Hyundai: ರಣಹದ್ದಿನಂತಹ SUV: ದಿನಕ್ಕೆ 578 ಕಾರುಗಳು ಮಾರಾಟ: ಡೀಲರ್‌ಗಳ ಫೇವರೆಟ್ ಕಾರು!
ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿಗಳು ತುಂಬಾ ಸದ್ದು ಮಾಡುತ್ತಿವೆ, ಜನ ಈ ಕಾರುಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ಮೊದಲಿನಿಂದಲೂ ಹ್ಯುಂಡೈ ಕ್ರೆಟಾ (Hyundai Creta) ದಿಂದ ಪ್ರಾಬಲ್ಯವನ್ನು ಹೊಂದಿದೆ. ಪ್ರತಿ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಅತಿ ಹೆಚ್ಚು ಮಾರಾಟ ಕಾಣುವ ಮಿಡ್‌ಸೈಜ್ ಎಸ್‌ಯುವಿಯಾಗಿ ಗುರ್ತಿಸಿಕೊಳ್ಳುತ್ತಿದೆ. ಹಾಗೆಯೇ ಈ ಬಾರಿಯು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, 2026 ಜನವರಿ ತಿಂಗಳಿನಲ್ಲಿಯೂ ಹ್ಯುಂಡೈ ಕ್ರೆಟಾ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿ ಅಗ್ರಸ್ಥಾನ ಪಡೆದುಕೊಂಡಿದೆ.
2026 ಜನವರಿ ತಿಂಗಳಿನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ 17,921 ಯುನಿಟ್ ವಾಹನಗಳು ಮಾರಾಟವಾಗಿವೆ. ಈ ಮಾರಾಟ ಅಂಕಿಅಂಶಗಳನ್ನು ಜನವರಿ ತಿಂಗಳ 31 ದಿನಗಳಿಗೆ ವಿಂಗಡಣೆ ಮಾಡಿದರೆ, ಪ್ರತಿ ದಿನ ಬರೋಬ್ಬರಿ 578 ಎಸ್‌ಯುವಿಗಳು ಮಾರಾಟವಾದಂತಾಗುತ್ತದೆ. ಒಟ್ಟಾರೆ ಹ್ಯುಂಡೈಗೆ ಕಂಪನಿಗೆ ಕ್ರೆಟಾ ಎಸ್‌ಯುವಿ ಬಂಗಾರದ ಮೊಟ್ಟೆಯಾಗಿ ಪ್ರತಿ ತಿಂಗಳು ಭರ್ಜರಿ ಲಾಭ ತಂದುಕೊಡುತ್ತಿದೆ.

ಹುಂಡೈ ಕ್ರೆಟಾ 2025 ರಲ್ಲಿ 2 ಲಕ್ಷ ಯುನಿಟ್ ಕಾರುಗಳ ಅತ್ಯಧಿಕ ವಾರ್ಷಿಕ ಮಾರಾಟವನ್ನು ಸಹ ದಾಖಲಿಸಿದೆ. ಮಧ್ಯಮ ಗಾತ್ರದ SUV ವಿಭಾಗದಲ್ಲಿ ಒಂದು ದಶಕವನ್ನು ಆಳಿರುವ ಈ ಕಾರು ಬಿಡುಗಡೆಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದೆ. 2016 ರಲ್ಲಿ ಬಿಡುಗಡೆಯಾಗಿ 2025 ರ ನಡುವೆ ಶೇ9 ಕ್ಕಿಂತ ಹೆಚ್ಚಿನ ಗಮನಾರ್ಹ CAGR (ಸಂಯುಕ್ತ ವಾರ್ಷಿಕ ಬೆಳವಣಿಗೆ ದರ) ಅನ್ನು ದಾಖಲಿಸಿದೆ.
ಹ್ಯುಂಡೈ ಕ್ರೆಟಾ ಎಸ್‌ಯುವಿ ವಿಶೇಷತೆಗಳು
ಕ್ರೆಟಾದ ಪರ್ಫಾಮೆನ್ಸ್, ಸೌಕರ್ಯ, ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯ ಮಿಶ್ರಣವು ಅದನ್ನು ವಿಶ್ವಾಸಾರ್ಹ ಒಡನಾಡಿಯನ್ನಾಗಿ ಮಾಡಿದೆ. ಹ್ಯುಂಡೈ ಕ್ರೆಟಾ ಬೇಸ್ ವೇರಿಯೆಂಟ್ ಬೆಲೆಯು 10.79 ಲಕ್ಷ ರೂ. (ಎಕ್ಸ್ ಶೊರೂಂ) ಇದ್ದರೇ ಟಾಪ್ ವೇರಿಯೆಂಟ್ ಬೆಲೆಯು 20.20 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಹ್ಯುಂಡೈ ಕ್ರೆಟಾ ಪೆಟ್ರೋಲ್, ಟರ್ಬೊ - ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಸಿಗುತ್ತದೆ.

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆ ಇದ್ದು, ಹೆಚ್ಚಿನ ಲಗೇಜ್ ಸಾಗಿಸಲು 433 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360 - ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್ - ಜೋನ್ AC ಒದಗಿಸಲಾಗಿದೆ.
ಹೊಸ ಹುಂಡೈ ಕ್ರೆಟಾ ಎಸ್‍ಯುವಿ ಒಳಭಾಗದ ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಸೇರಿದಂತೆ ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8 - ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಹೊಂದಿದೆ.

ಹ್ಯುಂಡೈಗೆ ಮೊದಲಿನಿಂದಲೂ ಬ್ರಹ್ಮಾಸ್ತ್ರದಂತೆ ಕೈ ಹಿಡಿದಿರುವ ಮಿಡ್‌ಸೈಜ್ ಎಸ್‌ಯುವಿ ಕ್ರೆಟಾದಲ್ಲಿ, ಇನ್ನು ಸುರಕ್ಷತೆಯ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯಂತಹ ಆಧುನಿಕ ಫೀಚರ್ಸ್ ಒಳಗೊಂಡಿದೆ.
ಈ ಕಾರು 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸಿಗುತ್ತದೆ. ಹಾಗೆಯೇ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು 473 ಕಿ.ಮೀ ರೇಂಜ್ ನೀಡುತ್ತದೆ.


Click it and Unblock the Notifications








