ಒಂದು ರಗಡ್ ಮತ್ತೊಂದು ರಣಹದ್ದು: ಎರಡಕ್ಕೂ ಸರಿಯಾದ ಪೈಪೋಟಿ: ಯಾವುದು ಬೆಸ್ಟ್?

ಭಾರದಲ್ಲಿ ತೀವ್ರ ಸ್ಪರ್ಧಾತ್ಮಕ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹುಂಡೈ ಕ್ರೆಟಾ ಮಾರಾಟದಲ್ಲಿ ನಂ.1 ಆಗಿದ್ದರೂ, ಸ್ಕೋಡಾ ಕುಶಾಕ್ ಇತ್ತೀಚೆಗೆ ಫೇಸ್‌ಲಿಫ್ಟ್ ಪಡೆದುಕೊಂಡು ಕ್ರೆಟಾಗೆ ಸರಿಯಾದ ಪೈಪೋಟಿ ನೀಡಲು ಸಜ್ಜಾಗಿದೆ. ಸ್ಕೋಡಾ ಕುಶಾಕ್ ಬೆಲೆಗಳು ಸೇರಿದಂತೆ ಕೆಲವು ಪ್ರಮುಖಾಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ ಮಾರುಕಟ್ಟೆಯಲ್ಲಿ ಈ ಕಾರುಗಳ ನಡುವಿನ ಪೈಪೋಟಿಯ ಬಗ್ಗೆ ಮಾತುಗಳು ಹೆಚ್ಚಾಗಿವೆ. ಹಾಗಾಗಿ ಅಪ್‌ಡೇಟ್ ಆಗಿರುವ ಸ್ಕೋಡಾ ಕುಶಾಕ್, ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಲು ಅವಕಾಶವಿದೆಯೇ ಎಂದು ಕಂಡುಹಿಡಿಯಲು ನಾವು ಈ ಎರಡು ಎಸ್‌ಯುವಿಗಳನ್ನು ಹೋಲಿಸಿದ್ದೇವೆ.

ಫೀಚರ್‌ಗಳ ಹೋಲಿಕೆ

ಹುಂಡೈ ಕ್ರೆಟಾದಲ್ಲಿ 10.25 - ಇಂಚಿನ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌, ಡ್ಯುಯಲ್-ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್‌ಗಳನ್ನು ಹೊಂದಿದೆ.

hyundai-creta-vs-2026-skoda-kushaq-specifications-comparison

ಇವಿಷ್ಟೇ ಅಲ್ಲದೆ ಹುಂಡೈ ಕ್ರೆಟಾ ಹಿಂಭಾಗದಲ್ಲಿ ಎಸಿ ವೆಂಟ್‌ಗಳು, ಲೆವೆಲ್ - 2 ಎಡಿಎಎಸ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ಡ್ರೈವ್ ಮೋಡ್‌ಗಳು, ಟ್ರಾಕ್ಷನ್ ಮೋಡ್‌ಗಳು, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್, ಸ್ಟೋರೇಜ್‌ನೊಂದಿಗೆ ಮುಂಭಾಗದ ಕನ್ಸೋಲ್ ಆರ್ಮ್‌ರೆಸ್ಟ್, ಎಲೆಕ್ಟ್ರಿಕ್ ಟೈಲ್‌ಗೇಟ್‌ನಂತಹ ಪ್ರೀಮಿಯಂ ಫೀಚರ್ಸ್ ಪಡೆದಿದೆ.

ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ವಿಷಯಕ್ಕೆ ಬಂದರೆ 10.24 - ICNH ಡಿಜಿಟಲ್ ಕಾಕ್ ‌ಪಿಟ್, 10 - ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಡ್ಯುಯಲ್-ಟೋನ್ ರೂಫ್, 25 ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸೇಫ್ಟಿ ಫೀಚರ್ಸ್, ಪನೋರಮಿಕ್ ಸನ್‌ರೂಫ್, 6-ವೇ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಫ್ರಂಟ್ ಸೀಟುಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳನ್ನು ನೀಡಲಾಗಿದೆ.

hyundai-creta-vs-2026-skoda-kushaq-specifications-comparison

ಇವಿಷ್ಟೇ ಅಲ್ಲದೆ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ನಲ್ಲಿ ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು ಮತ್ತು ಫಾಗ್‌ಲ್ಯಾಂಪ್‌ಗಳು, 17-ಇಂಚಿನ ಅಲಾಯ್ ವೀಲ್‌ಗಳು, ಸೀಕ್ವೆನ್ಷಿಯಲ್ ರಿಯರ್ ಇಂಡಿಕೇಟರ್‌ಗಳು, ಲೆಥೆರೆಟ್ ಸೀಟುಗಳು ಮತ್ತು ಸ್ಪೋರ್ಟಿ ಇಂಟೀರಿಯರ್ ಜೊತೆಗೆ ಮೊದಲ ದರ್ಜೆಯ ಹಿಂಭಾಗದ ಸೀಟ್ ಮಸಾಜರ್‌ನಂತಹ ಹಲವು ಫೀಚರ್‌ಗಳನ್ನು ಹೊಂದಿದೆ.

ಎಂಜಿನ್ ಹೋಲಿಕೆ

ಹುಂಡೈ ಕ್ರೆಟಾ ಮೂರು ವಿಭಿನ್ನ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ 1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, ಇದು 157.57 bh ಪವರ್ ಮತ್ತು 253 Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5L ಡೀಸೆಲ್ ಎಂಜಿನ್, ಇದು 113.98 bh ಪವರ್ ಮತ್ತು 250 Nm ಟಾರ್ಕ್ ಉತ್ಪಾದಿಸುತ್ತದೆ. ಇನ್ನೊಂದು 1.5L ಪೆಟ್ರೋಲ್ ಎಂಜಿನ್, ಇದು 113.1 bh ಪವರ್ ಮತ್ತು 143.8 Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್, IVT ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ.

hyundai-creta-vs-2026-skoda-kushaq-specifications-comparison

ಸ್ಕೋಡಾ ಕುಶಾಕ್ ವಿಷಯಕ್ಕೆ ಬಂದರೆ 1.0L TSI ಎಂಜಿನ್ 113 bh ಪವರ್ ಮತ್ತು 178 Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5L TSI ಎಂಜಿನ್ ಆಗಿದ್ದು, ಇದು 148 bh ಪವರ್ ಮತ್ತು 250 Nm ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಹಾಗೂ 7-ಸ್ಪೀಡ್ ಡ್ಯುಯಲ್-ಕ್ಲಚ್ DSG ಗೆರ್‌ಬಾಕ್ಸ್‌ನೊಂದಿಗೆ ಬರುತ್ತದೆ.

ಬೆಲೆ ಹೋಲಿಕೆ: ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ ರೂ.10.40 ಲಕ್ಷಕ್ಕೆ (ಎಕ್ಸ್ ಶೋರೂಂ) ಬಿಡುಗಡೆಯಾಗುವ ನಿರೀಕ್ಷೆಯಿದೆ. ಹುಂಡೈ ಕ್ರೆಟಾದ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 10.79 ಲಕ್ಷವಿದೆ. ಸ್ಕೋಡಾ ಕುಶಾಕ್ ಒಂದು ವೇಳೆ ಕಮ್ಮಿ ಬೆಲೆಗೆ ಬಿಡುಗಡೆಯಾದಲ್ಲಿ ಕ್ರೆಟಾದ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 2026ರ ಹೊಸ ಸ್ಕೋಡಾ ಕುಶಾಕ್ ಬೆಲೆಗಳು ಬಹಿರಂಗವಾದ ನಂತರ ಯಾರು ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗಲಿದೆ.

More from DriveSpark

Article Published On: Tuesday, February 3, 2026, 15:48 [IST]
English summary
Hyundai creta vs 2026 skoda kushaq specifications comparison
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+