Hyundai: ಹೊಸ ಪುಟ್ಟ ಕಾರು ಬಿಡುಗಡೆ: ಬರೀ ಐದೂವರೆ ಲಕ್ಷ ಬೆಲೆ: ಸನ್‌ರೂಫ್ ಕೂಡ ಇದೆ!
ಜನಪ್ರಿಯ ಕಾರು ತಯಾರಕ ಕಂನಿಯಾಗಿರುವ ಹುಂಡೈ, ಇಂದು ಹೊಸ ಅಪ್‌ಡೇಟೆಡ್ ಹುಂಡೈ ಎಕ್ಸ್‌ಟರ್ ಕಾರನ್ನು 5.79 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಭಾರತದಾದ್ಯಂತ 2 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಕಾರನ್ನು ಖರೀದಿಸಿದ್ದಾರೆ. ಇದೀಗ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸಲು ಹುಂಡೈ ಎಕ್ಸ್‌ಟರ್ ಅನ್ನು ರಿಫ್ರೆಶ್ಡ್ ಸ್ಟೈಲಿಂಗ್, ಹೆಚ್ಚು ಪ್ರೀಮಿಯಂ ಕ್ಯಾಬಿನ್, ಸ್ಮಾರ್ಟ್ ಸಂಪರ್ಕ ಮತ್ತು ವರ್ಧಿತ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ನಗರದ ಅನ್ವೇಷಕರಿಗಾಗಿ ವಿನ್ಯಾಸಗೊಳಿಸಲಾದ ಹೊಸ ಹುಂಡೈ ಎಕ್ಸ್‌ಟರ್ ಮಸ್ಕುಲರ್ ಲುಕ್‌ನೊಂದಿಗೆ ಸಿಟಿ ಡ್ರೈವ್‌ಗಳು ಮತ್ತು ವಾರಾಂತ್ಯದ ಲಾಂಗ್ ಡ್ರೈವ್ ಎರಡಕ್ಕೂ ಸೂಕ್ತ ಕಾರಾಗಿದೆ ಎಂದು ಹ್ಯುಂಡೈ ಭರವಸೆ ನೀಡಿದೆ.
ಡಿಸೈನ್ ಮುಖ್ಯಾಂಶಗಳು: ಹೊಸ ಹುಂಡೈ ಎಕ್ಸ್‌ಟರ್ ತನ್ನ ಎಸ್‌ಯುವಿ ಲುಕ್‌ನೊಂದಿಗೆ ರೀ-ಡಿಸೈನ್ ಮಾಡಲಾದ ಬ್ಲಾಕ್ ರೇಡಿಯೇಟರ್ ಗ್ರಿಲ್ ಮತ್ತು ಆಕರ್ಷಕವಾದ ಹೊಸ R15 (D=380.2 ಮಿಮೀ) ಡೈಮಂಡ್-ಕಟ್ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಸ್ಪೋರ್ಟಿ ವಿಂಗ್-ಟೈಪ್ ಸ್ಪಾಯ್ಲರ್ ನೀಡಲಾಗಿದೆ, ಹಾಗೆಯೇ ವಿಭಾಗದಲ್ಲಿಯೇ ಅತಿ ಉದ್ದವಾದ ವೀಲ್‌ಬೇಸ್ ಹೊಂದಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಹೆಡ್‌ರೂಮ್ ಮತ್ತು ಸೌಕರ್ಯವನ್ನು ನೀಡುತ್ತದೆ.

ಪ್ರೀಮಿಯಂ ಇಂಟೀರಿಯರ್: ಕ್ಯಾಬಿನ್ ಒಳಗೆ ಹೊಸ ಹುಂಡೈ ಎಕ್ಸ್‌ಟರ್ ಹೆಚ್ಚು ಪ್ರೀಮಿಯಂ ಮತ್ತು ಹೆಚ್ಚು ಪ್ರಾಯೋಗಿಕವಾಗಿದೆ. ಹೊಸ ಡ್ಯುಯಲ್ ಟೋನ್ ನೇವಿ ಮತ್ತು ಗ್ರೇ ಇಂಟೀರಿಯರ್ ಥೀಮ್, 3D ಕಾರ್ಬನ್ ಪ್ಯಾಟರ್ನ್ ಡ್ಯಾಶ್‌ಬೋರ್ಡ್ ಫಿನಿಶ್ ಮತ್ತು ಸ್ಪೋರ್ಟಿ ಡಿ-ಕಟ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ ಮತ್ತು ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‌ರೆಸ್ಟ್‌ಗಳನ್ನು ನೀಡಲಾಗಿದೆ.
ಆಧುನಿಕ ತಂತ್ರಜ್ಞಾನ: ಹೊಸ ಹುಂಡೈ ಎಕ್ಸ್‌ಟರ್‌ನಲ್ಲಿ ಡ್ಯಾಶ್‌ಕ್ಯಾಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಹಿಂಭಾಗದ ಪ್ರಯಾಣಿಕರಿಗೆ ಟೈಪ್-ಸಿ ಯುಎಸ್‌ಬಿ ಪೋರ್ಟ್ ಮತ್ತು ವಿಶಾಲವಾದ ಬ್ಲೂಲಿಂಕ್ ಸಾಮರ್ಥ್ಯಗಳೊಂದಿಗೆ ಸ್ಮಾರ್ಟ್ ಸಂಪರ್ಕವನ್ನು ಒದಗಿಸಲಾಗಿದೆ. ಜೊತೆಗೆ ಎಲೆಕ್ಟ್ರಿಕ್ ಸನ್‌ರೂಫ್, ಸುಧಾರಿತ ಡಿಜಿಟಲ್ ಕ್ಲಸ್ಟರ್, ಮ್ಯಾಪ್‌ಗಳು ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ OTA ಅಪ್‌ಡೇಟ್‌ಗಳು ಇರಲಿವೆ.

ಎಂಜಿನ್ ಆಯ್ಕೆಗಳು: ಹ್ಯುಂಡೈನ ವಿಶ್ವಾಸಾರ್ಹ 4 - ಸಿಲಿಂಡರ್ 1.2 - ಲೀ. ಕಪ್ಪಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುಯಲ್ ಮತ್ತು AMT ಟ್ರಾನ್ಸ್‌ಮಿಷನ್ ನೀಡಲಾಗಿದೆ. ಸಿಎನ್‌ಜಿ ಆಯ್ಕೆ ಕೂಡ ಸಿಗಲಿದ್ದು, ಇದು 1.2 - ಲೀ. ಬೈ-ಫ್ಯೂಲ್ ಕಪ್ಪಾ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಹೈ - ಸಿಎನ್‌ಜಿ ಡ್ಯುಯೊ ವಿನ್ಯಾಸವು ಡ್ಯುಯಲ್ ಸಿಲಿಂಡರ್‌ಗಳೊಂದಿಗೆ ಬರುತ್ತದೆ.
ಬಲವರ್ಧಿತ ಸುರಕ್ಷತೆ: ಹೊಸ ಹುಂಡೈ ಎಕ್ಸ್‌ಟರ್‌ನಲ್ಲಿ 45 ಕ್ಕೂ ಹೆಚ್ಚು ಸುಧಾರಿತ ಸುರಕ್ಷತಾ ಫೀಚರ್‌ಗಳಿವೆ. ಇದು ಪ್ರತಿ ಪ್ರಯಾಣಕ್ಕೂ ಸಮಗ್ರ ರಕ್ಷಣೆ ನೀಡುತ್ತದೆ. ಹೊಸ ಹುಂಡೈ ಎಕ್ಸ್‌ಟರ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ - ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC)ಗಳನ್ನು ಹೊಂದಿದೆ, ಜೊತೆಗೆ 6 ಏರ್‌ಬ್ಯಾಗ್‌ಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಆಸಕ್ತ ಖರೀದದಾರರು ಕೆಳಗೆ ನೀಡಲಾದ ಬೆಲೆಗಳನ್ನು ಪರಿಶೀಲಿಸಬಹುದು.

ಹೊಸ ಹುಂಡೈ ಎಕ್ಸ್‌ಟರ್ ಗೋಲ್ಡನ್ ಬ್ರಾಂಜ್ (ಹೊಸದು), ಟೈಟಾನಿಯಂ ಬ್ಲಾಕ್ ಮ್ಯಾಟ್ (ಹೊಸದು), ಟೈಟಾನ್ ಗ್ರೇ, ಅಟ್ಲಾಸ್ ವೈಟ್, ಸ್ಟಾರ್ ನೈಟ್, ಟೈಟಾನಿಯಂ ಬ್ಲಾಕ್, ರೇಂಜರ್ ಖಾಕಿ, ಬ್ಲಾಕ್ ರೂಫ್‌ನೊಂದಿಗೆ ರೇಂಜರ್ ಖಾಕಿ (ಡ್ಯುಯಲ್ ಟೋನ್) ಸೇರಿದಂತೆ 7 ಸಿಂಗಲ್ ಟೋನ್ ಮತ್ತು 1 ಡ್ಯುಯಲ್ ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.
ದೇಶಾದ್ಯಂತದ ಯಾವುದೇ ಹುಂಡೈ ಡೀಲರ್‌ಶಿಪ್‌ಗಳಲ್ಲಿ ಅಥವಾ ಹ್ಯುಂಡೈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು ಹೊಸ ಹುಂಡೈ ಎಕ್ಸ್‌ಟರ್ ಅನ್ನು ರೂ. 11,000 ಗೆ ಬುಕ್ ಮಾಡಬಹುದು. ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಹೆಚ್ಚಿನ ಆಟೋಮೋಟಿವ್ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್‌ಗೆ ಭೇಟಿ ನೀಡಿ.


Click it and Unblock the Notifications








