ಎರಡು ಹೊಸ ಹುಂಡೈ ಪ್ರೈಮ್ ಕಾರುಗಳು ಬಿಡುಗಡೆ: ಕೇವಲ 6 ಲಕ್ಷ ಬೆಲೆ... 28.40 ಕಿ.ಮೀ ಮೈಲೇಜ್

ಭಾರತದ ಪ್ರಮುಖ ಕಾರು ಬ್ರ್ಯಾಂಡ್‌ಗಳಲ್ಲಿ ಒಂದಾದ ಹುಂಡೈ ಮೋಟಾರ್, ಇಂದು ತನ್ನ ಮೀಸಲಾದ ಟ್ಯಾಕ್ಸಿ ಕಾರುಗಳಾದ ಪ್ರೈಮ್ HB (ಹ್ಯಾಚ್‌ಬ್ಯಾಕ್) ಮತ್ತು ಪ್ರೈಮ್ SD (ಸೆಡಾನ್) ಗಳನ್ನು ಪ್ರಾರಂಭಿಸುವುದರೊಂದಿಗೆ ವಾಣಿಜ್ಯ ವಾಹನ ವಿಭಾಗಕ್ಕೆ ಪ್ರವೇಶವನ್ನು ಘೋಷಿಸಿದೆ. ಫ್ಲೀಟ್ ಆಪರೇಟರ್‌ಗಳು ಮತ್ತು ಟ್ಯಾಕ್ಸಿ ಉದ್ಯಮಿಗಳ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ಪ್ರೈಮ್ ಸಿರೀಸ್, ನಂಬಿಕೆ, ವಿಶ್ವಾಸಾರ್ಹತೆ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ಬಲವಾದ ಗಳಿಕೆಯ ಸಾಮರ್ಥ್ಯದೊಂದಿಗೆ ಉತ್ತಮ ಸೌಕರ್ಯವನ್ನು ನೀಡುತ್ತದೆ ಎಂದು ಹ್ಯುಂಡೈ ಹೇಳಿದೆ.

ಪ್ರೈಮ್ HB ಮತ್ತು ಪ್ರೈಮ್ SD ಎರಡೂ ಸಾಬೀತಾದ ಮತ್ತು ವಿಶ್ವಾಸಾರ್ಹ 1.2L ಕಪ್ಪಾ 4-ಸಿಲಿಂಡರ್ ಎಂಜಿನ್ (ಪೆಟ್ರೋಲ್ + CNG) ನೊಂದಿಗೆ ಲಭ್ಯವಿದೆ. ಇದು ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಪ್ರತಿ ಕಿಲೋಮೀಟರ್‌ಗೆ ಹೆಚ್ಚಿನ ಗಳಿಕೆ ನೀಡುತ್ತದೆ. ಪ್ರೈಮ್ HB ರೂ.5,99,900 ಮತ್ತು ಪ್ರೈಮ್ SD ರೂ.6,89,900 (ಎಕ್ಸ್‌ ಶೋರೂಂ) ಆರಂಭಿಕ ಬೆಲೆಗಳಲ್ಲಿ ಖರೀದಿಗೆ ಸಿಗಲಿವೆ.

hyundai-enters-commercial-mobility-segment-with-the-launch-of-prime-taxi

ಇವು ಭಾರತದಾದ್ಯಂತ ವಾಣಿಜ್ಯ ಖರೀದಿದಾರರು, ಫ್ಲೀಟ್ ಮತ್ತು ಟ್ಯಾಕ್ಸಿ ಆಪರೇಟರ್‌ಗಳಿಗೆ ಆಕರ್ಷಕ ಆಯ್ಕೆಯಾಗಲಿವೆ. ಗ್ರಾಹಕರು ಭಾರತದಾದ್ಯಂತ ಯಾವುದೇ ಹುಂಡೈ ಶೋರೂಮ್‌ನಲ್ಲಿ ರೂ.5,000 ಬುಕಿಂಗ್ ಮೊತ್ತವನ್ನು ಪಾವತಿಸುವ ಮೂಲಕ ಹುಂಡೈ ಪ್ರೈಮ್ ಟ್ಯಾಕ್ಸಿ ಕಾರುಗಳನ್ನು ಬುಕ್ ಮಾಡಬಹುದು. ಎರಡೂ ವಾಹನಗಳಿಗೆ 4ನೇ ಮತ್ತು 5ನೇ ವರ್ಷ / 1,80,000 ಕಿ.ಮೀ (ಯಾವುದು ಮೊದಲು) ವಾರೆಂಟಿ ಪ್ಯಾಕೇಜ್‌ಗಳೊಂದಿಗೆ ಬರುತ್ತವೆ ಎಂದು ಹ್ಯುಂಡೈ ತಿಳಿಸಿದೆ.

ಪ್ರೈಮ್ HB ಮತ್ತು ಪ್ರೈಮ್ SD ಎರಡೂ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಸಮಗ್ರವಾಗಿ ಸಜ್ಜುಗೊಂಡಿವೆ. ಈ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ AC ವೆಂಟ್‌ಗಳು, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVMಗಳು, ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್‌ಗಳು, ಸ್ಪೀಕರ್‌ಗಳು, ಮುಂಭಾಗದ ಸಾಲಿಗೆ ಫಾಸ್ಟ್ USB ಚಾರ್ಜರ್ (ಟೈಪ್- C) ಒದಗಿಸಲಾಗಿದೆ.

ಇವಿಷ್ಟೇ ಅಲ್ಲದೆ ಮುಂಭಾಗ ಮತ್ತು ಹಿಂಭಾಗದ ಪವರ್ ವಿಂಡೋಗಳು, ಹಿಂಭಾಗದ ಡಿಫಾಗರ್, ಸೆಂಟ್ರಲ್ ಲಾಕಿಂಗ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಕಂಪನಿ-ಅಳವಡಿಸಿದ ವೇಗ ಮಿತಿ ಕಾರ್ಯ (80 ಕಿಮೀ/ಗಂ), ಹಿಂಭಾಗದ ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು (PRIME HB ಮಾತ್ರ), ಕೀಲೆಸ್ ಎಂಟ್ರಿ (PRIME HB ಮಾತ್ರ) ನೀಡಲಾಗಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ 22.96 ಸೆಂ.ಮೀ (9") ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹಿಂಭಾಗದ ಕ್ಯಾಮೆರಾ, 3-ವರ್ಷಗಳ ವಾರೆಂಟಿ, ಪ್ಯಾನಿಕ್ ಬಟನ್ ಹೊಂದಿರುವ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನ (4 ಸಂಖ್ಯೆಗಳು) ಹಾಗೂ ಪ್ರೈಮ್ HB ಮತ್ತು ಪ್ರೈಮ್ SD ಎರಡೂ ಕಾರುಗಳು ಅಟ್ಲಾಸ್ ವೈಟ್, ಟೈಫೂನ್ ಸಿಲ್ವರ್ ಮತ್ತು ಅಬಿಸ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ವಾಣಿಜ್ಯ ವಾಹನಗಳನ್ನು ಅಸಾಧಾರಣ ಪರ್ಫಾಮೆನ್ಸ್ ನೀಡಲು ವಿನ್ಯಾಸಗೊಳಿಸಲಾಗಿದ್ದು, ಅದೇ ಸಮಯದಲ್ಲಿ ಚಾಲಕ ಮತ್ತು ಪ್ರಯಾಣಿಕರಿಬ್ಬರಿಗೂ ಅತ್ಯುತ್ತಮ ಸವಾರಿ ಮತ್ತು ಸೌಕರ್ಯವನ್ನು ನೀಡುತ್ತದೆ. ಕಾರ್ಯಾಚರಣೆಯ ವೆಚ್ಚಗಳಿಗೆ ಬಲವಾದ ಒತ್ತು ನೀಡುವ ಮೂಲಕ, ಹುಂಡೈ ಪ್ರೈಮ್ ಶ್ರೇಣಿಯು ಅಸಾಧಾರಣ ಇಂಧನ ದಕ್ಷತೆಯನ್ನು ನೀಡುತ್ತದೆ - ಪ್ರೈಮ್ SD ಗೆ 28.40 ಕಿ.ಮೀ/ಕೆಜಿ ಮೈಲೇಜ್ ಮತ್ತು ಪ್ರೈಮ್ HB ಗೆ 27.32 ಕಿ.ಮೀ/ಕೆಜಿ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ಹೊಸ ಕೈಗೆಟುಕುವ ಕಾರುಗಳು ಟ್ಯಾಕ್ಸಿ ನಿರ್ವಾಹಕರಿಗೆ ತಮ್ಮ ಕಾರ್ಯಾಚರಣೆ ಮತ್ತು ಆದಾಯವನ್ನು ಹೆಚ್ಚಿಸುವ ವಿಶ್ವಾಸಾರ್ಹ ವಾಹನಗಳೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ. ನಂಬಿಕೆ, ವಿಶ್ವಾಸಾರ್ಹತೆ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ಬಲವಾದ ಗಳಿಕೆಯ ಸಾಮರ್ಥ್ಯದೊಂದಿಗೆ ಉತ್ತಮ ಸೌಕರ್ಯವನ್ನು ನೀಡುತ್ತವೆ ಎಂದು ಹ್ಯುಂಡೈ ಹೇಳಿದೆ.

More from DriveSpark

Article Published On: Thursday, January 1, 2026, 8:47 [IST]
English summary
Hyundai enters commercial mobility segment with the launch of prime taxi
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+