ಹೋಂಡಾ ಕಾರು ಖರೀದಿಗೆ ಇದೇ ಬೆಸ್ಟ್ ಟೈಮ್: ₹2.44 ಲಕ್ಷದವರೆಗೆ ಭಾರಿ ಡಿಸ್ಕೌಂಟ್, ಮಿಸ್ ಮಾಡ್ಬೇಡಿ!

ಹೊಸ ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಸಿಹಿ ಸುದ್ದಿ! ಇಂದು, ಸೆಪ್ಟೆಂಬರ್ 16ರಿಂದ ಅನ್ವಯವಾಗುವಂತೆ ಹೋಂಡಾ ಡೀಲರ್‌ಗಳು ಭಾರಿ ಸೆಪ್ಟೆಂಬರ್ ಆಫರ್‌ಗಳನ್ನು ಘೋಷಿಸಿದ್ದಾರೆ. ಕಂಪನಿಯ ಜನಪ್ರಿಯ ಸಿಟಿ, ಎಲಿವೇಟ್ ಮತ್ತು ಅಮೇಜ್ ಕಾರುಗಳ ಮೇಲೆ ದೇಶಾದ್ಯಂತ ಗರಿಷ್ಠ ₹2.44 ಲಕ್ಷದವರೆಗಿನ ಪ್ರಯೋಜನಗಳು ಲಭ್ಯವಿವೆ. ಈ ವಿಶೇಷ ಆಫರ್‌ಗಳು ಸೆಪ್ಟೆಂಬರ್ 30ರವರೆಗೆ ಮಾತ್ರ ಚಾಲ್ತಿಯಲ್ಲಿರಲಿದ್ದು, ಗ್ರಾಹಕರಿಗೆ ಆನ್-ರೋಡ್ ದರದಲ್ಲಿ ಭಾರಿ ಉಳಿತಾಯವಾಗಲಿದೆ. ಈ ಆಫರ್‌ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಲಾಯಲ್ಟಿ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ನಗರ ಹಾಗೂ ಪ್ರದೇಶಗಳಿಗೆ ಅನುಗುಣವಾಗಿ ರಿಯಾಯಿತಿ ಮೊತ್ತದಲ್ಲಿ ಬದಲಾವಣೆ ಇರಲಿದ್ದು, ಎಲಿವೇಟ್ ಕಾರಿಗೆ ಅತ್ಯಂತ ಹೆಚ್ಚಿನ ಡಿಸ್ಕೌಂಟ್ ಸಿಗುತ್ತಿದೆ. ಸಿಟಿ ಮತ್ತು ಅಮೇಜ್ ಕಾರುಗಳ ಮೇಲೂ ಬಂಪರ್ ಆಫರ್‌ಗಳಿವೆ.

ಈ ತಿಂಗಳ ರಿಯಾಯಿತಿ ಮೊತ್ತವು ನಗರ, ಡೀಲರ್‌ಗಳ ಬಳಿ ಲಭ್ಯವಿರುವ ಸ್ಟಾಕ್ ಮತ್ತು ಮಾಡೆಲ್ ವರ್ಷವನ್ನು (VIN) ಆಧರಿಸಿ ವ್ಯತ್ಯಾಸವಾಗುತ್ತದೆ. 'ಟೈಮ್ಸ್ ಆಫ್ ಇಂಡಿಯಾ' ಮತ್ತು 'ಎಕನಾಮಿಕ್ ಟೈಮ್ಸ್' ವರದಿಗಳ ಪ್ರಕಾರ, ಗರಿಷ್ಠ ಆಫರ್ ಮೊತ್ತ ₹2.44 ಲಕ್ಷದಷ್ಟಿದೆ. ಇದರಲ್ಲಿ ಹೋಂಡಾ ಸಿಟಿ ಮೇಲೆ ಸುಮಾರು ₹1.51 ಲಕ್ಷ ಹಾಗೂ ಅಮೇಜ್ ಮೇಲೆ ₹66,800 ವರೆಗೆ ರಿಯಾಯಿತಿ ಸಿಗುತ್ತಿದೆ. ಇನ್ನು ಆಟೋಕಾರ್ ವರದಿ ಪ್ರಕಾರ, ಎಲಿವೇಟ್ ಕಾರಿನ ಮೇಲೆ ರಾಷ್ಟ್ರಮಟ್ಟದಲ್ಲಿ ಗರಿಷ್ಠ ₹1.79 ಲಕ್ಷದವರೆಗೆ ಆಫರ್ ನೀಡಲಾಗುತ್ತಿದೆ. ಆದ್ದರಿಂದ, ನಿಮ್ಮ ಹತ್ತಿರದ ಹೋಂಡಾ ಶೋರೂಮ್‌ಗೆ ಭೇಟಿ ನೀಡಿ ನಿಖರವಾದ ಆಫರ್ ವಿವರಗಳನ್ನು ಪಡೆದುಕೊಳ್ಳುವುದು ಒಳಿತು.

Honda Car Offers September 2026: Save Up To ₹2.44 Lakh on City, Elevate, and Amaze Models

ಹೋಂಡಾ ಸಿಟಿ, ಎಲಿವೇಟ್ ಮತ್ತು ಅಮೇಜ್ ಮೇಲಿರುವ ಸೆಪ್ಟೆಂಬರ್ ಆಫರ್‌ಗಳು

ರಿಯಾಯಿತಿಗಳ ನಂತರ ₹10 ಲಕ್ಷದೊಳಗಿನ ಬಜೆಟ್ ಹೊಂದಿರುವವರಿಗೆ ಹೋಂಡಾ ಅಮೇಜ್‌ನ ಕೆಳಹಂತದ ಮಾಡೆಲ್‌ಗಳು ಉತ್ತಮ ಆಯ್ಕೆಯಾಗಲಿವೆ. ಇನ್ನು ₹15 ಲಕ್ಷದೊಳಗಿನ ಬಜೆಟ್‌ಗೆ ಎಲಿವೇಟ್ ‘V CVT’ ವೇರಿಯೆಂಟ್ ಸೂಕ್ತವಾಗಿದೆ. ಇತ್ತೀಚಿನ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಎಲಿವೇಟ್ V CVT ಆನ್-ರೋಡ್ ಬೆಲೆ ಸುಮಾರು ₹14.3 ಲಕ್ಷಕ್ಕೆ ಸಿಗುತ್ತಿದೆ. ರಾಜ್ಯದ ತೆರಿಗೆ ಮತ್ತು ಇನ್ಶೂರೆನ್ಸ್ ಆಯ್ಕೆಗಳ ಮೇಲೆ ಆನ್-ರೋಡ್ ಬೆಲೆ ಬದಲಾಗುವುದರಿಂದ ಬುಕಿಂಗ್ ಮಾಡುವ ಮುನ್ನ ಪರಿಶೀಲಿಸಿ. ಇನ್ನು ಸಾಲದ ವಿಷಯಕ್ಕೆ ಬಂದರೆ, ಶೇಕಡಾ 10ರ ಬಡ್ಡಿದರದಲ್ಲಿ 5 ವರ್ಷಗಳ ಅವಧಿಗೆ ಪ್ರತಿ ಲಕ್ಷಕ್ಕೆ ಅಂದಾಜು ₹2,120 ಇಎಂಐ ಬರಲಿದೆ.

₹15 ಲಕ್ಷ ಬಜೆಟ್‌ನಲ್ಲಿ ಹೋಂಡಾದ ಬೆಸ್ಟ್ ಕಾರುಗಳು

ದಿನನಿತ್ಯದ ಚಾಲನೆ ಹಾಗೂ ಫ್ಯಾಮಿಲಿ ಟ್ರಿಪ್‌ಗಳಿಗೆ ಸೆಡಾನ್ ಕಾರು ಬೇಕೇ? ಹಾಗಿದ್ದರೆ ಹೋಂಡಾ ಸಿಟಿ ‘V CVT’ ಅತ್ಯುತ್ತಮ ಆಯ್ಕೆ. ಇದು ಉತ್ತಮ ಸ್ಪೇಸ್, ಸುಗಮ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಉತ್ತಮ ಮರುಮಾರಾಟ ಮೌಲ್ಯವನ್ನು ನೀಡುತ್ತದೆ. ಅದೇ ರೀತಿ ಬೋಲ್ಡ್ ಲುಕ್ ಹಾಗೂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಬಯಸುವವರಿಗೆ ಎಲಿವೇಟ್ ‘SV’ ಅಥವಾ ‘V’ ವೇರಿಯೆಂಟ್‌ಗಳು ಸೂಕ್ತ. ಕಡಿಮೆ ಬಜೆಟ್‌ನಲ್ಲಿ ಮೊದಲ ಬಾರಿ ಕಾರು ಖರೀದಿಸುವವರು ಯಾವುದೇ ಗೊಂದಲವಿಲ್ಲದೆ ಅಮೇಜ್ ‘S’ ವೇರಿಯೆಂಟ್ ಆಯ್ಕೆ ಮಾಡಿಕೊಳ್ಳಬಹುದು. ನೆನಪಿಡಿ, ಜನಪ್ರಿಯ ಬಣ್ಣದ ಕಾರುಗಳು ಬೇಗನೆ ಮಾರಾಟವಾಗುವುದರಿಂದ ಸ್ಟಾಕ್ ಪರಿಶೀಲಿಸಿ ಶೀಘ್ರ ನಿರ್ಧಾರ ತಗೆದುಕೊಳ್ಳಿ.

ನವರಾತ್ರಿ ಅಥವಾ ದೀಪಾವಳಿ ಹಬ್ಬದವರೆಗೆ ಕಾಯುವುದರಿಂದ ಹೆಚ್ಚುವರಿ ಆಕ್ಸೆಸರೀಸ್ ಸಿಗಬಹುದಾದರೂ, ನಿಮಗಿಷ್ಟದ ವೇರಿಯೆಂಟ್ ಸಿಗದೇ ಹೋಗುವ ಸಾಧ್ಯತೆಯಿರುತ್ತದೆ. ಏಕೆಂದರೆ ಹಬ್ಬದ ವೇಳೆಗೆ ಡಿಮ್ಯಾಂಡ್ ಹೆಚ್ಚಿರುವ ಮಾಡೆಲ್‌ಗಳ ಸ್ಟಾಕ್ ಖಾಲಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂದೇ ಡೀಲರ್‌ಗಳಿಂದ ಇನ್ಶೂರೆನ್ಸ್, ಹ್ಯಾಂಡ್ಲಿಂಗ್ ಚಾರ್ಜಸ್, TCS ಮತ್ತು ಫಾಸ್ಟ್ಯಾಗ್ (FASTag) ಸೇರಿದಂತೆ ಸಂಪೂರ್ಣ ಬೆಲೆ ಪಟ್ಟಿಯ ಲಿಖಿತ ವಿವರಣೆ ಪಡೆದುಕೊಳ್ಳಿ. ಅನಗತ್ಯ ಶುಲ್ಕಗಳನ್ನು ವಜಾಗೊಳಿಸುವಂತೆ ಅಥವಾ ಹೊರಗಿನ ಇನ್ಶೂರೆನ್ಸ್ ಕೊಡುಗೆಗಳಿಗೆ ಸರಿಹೊಂದುವಂತೆ ಡೀಲರ್‌ಗಳ ಬಳಿ ಚೌಕಾಶಿ ಮಾಡಿ. ಈ ಭಾರಿ ಆಫರ್‌ಗಳು ಸೆಪ್ಟೆಂಬರ್ 30ರವರೆಗೆ ಮಾತ್ರ ಲಭ್ಯವಿರುವುದರಿಂದ ತಡಮಾಡದೆ ನಿಮ್ಮ ನೆಚ್ಚಿನ ಕಾರನ್ನು ಬುಕ್ ಮಾಡಿ!

Article Published On: Wednesday, September 16, 2026, 8:04 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+