Nissan: ದೊಡ್ಡ ಕುಟುಂಬಗಳಿಗೆ ಬೆಸ್ಟ್ 7-ಸೀಟರ್: ಫುಲ್ ಸೇಫ್ಟಿ, 6 ಏರ್‌ಬ್ಯಾಗ್: ಕೇವಲ 5.65 ಲಕ್ಷ ರೂ.
ಇತ್ತೀಚೆಗಷ್ಟೆ ಭಾರತದಲ್ಲಿ ಹೊಸ 7-ಸೀಟರ್ 'ನಿಸ್ಸಾನ್ ಗ್ರಾವೈಟ್' (Nissan GRAVITE) ಕಾರನ್ನು ಬಿಡುಗಡೆ ಮಾಡಿರುವ ನಿಸ್ಸಾನ್, ಅತ್ಯಂತ ಕಡಿಮೆ ಬೆಲೆಯಲ್ಲಿ ಇದನ್ನು ನೀಡುತ್ತಿದೆ. ವಿಶಾಲವಾದ ಕ್ಯಾಬಿನ್, ಆರಾಮದಾಯಕ ಆಸನಗಳು, ಸ್ಮಾರ್ಟ್ ಫೀಚರ್‌ಗಳೊಂದಿಗೆ ದೈನಂದಿನ ಪ್ರಯಾಣ, ಕುಟುಂಬ ವಿಹಾರ ಅಥವಾ ದೀರ್ಘ ಹೆದ್ದಾರಿ ಡ್ರೈವ್‌ಗಳಿಗೆ ಸಲೀಸಾಗಿ ಹೊಂದಿಕೊಳ್ಳುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಭಾರತದ ಅತ್ಯಂತ ಅಗ್ಗದ 7-ಸೀಟರ್ ಆಗಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರಿನ ಬೆಲೆ, ಫೀಚರ್ಸ್, ಎಂಜಿನ್ ಸೇರಿದಂತೆ ಪ್ರಮುಖ ವಿಷಯಗಳನ್ನು ಇಲ್ಲಿ ನೋಡೋಣ.
ಹೊಸ ನಿಸ್ಸಾನ್ ಗ್ರಾವೈಟ್ ವಿಶೇಷತೆಗಳು
ಒಟ್ಟು ಆರು ವೇರಿಯೆಂಟ್‌ಗಳಿದ್ದು, ಬೇಸ್ ವೇರಿಯೆಂಟ್ ಬೆಲೆಯು ರೂ. 5.65 ಲಕ್ಷ (ಎಕ್ಸ್ ಶೋರೂಂ) ಇದೆ. ಟಾಪ್ ವೇರಿಯೆಂಟ್ ಬೆಲೆಯು ರೂ. 8.49 ಲಕ್ಷ (ಎಕ್ಸ್ ಶೋರೂಂ) ಇದೆ. ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಈ ಕಾರು, ಮೂರು ಸಾಲುಗಳಲ್ಲಿ 7-ಸೀಟುಗಳೊಂದಿಗೆ ಲೆಥೆರೆಟ್ ಕ್ವಿಲ್ಟೆಡ್ ಆಸನಗಳನ್ನು ಹೊಂದಿದೆ.

ಫ್ಲೋಟಿಂಗ್ 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಫುಲ್ಲಿ ಡಿಜಿಟಲ್ ಡ್ರೈವರ್ ಡಿಸ್ಪ್ಲೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ಪ್ಲೇ, ವಾಕ್ ಅವೇ ಲಾಕ್ (WAL) ಮತ್ತು ಅಪ್ರೋಚ್ ಅನ್‌ಲಾಕ್ (AUL), ವೈರ್‌ಲೆಸ್ ಚಾರ್ಜರ್, ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಆಟೋ ಎಲ್ಇಡಿ ಹೆಡ್‌ಲ್ಯಾಂಪ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಹಿಲ್-ಸ್ಟಾರ್ಟ್ ಅಸಿಸ್ಟ್ (HSA), ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ. ಒಟ್ಟಾರೆ ದೊಡ್ಡ ಕ್ಯಾಬಿನ್ ಸ್ಥಳಾವಕಾಶವು ದೊಡ್ಡ ಕುಟುಂಬಕ್ಕೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ.

ಆಲ್-ರೌಂಡ್ LED ಲೈಟ್‌ಗಳು, ಕ್ರಿಸ್ಟಲ್ ಎಡ್ಜ್ LED ಟೈಲ್ ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು, ಇಂಟಿಗ್ರೇಟೆಡ್ DRL ಗಳೊಂದಿಗೆ ಸಿಗ್ನೇಚರ್ LED ಹೆಡ್‌ಲ್ಯಾಂಪ್‌ಗಳು, ವಿಶಿಷ್ಟ ಪಿಯಾನೋ ಬ್ಲ್ಯಾಕ್ ಗ್ರಿಲ್, ಆಕರ್ಷಕ ರೂಫ್ ರೈಲ್‌ಗಳನ್ನು ನೀಡಲಾಗಿದೆ. ಮೂರನೇ ಸಾಲಿನ ಸೀಟ್‌ಗಳನ್ನು ತೆಗೆದರೆ, ಬೂಟ್ ಜಾಗವನ್ನು 625 ಲೀಟರ್‌ಗಳಿಗೆ ವಿಸ್ತರಿಸಬಹುದು.
ಕಂಪನಿಯ ಪ್ರಕಾರ, ಹೊಸ ನಿಸ್ಸಾನ್ ಗ್ರಾವೈಟ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.6 ಕಿ.ಮೀ/ಲೀ (ಆಟೋಮ್ಯಾಟಿಕ್), 19.3 ಕಿ.ಮೀ/ಲೀ (ಮ್ಯಾನುವಲ್) ಮೈಲೇಜ್ ನೀಡುತ್ತದೆ. ಇದರಲ್ಲಿ 72PS ಪವರ್ ಹಾಗೂ 96Nm ಪೀಕ್ ಟಾರ್ಕ್ ಹೊರಹಾಕುವ 1.0 ಲೀಟರ್ 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ನೀಡಲಾಗಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ EZ-ಶಿಫ್ಟ್ (AMT) ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಪರ್ಫಾಮೆನ್ಸ್ ಹಾಗೂ ಐಷಾರಾಮಿ ಫೀಚರ್ಸ್ ಬಯಸದೆ, ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣ ಅನುಭವ ನೀಡುವ ಕಾರನ್ನು ಬಯಸುವವರು ಇದನ್ನು ಖರೀದಿಸಬಹುದು. ಮತ್ತೊಂದು ಹೈಲೆಟ್ ಎಂದರೆ ಡೀಲರ್ ಮಟ್ಟದ ಸಿಎನ್‌ಜಿ ವೇರಿಯೆಂಟ್ ಕೂಡ ಲಭ್ಯವಿದೆ. ಕಮ್ಮಿ ಬೆಲೆಯಲ್ಲಿ ಅತ್ಯುತ್ತಮ ಫ್ಯಾಮಿ ಕಾರು ಬಯಸುವವರಿಗೆ ಇದು ಬೆಸ್ಟ್ ಆಯ್ಕೆ ಎಂದು ಹೇಳಬಹದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








