ಹೊಸ ಹೋಂಡಾ SUV ಬಿಡುಗಡೆಗೆ ಸಜ್ಜು: ಪರೀಕ್ಷೆ ಫುಲ್ ಜೋರು... ಪ್ರತಿಸ್ಪರ್ಧಿಗಳಿಗೆ ನಡುಕ ಶುರು!

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಇಂದು ಮುಂಬರುವ ತನ್ನ ಮೊದಲ ಎಲೆಕ್ಟ್ರಿಕ್ SUV ಯ ಮೊದಲ ಪ್ಯಾನ್ - ಇಂಡಿಯಾ ಪರೀಕ್ಷಾರ್ಥ ಓಟಕ್ಕೆ ಚಾಲನೆ ನೀಡಿದೆ. ಈ ಮೂಲಕ ಭಾರತದಲ್ಲಿ ಸಾರ್ವಜನಿಕ ರಸ್ತೆ ಪರಿಶೀಲನೆಯ ಪರೀಕ್ಷೆಯು ಅಧಿಕೃತವಾಗಿ ಆರಂಭವಾಗಿದೆ. ಇದು ಹೋಂಡಾದ ಎಲೆಕ್ಟ್ರಿಕ್ ವಾಹನ ಪ್ರಯಾಣದಲ್ಲಿ ಮತ್ತು ಭಾರತೀಯ ಗ್ರಾಹಕರಿಗೆ ಹೊಸ ಎಲೆಕ್ಟ್ರಿಕ್ SUV ಯ ಭವಿಷ್ಯದ ಬಿಡುಗಡೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ಜಾಗತಿಕವಾಗಿ 'ಹೋಂಡಾ 0 α' ಎಂದು ಕರೆಯಲ್ಪಡುವ ಈ ಎಲೆಕ್ಟ್ರಿಕ್ ಮಾಡಲ್‌ನ ಮೂಲಮಾದರಿ (Prototype) ಯನ್ನು ಈ ಹಿಂದೆ ಮೊದಲ ಬಾರಿಗೆ ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಅನಾವರಣಗೊಳಿಸಲಾಗಿತ್ತು. ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೋಂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ಸಜ್ಜುಗೊಳಿಸುತ್ತಿದೆ. ಈಗ ಕೊನೆಯ ಹಂತದ ಪರೀಕ್ಷೆಗಳು ಜೋರಾಗಿ ನಡೆಯುತ್ತಿವೆ.

honda-flags-off-pan-india-test-run-for-its-first-electric-suv

ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಯನ್ನು ನಗರ ಮತ್ತು ಲೈಫ್‌ಸ್ಟೈಲ್-ಆಧಾರಿತ ಚಾಲನೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಇದು ವ್ಯಾಪಕ ಶ್ರೇಣಿಯ ದೈನಂದಿನ ಬಳಕೆಗೆ ಬೆಸ್ಟ್ ಆಯ್ಕೆಯಾಗಲಿದೆ. ಈ ಮಾಡಲ್‌ನ್ನು 2026-27ರ ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಪರಿಚಯಿಸಲು ಯೋಜಿಸಲಾಗಿದೆ. ಭಾರತ ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಗಳಲ್ಲಿ ಮೊದಲಿಗೆ ಬಿಡುಗಡೆ ಮಾಡಲಾಗುವುದು. ವಾಹನವನ್ನು ಭಾರತದಲ್ಲಿ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ ಹೋಂಡಾ ಕಂಪನಿ ಹೇಳಿದೆ.

ಹೋಂಡಾ ಆರಂಭಿಸಿರುವ ಪರೀಕ್ಷಾ ಕಾರ್ಯಕ್ರಮವು ಹೆದ್ದಾರಿಗಳು, ನಗರ ರಸ್ತೆಗಳು ಮತ್ತು ಸವಾಲಿನ ಭೂಪ್ರದೇಶಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಭಾರತೀಯ ಚಾಲನಾ ಪರಿಸ್ಥಿತಿಗಳಲ್ಲಿ ವಾಹನವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಹಾಗೆಯೇ ಕಾರಿನ ಬಾಳಿಕೆ, ನಿರ್ವಹಣೆ, ಸವಾರಿ ಸೌಕರ್ಯ, ದಕ್ಷತೆ ಮತ್ತು ಒಟ್ಟಾರೆ ವಿಶ್ವಾಸಾರ್ಹತೆ ಹೇಗಿರಲಿದೆ ಎಂಬೆಲ್ಲಾ ಕ್ಷೇತ್ರಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿ ಪರೀಕ್ಷಿಸಲಾಗುವುದು.

honda-flags-off-pan-india-test-run-for-its-first-electric-suv

ದೈನಂದಿನ ಬಳಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ರೀತಿಯ ಚಾರ್ಜಿಂಗ್ ಮೂಲಸೌಕರ್ಯಗಳಲ್ಲಿ ಚಾರ್ಜಿಂಗ್ ಕಾರ್ಯಕ್ಷಮತೆಯ ಮೌಲ್ಯಮಾಪನದ ಜೊತೆಗೆ, ವಾಹನವು ತೀವ್ರ ಶಾಖ ಮತ್ತು ಮಾನ್ಸೂನ್ ಪರಿಸ್ಥಿತಿಗಳಗೆ ಹೋಂದಿಕೊಳ್ಳುವ ಬಗ್ಗೆಯೂ ಪರೀಕ್ಷೆಗೆ ಒಳಪಡಿಸಲಾಗುವುದು. ಇವೆಲ್ಲವು ಕಾರನ್ನು ಭಾರತದಲ್ಲಿ ವಿಶ್ವಾಸಾರ್ಹ ಎಲೆಕ್ಟ್ರಿಕ್ ಕಾರನ್ನಾಗಿ ಮಾಡಲು ಪ್ರಮುಖ ಹಂತದ ಪರೀಕ್ಷೆಗಳಾಗಿದ್ದು, ಹೋಂಡಾ ಜಾಗರೂಕತೆಯಿಂದ ಪರಿಶೀಲಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ತಕಾಶಿ ನಕಾಜಿಮಾ, "ಭಾರತಾದ್ಯಂತ ಸಾರ್ವಜನಿಕ ರಸ್ತೆ ಪರಿಶೀಲನೆ ಪರೀಕ್ಷೆಯ ಆರಂಭವು ನಮ್ಮ ವಿದ್ಯುದೀಕರಣ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತವು ವಿಶಿಷ್ಟ ಚಾಲನಾ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿದೆ, ನಮ್ಮ ಎಲೆಕ್ಟ್ರಿಕ್ ವಾಹನವನ್ನು ನೈಜ - ಪ್ರಪಂಚದ ಪರಿಸರದಲ್ಲಿ ಸಂಪೂರ್ಣವಾಗಿ ಪರೀಕ್ಷಿಸುವುದು ನಮಗೆ ಮುಖ್ಯವಾಗಿದೆ.

honda-flags-off-pan-india-test-run-for-its-first-electric-suv

ಈ ಕಾರ್ಯಕ್ರಮವು ಹೋಂಡಾದ ಜಾಗತಿಕ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಸ್ಥಳೀಯ ಗ್ರಾಹಕರ ಅಗತ್ಯಗಳ ಮೇಲೆ ಬಲವಾದ ಗಮನವನ್ನು ನೀಡುತ್ತದೆ. ಏಕೆಂದರೆ ನಾವು ವಿಶ್ವಾಸಾರ್ಹತೆ, ಸೌಕರ್ಯ ಮತ್ತು ಬಳಕೆಯ ಸುಲಭತೆಯನ್ನು ನೀಡುವ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದೇವೆ" ಎಂದು ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ತಕಾಶಿ ನಕಾಜಿಮಾ ಹೇಳಿದರು.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಬಗ್ಗೆ

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಡಿಸೆಂಬರ್ 1995 ರಲ್ಲಿ ಭಾರತೀಯ ಗ್ರಾಹಕರಿಗೆ ಹೋಂಡಾದ ಪ್ರಯಾಣಿಕ ಕಾರು ಮಾದರಿಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುವ ಬದ್ಧತೆಯೊಂದಿಗೆ ಸ್ಥಾಪಿಸಲಾಯಿತು. HCIL ನ ಕಾರ್ಪೊರೇಟ್ ಕಚೇರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿದೆ ಮತ್ತು ಅದರ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಪುಕಾರದಲ್ಲಿದೆ.

More from DriveSpark

Article Published On: Monday, March 16, 2026, 16:36 [IST]
English summary
Honda flags off pan india test run for its first electric suv
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+