Best Selling Cars: ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ!
ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಕಾರು ಮಾರಾಟವನ್ನು ಕಾಣುವ ಟಾಪ್-5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ನಿತ್ಯಾ ಸಾವಿರಾರು ಕಾರುಗಳು ಮಾರಾಟವಾಗುತ್ತಿರುತ್ತವೆ, ಮಾರುತಿಯಿಂದ ಟಾಟಾ ಮೋಟಾರ್ಸ್ ವರೆಗೆ ಹಾಗೂ ಅಗ್ಗದ ಕಾರುಗಳಿಂದ ಐಷಾರಾಮಿ ಕಾರುಗಳವರಗೆ ಎಲ್ಲಾ ರೀತಿಯ ಕಾರುಗಳನ್ನು ಖರೀದಿಸುವ ಗ್ರಾಹರಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಕಾರುಗಳು (Best Selling Cars) ಯಾವುವು ಎಂಬುದನ್ನು ತಿಳಿಯುವ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ ಇಲ್ಲಿದೆ.
ಟಾಟಾ ನೆಕ್ಸಾನ್: ಫೆಬ್ರವರಿ 2026ರ ಮಾರಾಟ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಅಗ್ರಸ್ಥಾನದಲ್ಲಿದ್ದು, ನೆಕ್ಸಾನ್ ಇವಿ ಸೇರಿದಂತೆ ಒಟ್ಟು 19,430 ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ. ಈ ಕಾರು ವಿವಿಧ ಎಂಜಿನ್ ಆಯ್ಕೆಗಳು, ಎಲೆಕ್ಟ್ರಿಕ್ ಆವೃತ್ತಿ ಹಾಗೂ ಸಿಎನ್‌ಜಿಯಲ್ಲಿ ಲಭ್ಯವಿರುವ ಕಾರಣ ಗ್ರಾಹಕರಿಗೆ ಬಹು ಆಯ್ಕೆಗಳು ಸಿಗುವುದರಿಂದ ಹೆಚ್ಚಾಗಿ ಖರೀದಿಸಲಾಗುತ್ತಿದೆ.

ಟಾಟಾ ನೆಕ್ಸಾನ್ 7,31 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಪನೋರಮಿಕ್ ಸನ್‌ರೂಫ್ ಮತ್ತು JBL ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 5-ಸ್ಟಾರ್ BNCAP ಸುರಕ್ಷತಾ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇದರ ಉತ್ತಮ ನಿರ್ಮಾಣ, ಫೀಚರ್ಸ್ ಹಾಗೂ ಸವಾರಿ ಗುಣಮಟ್ಟವು ದೇಶದಲ್ಲಿ ಅತೀ ಹೆಚ್ಚು ಮಾರಾಟಕ್ಕೆ ಮುಖ್ಯ ಕಾರಣವೆಂದು ಹೇಳಬಹುದು.
ಮಾರುತಿ ಸುಜುಕಿ ಡಿಜೈರ್: ಮಾರುತಿ ಸುಜುಕಿಯ ಡಿಜೈರ್ ಫೆಬ್ರವರಿ 2026 ರಲ್ಲಿ ಎರಡನೇ ಸ್ಥಾನದಲ್ಲಿದ್ದು, ಒಟ್ಟು 19,326 ಯೂನಿಟ್ ಕಾರುಗಳು ಮಾರಾಟವಾಗಿವೆ. ಈ ಕಾರು ಭಾರತದಲ್ಲಿ 6.25 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಮಾರುತಿ ಡಿಜೈರ್ 1.2-ಲೀಟರ್ ಎಂಜಿನ್ ನೊಂದಿಗೆ ಬರುತ್ತದೆ. ಕ್ಯಾಬಿನ್ ವಿಶಾಲವಾಗಿದ್ದು, ಸುರಕ್ಷತೆಯು ಅತ್ಯುನ್ನತ ಮಟ್ಟದಲ್ಲಿದೆ. GNCAP ಮತ್ತು BNCAP ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದೆ.

ಟಾಟಾ ಪಂಚ್: ಮೂರನೇ ಸ್ಥಾನದಲ್ಲಿ ಟಾಟಾ ಪಂಚ್ ಫೇಸ್‌ಲಿಫ್ಟ್ ಮತ್ತು ಪಂಚ್ ಇವಿ ಇವೆ, ಇವು ಒಟ್ಟಾಗಿ ಫೆಬ್ರವರಿ ತಿಂಗಳಲ್ಲಿ 18,748 ಯೂನಿಟ್ ಕಾರುಗಳು ಮಾರಾಟವಾಗಿವೆ. ನವೀಕರಿಸಿದ ಹೊಸ ಟಾಟಾ ಪಂಚ್ ಬೆಲೆಯು ರೂ. 5.59 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಪ್ರಮುಖ ನವೀಕರಣಗಳಲ್ಲಿ ಹೊಸ 1.2 ಐಟರ್ಬೊ ಎಂಜಿನ್, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸಿಎನ್‌ಜಿ AT ಮತ್ತು 5-ಸ್ಟಾರ್ BNCAP ಸುರಕ್ಷತಾ ರೇಟಿಂಗ್ ಸೇರಿವೆ.
ಹುಂಡೈ ಕ್ರೆಟಾ: ಹುಂಡೈ ಕ್ರೆಟಾ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದ್ದು, ಕ್ರೆಟಾ ಎಲೆಕ್ಟ್ರಿಕ್ ಸೇರಿದಂತೆ ಹ್ಯುಂಡೈನ ಕ್ರೆಟಾ ಶ್ರೇಣಿಯು 17,938 ಯುನಿಟ್ ವಾಹನಗಳ ಸಂಯೋಜಿತ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕ್ರೆಟಾವನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದರ ಬೆಲೆಯು 10.79 ಲಕ್ಷ ಎಕ್ಸಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಹುಂಡೈ ಕ್ರೆಟಾ ಪ್ರೀಮಿಯಂ ಡಿಸೈನ್, ಸ್ಥಿರ ಗುಣಮಟ್ಟ ಮತ್ತು ವಿಶಾಲವಾದ ಮತ್ತು ವೈಶಿಷ್ಟ್ಯ-ಭರಿತ ಕ್ಯಾಬಿನ್ (ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, 360-ಡಿಗ್ರಿ ಕ್ಯಾಮೆರಾ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ) ಗ್ರಾಹಕರ ಆಸಕ್ತಿಯನ್ನು ಆಕರ್ಷಿಸುತ್ತದೆ. ಇದರ ಎರಡೂ ಎಂಜಿನ್ ಆಯ್ಕೆಗಳಾದ 1.5-ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಗ್ರಾಹಕರನ್ನು ತನ್ನತ್ತ ಸೆಳೆದಿವೆ.
ಮಾರುತಿ ಸುಜುಕಿ ಬ್ರೆಝಾ: ಫೆಬ್ರವರಿ ತಿಂಗಳಲ್ಲಿ 17,863 ಯುನಿಟ್ ವಾಹನಗಳು ಮಾರಾಟವಾಗುವ ಮೂಲಕ ಬ್ರೆಝಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಇದು 8.25 ಲಕ್ಷ ಎಕ್ಸಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ವಿಶಾಲವಾದ ಕ್ಯಾಬಿನ್ ಮತ್ತು ಸಾಕಷ್ಟು ತಂತ್ರಜ್ಞಾನವನ್ನು ಹೊಂದಿದ್ದು, ಇದನ್ನು ಒಂದು ಕಾರ್ಯಸಾಧ್ಯವಾದ ಕಾಂಪ್ಯಾಕ್ಟ್ SUV ಆಯ್ಕೆಯನ್ನಾಗಿ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಜೋಡಿಸಲಾದ CNG ಆವೃತ್ತಿಯಲ್ಲೂ ಲಭ್ಯವಿದೆ.


Click it and Unblock the Notifications








