Hero: ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಚಾಯ್ಸ್.. 76,000 ರೂಪಾಯಿ, 87 Kmph ಟಾಪ್ ಸ್ಪೀಡ್.. 53 ಕಿ.ಮೀ ಮೈಲೇಜ್!
ಹೀರೋ ಜೂಮ್ 110 (Hero Xoom 110) ಜನಪ್ರಿಯ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರು ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ ' ಜೂಮ್ 110' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price & Variants):
ಹೊಚ್ಚ ಹೊಸ 'ಹೀರೋ ಜೂಮ್ 110' ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಕನಿಷ್ಠ ರೂ.76,251 ಹಾಗೂ ಗರಿಷ್ಠ ರೂ.81,920 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಎಕ್ಸ್ (VX), ಜಡ್ಎಕ್ಸ್ (ZX) ಹಾಗೂ ಕಾಂಬ್ಯಾಟ್ (COMBAT) ಎಂಬ 3 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ವಿನ್ಯಾಸ & ಬಣ್ಣಗಳು (Design & Colours):
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್, 'ಹೆಚ್' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಪರ್ಲ್ ಸಿಲ್ವರ್ ವೈಟ್, ಪೋಲ್‌ಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್ ಹಾಗೂ ಮ್ಯಾಟ್ ಶ್ಯಾಡೋ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಸುತ್ತಳತೆ (Dimension):
ಈ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,881 ಮಿ.ಮೀ ಉದ್ದ, 717 ಮಿ.ಮೀ ಅಗಲ ಹಾಗೂ 1,118 ಮಿ.ಮೀ ಎತ್ತರವಿದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,300 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 108 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ನೂತನ 'ಹೀರೋ ಜೂಮ್ 110' ಸ್ಕೂಟರ್, ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 110.9-ಸಿಸಿ ಏರ್-ಕೋಲ್ಡ್, 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 7,250 ಆರ್‌ಪಿಎಂನಲ್ಲಿ 8.05 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5,750 ಆರ್‌ಪಿಎಂನಲ್ಲಿ 8.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಮೈಲೇಜ್ (Mileage):
ಇದು ಉತ್ತಮ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದೆ. 1 ಲೀಟರ್ ಪೆಟ್ರೋಲ್ ಹಾಕಿಸಿದರೆ 53 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ. ಒಮ್ಮೆ ಪೂರ್ತಿಯಾಗಿ ತುಂಬಿಸಿದರೆ 265 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ.
ವೈಶಿಷ್ಟ್ಯಗಳು (Features):
ಈ ಸ್ಕೂಟರ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಫೋನ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 87 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಬರೀ 9.35 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸೀಟ್ ಎತ್ತರವು 770 ಮಿ.ಮೀ ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup And Braking System):
ಹೊಸ 'ಹೀರೋ ಜೂಮ್ 110' ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಹಾಗೂ ಹಿಂಭಾಗ (ರೇರ್) ಸಿಂಗಲ್-ಸ್ಪ್ರಿಂಗ್-ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 12-ಇಂಚಿನ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):
ಇದಕ್ಕೆ ಹಲವು ಪ್ರತಿಸ್ಪರ್ಧಿಗಳಿವೆ. ಟಿವಿಎಸ್ ಜೂಪಿಟರ್ 110 (TVS Jupiter 110), ಹೋಂಡಾ ಡಿಯೋ 110 (Honda Dio 110) ಮತ್ತು ಟಿವಿಎಸ್ ಸ್ಕೂಟಿ ಜೆಸ್ಟ್ 110 (TVS Scooty Zest 110) ಸ್ಕೂಟರ್‌ಗಳು ಪ್ರಬಲವಾದ ಎದುರಾಳಿಯಾಗಿವೆ.


Click it and Unblock the Notifications








