದರ್ಭಗಳಲ್ಲಿ, ಹೊಸ ಎಂಜಿನ್‌ಗಳನ್ನು ಸಹ ತರುತ್ತವೆ.


Click it and Unblock the Notifications








