ಹಬ್ಬದ ಆಫರ್: Hyundai Creta vs Kia Seltos - ಯಾವುದು ಬೆಸ್ಟ್? ಡೆಲಿವರಿ ಮತ್ತು ಡೀಲ್ಸ್ ಮಾಹಿತಿ ಇಲ್ಲಿದೆ
ಈ ಹಬ್ಬದ ಋತುವಿನಲ್ಲಿ ಹುಂಡೈ ಕ್ರೇಟಾ (Hyundai Creta) ಮತ್ತು ಕಿಯಾ ಸೆಲ್ಟೋಸ್ (Kia Seltos) ನಡುವೆ ಯಾವುದು ಬೆಸ್ಟ್ ಎಂದು ನೋಡ್ತಿರೋ ಗ್ರಾಹಕರಿಗೆ ಪ್ರಮುಖವಾಗಿ ಎರಡೇ ವಿಷಯ ಮುಖ್ಯ: ಸಿಗೋ ಬೆಸ್ಟ್ ಡೀಲ್ ಹಾಗೂ ಅಕ್ಟೋಬರ್ 19–21 ರೊಳಗೆ ಡೆಲಿವರಿ ಸಿಗುತ್ತಾ ಅನ್ನೋದು! ಡೀಲರ್ಗಳ ಮಾಹಿತಿಯಂತೆ, ಕ್ರೇಟಾ ಮೇಲೆ ಸುಮಾರು ₹1.15 ಲಕ್ಷದವರೆಗೆ ಆಫರ್ಗಳು ಲಭ್ಯವಿದ್ದರೆ, ಸೆಲ್ಟೋಸ್ಗೆ ₹40,000 ವರೆಗೆ ಲಾಭ (ಹೆಚ್ಚಾಗಿ ಲಾಯಲ್ಟಿ ಅಥವಾ ಸ್ಕ್ರ್ಯಾಪೇಜ್ ಆಫರ್) ಸಿಗುತ್ತಿದೆ. ಎರಡೂ ಕಾರುಗಳಲ್ಲೂ 6 ಏರ್ಬ್ಯಾಗ್ಗಳು ಮತ್ತು ESC ಸ್ಟ್ಯಾಂಡರ್ಡ್ ಆಗಿ ಸಿಗಲಿವೆ. ಜೊತೆಗೆ, ಸೆಲ್ಟೋಸ್ ಕಾರು ಭಾರತ NCAP ಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಇನ್ನು GRAP ಹಂತ-III ನಿರ್ಬಂಧಗಳು BS6 ಖಾಸಗಿ ಕಾರುಗಳಿಗೆ ಅನ್ವಯಿಸುವುದಿಲ್ಲ.
ಕಾರುಗಳ ಲಭ್ಯತೆ ನಗರ ಮತ್ತು ವೇರಿಯೆಂಟ್ ಆಧರಿಸಿ ಬದಲಾಗುತ್ತದೆ. ದೆಹಲಿಯಲ್ಲಿ ಸೆಲ್ಟೋಸ್ ಕಾರುಗಳ ಸ್ಟಾಕ್ ಉತ್ತಮವಾಗಿದ್ದು, ತ್ವರಿತ ಡೆಲಿವರಿ ಸಿಗುತ್ತಿದೆ. ಆದರೆ ಕ್ರೇಟಾ ಲಭ್ಯತೆಯು ನೀವು ಆಯ್ಕೆ ಮಾಡುವ ಬಣ್ಣ ಮತ್ತು ವೇರಿಯೆಂಟ್ ಮೇಲಷ್ಟೇ ನಿರ್ಧಾರವಾಗುತ್ತದೆ. ಇನ್ನು ಬೆಂಗಳೂರಿನಲ್ಲಿ ಸೆಲ್ಟೋಸ್ನ ಕೆಲವು ವೇರಿಯೆಂಟ್ಗಳಿಗೆ 4 ರಿಂದ 8 ವಾರಗಳ ವೇಟಿಂಗ್ ಪೀರಿಯಡ್ ಇದೆ. ಕ್ರೇಟಾಗೂ ವೇಟಿಂಗ್ ಲಿಸ್ಟ್ ಇದೆಯಾದರೂ, ಆಲ್ಟರ್ನೇಟಿವ್ ಆಪ್ಷನ್ಸ್ ಮೂಲಕ ಬೇಗ ಸಿಗುವ ಸಾಧ್ಯತೆಯಿದೆ. ಮುಂಬೈನಲ್ಲಿ ಪರಿಸ್ಥಿತಿ ಮಿಕ್ಸ್ ಆಗಿದ್ದು, ಹಬ್ಬಕ್ಕೆ ಮುಂಚಿತವಾಗಿ ಕಾರು ಬೇಕಿದ್ದರೆ ಕಲರ್ ಅಥವಾ ಗೇರ್ಬಾಕ್ಸ್ ಚಾಯ್ಸ್ ಸ್ವಲ್ಪ ಬದಲಾಯಿಸಿಕೊಂಡರೆ ಬೇಗನೆ ಡೆಲಿವರಿ ಪಡೆಯಬಹುದು.

ಹುಂಡೈ ಕ್ರೇಟಾ vs ಕಿಯಾ ಸೆಲ್ಟೋಸ್: ನಗರವಾರು ಆಫರ್ಗಳು ಮತ್ತು ಡೀಲ್ಸ್
ಡಿಸ್ಕೌಂಟ್ಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತವೆ. ದೆಹಲಿಯಲ್ಲಿ ಕ್ರೇಟಾ ಕಾರಿಗೆ ನಗದು ರಿಯಾಯಿತಿ ಹಾಗೂ ಬುಕಿಸಿಂಗ್ ಬೋನಸ್ಗಳನ್ನು ಡೀಲರ್ಗಳು ನೀಡುತ್ತಿದ್ದಾರೆ. ಸೆಲ್ಟೋಸ್ ಮೇಲೆ ಕಡಿಮೆ ಆಫರ್ಗಳು ಇರುವುದರಿಂದ (ಹೆಚ್ಚಾಗಿ ಲಾಯಲ್ಟಿ ಮತ್ತು ಸ್ಕ್ರ್ಯಾಪೇಜ್), ಅಕ್ಸೆಸರೀಸ್ ಅಥವಾ ಇನ್ಶೂರೆನ್ಸ್ನಲ್ಲಿ ರಿಯಾಯಿತಿಗೆ ಚೌಕಾಶಿ ಮಾಡಬಹುದು. ಸದ್ಯ ದೆಹಲಿಯಲ್ಲಿ ಕ್ರೇಟಾ SX(O) iVT ಆನ್-ರೋಡ್ ಬೆಲೆ ಸುಮಾರು ₹21.1 ಲಕ್ಷ ಇದ್ದರೆ, ಸೆಲ್ಟೋಸ್ HTX(A) ಡೀಸೆಲ್ ಬೆಲೆ ಸುಮಾರು ₹22.2 ಲಕ್ಷ ಇದೆ. ಇನ್ನು 5 ವರ್ಷದ ಲೋನ್ಗೆ ಪ್ರತಿ ಲಕ್ಷಕ್ಕೆ ಮಾಸಿಕ ಸುಮಾರು ₹2,100 ಇಎಂಐ ಬೀಳಲಿದೆ.
ದೆಹಲಿಯ ಸದ್ಯದ ಇಂಧನ ದರ ಹಾಗೂ ARAI ಮೈಲೇಜ್ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಚಾಲನಾ ವೆಚ್ಚವನ್ನು ಲೆಕ್ಕ ಹಾಕಬಹುದು. ನಿಮ್ಮ ತಿಂಗಳ ಪ್ರಯಾಣ 1,000 ಕಿ.ಮೀ ಗಿಂತ ಕಡಿಮೆಯಿದ್ದು, ಹೆಚ್ಚಾಗಿ ಸಿಟಿಯಲ್ಲೇ ಓಡಾಡೋದಾದರೆ ಪೆಟ್ರೋಲ್ ಆಪ್ಷನ್ ಸೂಕ್ತ. ಆದರೆ ಹೈವೇ ಡ್ರೈವಿಂಗ್ ಹೆಚ್ಚಿದ್ದರೆ ಡೀಸೆಲ್ ಅತ್ಯುತ್ತಮ ಮೈಲೇಜ್ ನೀಡುತ್ತದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ವ್ಯತ್ಯಾಸ ಹೆಚ್ಚಿರುವುದರಿಂದ ಡೀಸೆಲ್ ಹೆಚ್ಚು ಉಳಿತಾಯ ತರುತ್ತದೆ. ಪ್ರತಿ ಕಿ.ಮೀ ವೆಚ್ಚದ ಲೆಕ್ಕಾಚಾರ ಇಲ್ಲಿದೆ:
| ಮಾಡೆಲ್ (AT) | ಪೆಟ್ರೋಲ್ (ರೂ/ಕಿಮೀ) | ಡೀಸೆಲ್ (ರೂ/ಕಿಮೀ) |
|---|---|---|
| ಕ್ರೇಟಾ IVT / AT | ~5.8 | ~5.0 |
| ಸೆಲ್ಟೋಸ್ IVT / AT | ~5.8 | ~5.4 |
ಸುರಕ್ಷತೆ ಮತ್ತು ಫೀಚರ್ಗಳ ಆಧಾರದಲ್ಲೂ ನಿರ್ಧಾರ ತೆಗೆದುಕೊಳ್ಳಬಹುದು. ಕಿಯಾ ಸೆಲ್ಟೋಸ್ 5-ಸ್ಟಾರ್ BNCAP ಸೇಫ್ಟಿ ರೇಟಿಂಗ್ ಹೊಂದಿದ್ದು, HTX(A)/GTX(A) ಹಾಗೂ ಮೇಲಿನ ವೇರಿಯೆಂಟ್ಗಳಲ್ಲಿ ಲೆವೆಲ್-2 ADAS ಪಡೆದಿದೆ. ಕ್ರೇಟಾದಲ್ಲಿ 19 ಫಂಕ್ಷನ್ಗಳಿರುವ ಲೆವೆಲ್-2 ADAS ಹೈ-ಎಂಡ್ ಆವೃತ್ತಿಗಳಲ್ಲಿ ಲಭ್ಯವಿದ್ದು, 6 ಏರ್ಬ್ಯಾಗ್ ಹಾಗೂ ESC ಎಲ್ಲಾ ವೇರಿಯೆಂಟ್ಗಳಲ್ಲೂ ಸ್ಟ್ಯಾಂಡರ್ಡ್ ಆಗಿದೆ. ದಿನನಿತ್ಯದ ಸಿಟಿ ಪ್ರಯಾಣಕ್ಕೆ ಪೆಟ್ರೋಲ್ IVT ಬೆಸ್ಟ್; ಹೆಚ್ಚು ಲಾಂಗ್ ರೈಡ್ ಮಾಡುವವರಿಗೆ ಡೀಸೆಲ್ AT ಸೂಕ್ತ. ಆದರೆ ಡೆಹಲಿ-ಎನ್ಸಿಆರ್ (NCR) ಖರೀದಿದಾರರು 10 ವರ್ಷಗಳ ಡೀಸೆಲ್ ವಾಹನ ಮಿತಿ ನಿಯಮವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.


Click it and Unblock the Notifications
