ಒಂದು ಹೈಬ್ರಿಡ್ ಪ್ರೀಮಿಯಂ... ಮತ್ತೊಂದು ರಗಡ್ ಪವರ್‌ಫುಲ್: ಒಂದೇ ಬೆಲೆ, ಯಾವುದು ಬೆಸ್ಟ್?

ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ತುಂಬಾ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಪೈಪೋಟಿಯೊಂದಿಗೆ ತಮ್ಮ ಮಾಡಲ್‌ಗಳನ್ನು ಅಪ್‌ಡೇಟ್ ಮಾಡುತ್ತಿವೆ. ಮೊನ್ನೆಯಷ್ಟೆ ರೆನಾಲ್ಟ್ ಡಸ್ಟರ್ ಅನಾವರಣಗೊಂಡಿತ್ತು, ಅದಕ್ಕೂ ಮುನ್ನ ಟಾಟಾ ತನ್ನ ಸಿಯೆರಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಇದು ಭಾರತದಲ್ಲಿ ಆಯಾ ಬ್ರಾಂಡ್‌ಗಳ ಪ್ರತಿಷ್ಟೆಗೆ ಸವಾಲ್ ಎಂಬಂತೆ ಮಿಡ್‌ಸೈಜ್ ಎಸ್‌ಯುವಿಗಳನ್ನು ತುಂಬಾ ಸ್ಪರ್ಧಾತ್ಮಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ತುಂಬಾ ಹೆಸರು ಮಾಡಿರುವ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಹ್ಯುಂಡೈ ಕ್ರೆಟಾ ನಡುವೆ ಪೈಪೋಟಿ ಕೂಡ ಇದೆ.

ಎರಡೂ 5-ಸೀಟರ್ ಎಸ್‌ಯುವಿಗಳಾಗಿದ್ದು, ವೈಶಿಷ್ಟ್ಯಗಳಿಂದ ಸಮೃದ್ಧವಾಗಿವೆ. ಎರಡೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ಬ್ರ್ಯಾಂಡ್‌ಗಳಿಂದ ಬಂದಿವೆ. ಆದರೂ, ಅವು ಸ್ವಲ್ಪ ವಿಭಿನ್ನ ರೀತಿಯ ಖರೀದಿದಾರರನ್ನು ಆಕರ್ಷಿಸುತ್ತವೆ. ಹಾಗಾದ್ರೆ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಹುಂಡೈ ಕ್ರೆಟಾ ನಡುವಿನ ಬೆಲೆ, ಎಂಜಿನ್, ಫಿಚರ್ಸ್ ನಡುವಿನ ವ್ಯತ್ಯಾಸವನ್ನು ನೋಡೋಣ.

hyundai-creta-vs-toyota-urban-cruiser-hyryder-comparison

ಬೆಲೆ: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಯು ರೂ. 10,94 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಕ್ರೆಟಾ ರೂ. 10.79 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹುಂಡೈ ಕ್ರೆಟಾ ದಿಟ್ಟ ಮತ್ತು ಆಧುನಿಕ ಡಿಸೈನ್ ಹೊಂದಿದ್ದು ಅದು ತಕ್ಷಣವೇ ಎದ್ದು ಕಾಣುವುದರ ಜೊತೆಗೆ ರಗಡ್ ಲುಕ್ ಹೊಂದಿದೆ. ಮತ್ತೊಂದೆಡೆ ಟೊಯೋಟಾ ಹೈರೈಡರ್ ಹೆಚ್ಚು ಪ್ರಬುದ್ಧವಾಗಿದ್ದು, ಪ್ರೀಮಿಯಂ ಸಿಟಿ ಕಾರಿನಂತೆ ಕಾಣುತ್ತದೆ.

ಫೀಚರ್ಸ್: ತಂತ್ರಜ್ಞಾನದ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಒಂದು ಹೆಜ್ಜೆ ಮುಂದಿದೆ, ಇದು ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು, ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಸೀಟ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಾಯ್ಸ್ ಕಮಾಂಡ್‌ಗಳನ್ನು ಹೊಂದಿದೆ. ಇದರ ಕ್ಯಾಬಿನ್ ಹೆಚ್ಚು ತಂತ್ರಜ್ಞಾನದಿಂದ ಕೂಡಿದ್ದು, ಇದರ ಆಕರ್ಷಕ ಇಂಟೀರಿಯರ್ ಅನ್ನು ಖರೀದಿದಾರರು ಇಷ್ಟಪಡುತ್ತಾರೆ.

hyundai-creta-vs-toyota-urban-cruiser-hyryder-comparison

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ವಿಷಯಕ್ಕೆ ಬಂದರೆ ವೆಂಟಿಲೇಟೆಡ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, 9-ಇಂಚಿನ ಟಚ್‌ಸ್ಕ್ರೀನ್, ಹೆಡ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ನೀಡುತ್ತದೆ. ಟೊಯೋಟಾ ತನ್ನ ಮೌಲ್ಯವನ್ನು ಹೆಚ್ಚಿಸಲು 2026 ರಲ್ಲಿ ಹೊಸ ಟೆಕ್ ಪ್ಯಾಕೇಜ್‌ಗಳನ್ನು ಸಹ ಇತ್ತೀಚೆಗೆ ಸೇರಿಸಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್: ಹುಂಡೈ ಕ್ರೆಟಾ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಬರುತ್ತದೆ. ಸುಮಾರು 160 PS ಪವರ್ ಹೊರಹಾಕುವ ಟರ್ಬೊ-ಪೆಟ್ರೋಲ್ ಆವೃತ್ತಿಯು ಇಲ್ಲಿ ಅತ್ಯಂತ ಪವರ್‌ಫುಲ್ ಆಯ್ಕೆಯಾಗಿದೆ. ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 17.4 ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ (ರಿಯಲ್‌ ವರ್ಲ್ಡ್‌ನಲ್ಲಿ ಕಡಿಮೆ ಇರಬಹುದು).

hyundai-creta-vs-toyota-urban-cruiser-hyryder-comparison

ಟೊಯೋಟಾ ಹೈರೈಡರ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ, ಅವುಗಳೆಂದರೆ - ಸ್ಟ್ರಾಂಗ್ ಹೈಬ್ರಿಡ್, ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಮತ್ತು CNG ಆಗಿವೆ. ಇದರ ಪ್ರಮುಖ ಅಂಶವೆಂದರೆ ಸ್ಟ್ರಾಂಗ್ ಹೈಬ್ರಿಡ್, ಇದು ಬರೋಬ್ಬರಿ 27.97 ಕಿ.ಮೀ ಮೈಲೇಜ್ ನೀಡುತ್ತದೆ, ಇದು ತನ್ನ ವರ್ಗದಲ್ಲಿ ಅತ್ಯಂತ ಇಂಧನ-ಸಮರ್ಥ SUV ಗಳಲ್ಲಿ ಒಂದಾಗಿದೆ. ಕಡಿಮೆ ಚಾಲನಾ ವೆಚ್ಚವನ್ನು ಬಯಸುವ ನಗರ ಬಳಕೆದಾರರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮೈಲೇಜ್, ಹೈಬ್ರಿಡ್ ತಂತ್ರಜ್ಞಾನ ಮತ್ತು ಕಡಿಮೆ ಚಾಲನಾ ವೆಚ್ಚಗಳು ಮುಖ್ಯವಾಗಿದ್ದರೆ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಖರೀದಿಸಿ. ನೀವು ಹೈ-ಪರ್ಫಾಮೆನ್ಸ್, ಆಕರ್ಷಕ ಫೀಚರ್ಸ್ ಮತ್ತು ಹೆಚ್ಚು ತಂತ್ರಜ್ಞಾನದಿಂದ ತುಂಬಿದ ಕ್ಯಾಬಿನ್ ಬಯಸಿದರೆ ಹುಂಡೈ ಕ್ರೆಟಾವನ್ನು ಖರೀದಿಸಿ. ಎರಡೂ ಆಯಾ ವಿಭಾಗದಲ್ಲಿ ಅತ್ಯುತ್ತಮ ಎಸ್‌ಯುವಿಗಳಾಗಿವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

More from DriveSpark

Article Published On: Friday, January 30, 2026, 19:15 [IST]
English summary
Hyundai creta vs toyota urban cruiser hyryder comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+