ಮುಗಿಬಿದ್ದ ಜನ.. ಸದ್ದಿಲ್ಲದೇ 1 ಲಕ್ಷ ಬುಕ್ಕಿಂಗ್ಸ್ ಹ್ಯುಂಡೈ ತೆಕ್ಕೆಗೆ.. ಈ ಕಾರಿನ ಹೊಸ ವೇರಿಯೆಂಟ್ ಬಿಡುಗಡೆ.. ಬೆಲೆ ಎಷ್ಟು?

2025ರ ನ.4 ರಂದು ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Second Gen Hyundai Venue) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರಿನ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿ ಬುಕ್ಕಿಂಗ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದ್ದು, ಸರಿ ಸುಮಾರು 1 ಲಕ್ಷ ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿ ಕಂಪನಿಯು ಯಶಸ್ವಿಯಾಗಿದೆ. ಇದರ ಸವಿನೆನಪಿಗಾಗಿ ನೂತನ ರೂಪಾಂತರವೊಂದನ್ನು ಬಿಡುಗಡೆಗೊಳಿಸಿದೆ.

ಯಾವ ರೂಪಾಂತರ (ವೇರಿಯೆಂಟ್) ಬಿಡುಗಡೆ:

ಹ್ಯುಂಡೈ ವೆನ್ಯೂ ಕಾರಿಗಾಗಿ ಹೊಚ್ಚ ಹೊಸ ಹೆಚ್ಎಕ್ಸ್8 ಡೀಸೆಲ್ ಎಟಿ (HX8 Diesel AT) ರೂಪಾಂತರವನ್ನು ಪರಿಚಯಿಸಲಾಗಿದೆ. ಇದು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.13.70 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಜೊತೆಗೆ ಹಲವು ನವೀನತೆಗಳಿಗೂ ಸಾಕ್ಷಿಯಾಗಿದೆ.

Hyundai Venue HX8 Diesel AT Variant Launched India Rs 13 70 Lakh Price Details

ಈ ರೂಪಾಂತರವು ಫ್ರಂಟ್ ರೋ ವೆಂಟಿಲೇಟೆಡ್ ಸೀಟ್‌ಗಳು, ವೆನ್ಯೂ ಬ್ರಾಂಡಿಂಗ್ ಹೊಂದಿರುವ ಡುಯಲ್-ಟೋನ್ ಲೆದರೆಟ್ ಸೀಟ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಎಲೆಕ್ಟ್ರಿಕ್ 4-ವೇ ಡ್ರೈವರ್ ಸೀಟ್ ಅಡ್ಜಸ್ಟ್, ಒಟಿಎ ಅಪ್ಡೇಟ್ಸ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ವಿತ್ ಆಟೋ ಹೋಲ್ಡ್, ರೇರ್ ಡಿಸ್ಕ್ ಬ್ರೇಕ್‌ಗಳು, ಆಂಬಿಯೆಂಟ್ ಲೈಟಿಂಗ್, ಡ್ರೈವ್ ಮೋಡ್ (ಇಕೋ, ನಾರ್ಮಲ್, ಸ್ಪೋರ್ಟ್ಸ್) ಟ್ರಾಕ್ಷನ್ ಕಂಟ್ರೋಲ್ ಮೋಡ್ (ಸ್ಯಾಂಡ್, ಮಡ್, ಸ್ನೋ) ಪ್ಯಾಡಲ್ ಶಿಫ್ಟರ್‌ಗಳನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

ನೂತನ 'ಹೆಚ್ಎಕ್ಸ್8 ಡೀಸೆಲ್ ಎಟಿ' ರೂಪಾಂತರ 1.5-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 114 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 250 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.9 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

Hyundai Venue HX8 Diesel AT Variant Launched India Rs 13 70 Lakh Price Details

ಸ್ಟ್ಯಾಂಡರ್ಡ್ 'ಹ್ಯುಂಡೈ ವೆನ್ಯೂ' ವಿಶೇಷತೆಗಳೇನು:

ಇದು ಕನಿಷ್ಠ ರೂ.8 ಲಕ್ಷ ಹಾಗೂ ಗರಿಷ್ಠ ರೂ.15.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಹೆಚ್ಎಕ್ಸ್2, ಹೆಚ್ಎಕ್ಸ್4, ಹೆಚ್ಎಕ್ಸ್5 ಮತ್ತು ಹೆಚ್ಎಕ್ಸ್6 ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು & 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಈ ಕಾರು ಹೆಚ್ಚು ವಿಶಾಲವಾಗಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,520 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ, ಡ್ರ್ಯಾಗನ್ ರೆಡ್, ಹ್ಯಾಝೆಲ್ ಬ್ಲೂ ಹಾಗೂ ಮಿಸ್ಟಿಕ್ ಸಫಿರ್ ಎಂಬ ಲಭ್ಯವಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 375 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.

Hyundai Venue HX8 Diesel AT Variant Launched India Rs 13 70 Lakh Price Details

ನೂತನ 'ವೆನ್ಯೂ' ಡೀಸೆಲ್ ಪವರ್‌ಟ್ರೇನ್‌ನೊಂದಿಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.0-ಲೀ. ಟರ್ಬೋ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಹಾಗೆಯೇ ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17.52 ರಿಂದ 20 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್‌ ಸೆಟಪ್, 8-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್ ಹಾಗೂ ಸನ್‌ರೂಫ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

'ಹ್ಯುಂಡೈ ವೆನ್ಯೂ' ಮಾರಾಟ ಹೇಗಿದೆ:

ಈ 2026ರ ಫೆಬ್ರವರಿವಲ್ಲಿ ಒಟ್ಟು 10,494 ಯುನಿಟ್‌ 'ಹ್ಯುಂಡೈ ವೆನ್ಯೂ' ಕಾರುಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 10,125 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 4% ಬೆಳವಣಿಗೆಯಾಗಿದೆ.

More from DriveSpark

Article Published On: Tuesday, March 10, 2026, 15:55 [IST]
English summary
Hyundai venue hx8 diesel at variant launched india rs 13 70 lakh price details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+