ಹ್ಯುಂಡೈ ವೆನ್ಯೂ vs ಮಹೀಂದ್ರಾ XUV 3XO: ಸುರಕ್ಷತೆ, ಮೈಲೇಜ್ ಮತ್ತು ಫೀಚರ್ಸ್‌ನಲ್ಲಿ ಯಾವುದು ಬೆಸ್ಟ್?

ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO ಮಧ್ಯೆ ಯಾವುದು ಬೆಸ್ಟ್ ಎಂದು ನೋಡ್ತಿದೀರಾ? ಈ ಎರಡೂ ಕಾಂಪ್ಯಾಕ್ಟ್ ಎಸ್‌ಯುವಿಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಎರಡೂ ಕಾರುಗಳು ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿವೆ, ಪ್ರಮುಖ ನಗರಗಳಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಆನ್‌ರೋಡ್ ಆರಂಭಿಕ ಬೆಲೆ ಹೊಂದಿದ್ದು, ಬಲವಾದ ಡೀಸೆಲ್ ಆಯ್ಕೆಗಳನ್ನೂ ನೀಡುತ್ತವೆ. ವೆನ್ಯೂ ಕಾರಿನಲ್ಲಿ ಹೊಸದಾಗಿ ಡೀಸೆಲ್-ಆಟೋಮ್ಯಾಟಿಕ್ ಆಯ್ಕೆಯನ್ನು ವಿಸ್ತರಿಸಲಾಗಿದ್ದರೆ, XUV 3XO ತಾನೇನು ಕಡಿಮೆಯಿಲ್ಲ ಎಂಬಂತೆ ಬಲವಾದ ಸುರಕ್ಷತೆ ಹಾಗೂ ಸ್ಮೂತ್ ಪೆಟ್ರೋಲ್ ಆಟೋಮ್ಯಾಟಿಕ್‌ನಿಂದ ಗಮನ ಸೆಳೆಯುತ್ತಿದೆ. ಈ ಎರಡೂ ಕಾರುಗಳ ಬೆಲೆ, ADAS ಲಭ್ಯತೆ, ಮೈಲೇಜ್, ಫೀಚರ್‌ಗಳು ಮತ್ತು ನಿಮ್ಮ ಅಗತ್ಯಕ್ಕೆ ಯಾವುದು ಸೂಕ್ತ ಎಂಬುದರ ಪೂರ್ಣ ಹೋಲಿಕೆ ಇಲ್ಲಿದೆ.

ಮೊದಲಿಗೆ ಸುರಕ್ಷತೆ ಮತ್ತು ADAS ಬಗ್ಗೆ ನೋಡೋಣ. ವೆನ್ಯೂ ಕಾರಿನಲ್ಲಿ ಲೆವೆಲ್ 2 ADAS ಫೀಚರ್ ಕೇವಲ ಟಾಪ್-ಎಂಡ್ HX10 ವೇರಿಯೆಂಟ್‌ನಲ್ಲಿ ಮಾತ್ರ ಸಿಗುತ್ತದೆ. ಆದರೆ, ಎಲ್ಲಾ ವೇರಿಯೆಂಟ್‌ಗಳಲ್ಲೂ 6 ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿ ಸಿಗಲಿವೆ. ಇತ್ತ XUV 3XO ಕಾರು AX5 ಲಕ್ಸುರಿ ಮತ್ತು AX7 ಲಕ್ಸುರಿ ವೇರಿಯೆಂಟ್‌ಗಳಲ್ಲಿ ಲೆವೆಲ್ 2 ADAS ನೀಡುತ್ತದೆ. ಇದರಲ್ಲೂ 6 ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿದ್ದು, ಭಾರತ್ NCAP ನಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ನೀವು ಟಾಪ್‌ ವೇರಿಯೆಂಟ್ ಖರೀದಿಸದೇ ADAS ಬೇಕು ಎಂದರೆ XUV 3XO ನ AX5 ಲಕ್ಸುರಿ ಉತ್ತಮ ಆಯ್ಕೆ. ಅದೇ ಹ್ಯುಂಡೈನಲ್ಲಿ ADAS ಬೇಕಿದ್ದರೆ ಟಾಪ್-ಎಂಡ್ HX10 ಗೆ ಬಜೆಟ್ ಕಾಯ್ದಿರಿಸಬೇಕಾಗುತ್ತದೆ.

Hyundai Venue vs Mahindra XUV 3XO Comparison 2026: Price, Features, and Safety

ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO ಬೆಲೆಗಳ ಹೋಲಿಕೆ

ನಗರ ವೆನ್ಯೂ ಆನ್‌ರೋಡ್ ಬೆಲೆ (ಆರಂಭಿಕ) XUV 3XO ಆನ್‌ರೋಡ್ ಬೆಲೆ (ಆರಂಭಿಕ)
ದೆಹಲಿ ₹9.29 ಲಕ್ಷ ₹9.37 ಲಕ್ಷ
ಬೆಂಗಳೂರು ₹9.95 ಲಕ್ಷ ₹9.92 ಲಕ್ಷ
ಮುಂಬೈ ₹9.58 ಲಕ್ಷ ₹9.65 ಲಕ್ಷ

ಎಕ್ಸ್‌ಶೋರೂಮ್ ಬೆಲೆ ವಿಚಾರಕ್ಕೆ ಬಂದರೆ, ವೆನ್ಯೂ 7.99 ಲಕ್ಷ ರೂ.ನಿಂದ ಮತ್ತು XUV 3XO 7.79 ಲಕ್ಷ ರೂ.ನಿಂದ ಆರಂಭವಾಗುತ್ತವೆ. ದೆಹಲಿಯಲ್ಲಿ ಇವುಗಳ ಟಾಪ್ ವೇರಿಯೆಂಟ್ ಬೆಲೆ 15 ಲಕ್ಷ ರೂ. ದಾಟುತ್ತದೆ. ಇವು ಸದ್ಯದ ಅಂದಾಜು ಆನ್‌ರೋಡ್ ಬೆಲೆಗಳಾಗಿದ್ದು, ಡೀಲರ್ ಇನ್ಶೂರೆನ್ಸ್ ಮತ್ತು ಆಕ್ಸೆಸರೀಸ್‌ಗೆ ಅನುಗುಣವಾಗಿ ಅಂತಿಮ ಬೆಲೆಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.

ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO: ADAS ಹಾಗೂ ಡೀಸೆಲ್ ಆಪ್ಷನ್

ದೈನಂದಿನ ಚಾಲನೆ ಮತ್ತು ಖರ್ಚನ್ನು ನಿರ್ಧರಿಸುವಲ್ಲಿ ಎಂಜಿನ್ ಪ್ರಮುಖ ಪಾತ್ರ ವಹಿಸುತ್ತದೆ. ವೆನ್ಯೂನ 1.0-ಟರ್ಬೋ ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ (DCT) ಹೊಂದಿದ್ದರೆ, XUV 3XO ಪೆಟ್ರೋಲ್ ಆಟೋಮ್ಯಾಟಿಕ್ 6-ಸ್ಪೀಡ್ ಟಾರ್ಕ್-ಕನ್ವರ್ಟರ್‌ನೊಂದಿಗೆ ಬರುತ್ತದೆ. ಇದು ಸಿಟಿ ಟ್ರಾಫಿಕ್‌ನಲ್ಲಿ ಡ್ರೈವ್ ಮಾಡಲು ಅತ್ಯಂತ ಸ್ಮೂತ್ ಅನಿಸುತ್ತದೆ. ಹ್ಯುಂಡೈ ಮಾರ್ಚ್‌ನಲ್ಲಿ HX8 ಡೀಸೆಲ್-ಆಟೋಮ್ಯಾಟಿಕ್ ಆಯ್ಕೆಯನ್ನು ಪರಿಚಯಿಸಿತ್ತು. ARAI ಪ್ರಮಾಣೀಕೃತ ಮೈಲೇಜ್ ಪ್ರಕಾರ, ವೆನ್ಯೂ ಡೀಸೆಲ್ AT 17.9 ಕಿ.ಮೀ/ಲೀ ಮತ್ತು ಡೀಸೆಲ್ MT 20.99 ಕಿ.ಮೀ/ಲೀ ಮೈಲೇಜ್ ನೀಡುತ್ತದೆ. XUV 3XO ಡೀಸೆಲ್ AMT ಕಾರು 21.2 ಕಿ.ಮೀ/ಲೀ ಮೈಲೇಜ್ ನೀಡುತ್ತದೆ. ನಗರ ಪ್ರದೇಶದ ಬಂಪರ್-ಟು-ಬಂಪರ್ ಟ್ರಾಫಿಕ್‌ಗೆ ಟಾರ್ಕ್-ಕನ್ವರ್ಟರ್ ಉತ್ತಮವಾಗಿದ್ದರೆ, ಹೈವೇ ಪ್ರಯಾಣಕ್ಕೆ ಡೀಸೆಲ್ ಎಂಜಿನ್‌ನ ಇಂಧನ ದಕ್ಷತೆ ಸೂಕ್ತ.

ಫೀಚರ್‌ಗಳು ಮತ್ತು ಸ್ಪೇಸ್: ಡ್ಯುಯಲ್ ಸ್ಕ್ರೀನ್‌, 360 ಕ್ಯಾಮೆರಾ, ಕಂಫರ್ಟ್

ವೆನ್ಯೂ HX10 ವೇರಿಯೆಂಟ್‌ನಲ್ಲಿ ಡ್ಯುಯಲ್ 12.3-ಇಂಚಿನ ಕರ್ವ್ಡ್ ಸ್ಕ್ರೀನ್‌ಗಳು, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್-ಸ್ಪಾಟ್ ವ್ಯೂ ಮತ್ತು ವೆಂಟಿಲೇಟೆಡ್ ಸೀಟ್‌ಗಳಿವೆ. ಮತ್ತೊಂದೆಡೆ, XUV 3XO ಕಾರು ಎರಡು 10.25-ಇಂಚಿನ ಡಿಸ್‌ಪ್ಲೇಗಳು, ಬ್ಲೈಂಡ್ ವ್ಯೂ ಒಳಗೊಂಡ 360-ಡಿಗ್ರಿ ಸರೌಂಡ್ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ನೀಡುತ್ತದೆ. ಬೂಟ್ ಸ್ಪೇಸ್ ವಿಷಯದಲ್ಲಿ, ವೆನ್ಯೂ 375 ಲೀಟರ್ ಸಾಮರ್ಥ್ಯ ಹೊಂದಿದ್ದರೆ, XUV 3XO 364 ಲೀಟರ್ ಜಾಗ ನೀಡುತ್ತದೆ. ಕೂಲಿಂಗ್ ಸೀಟ್‌ಗಳು ಮತ್ತು ಹೆಚ್ಚಿನ ಬೂಟ್ ಸ್ಪೇಸ್ ಬೇಕಿದ್ದರೆ ವೆನ್ಯೂ ಸೂಕ್ತ, ಇನ್ನು ಕಡಿಮೆ ವೇರಿಯೆಂಟ್‌ನಲ್ಲೇ ಪಾರ್ಕಿಂಗ್ ಅಸಿಸ್ಟ್ ಫೀಚರ್‌ಗಳು ಬೇಕಿದ್ದರೆ XUV 3XO ಬೆಸ್ಟ್.

ವೇಟಿಂಗ್ ಪೀರಿಯಡ್ ಮತ್ತು ಸೆಪ್ಟೆಂಬರ್ ಆಫರ್‌ಗಳು

ಸದ್ಯದ ಕಾಯುವಿಕೆ ಅವಧಿ (ವೇಟಿಂಗ್ ಪೀರಿಯಡ್) ನೋಡುವುದಾದರೆ, ವೆನ್ಯೂ ಪಡೆಯಲು ವೇರಿಯೆಂಟ್ ಮತ್ತು ನಗರಕ್ಕೆ ಅನುಗುಣವಾಗಿ 10 ರಿಂದ 210 ದಿನಗಳು ಬೇಕಾಗಬಹುದು. XUV 3XO ಗೆ ಸುಮಾರು 7 ರಿಂದ 120 ದಿನಗಳ ವೇಟಿಂಗ್ ಪೀರಿಯಡ್ ಇದೆ. ಹಬ್ಬದ ಋತುವಿನ ಆಫರ್‌ಗಳು, ವಿಶೇಷವಾಗಿ ಮಹೀಂದ್ರಾ ಕಾರುಗಳ ಮೇಲೆ ಲಭ್ಯವಿವೆ. ಆದರೆ ಹೊಸ ಹಾಗೂ ಹೆಚ್ಚು ಬೇಡಿಕೆಯಿರುವ ವೇರಿಯೆಂಟ್‌ಗಳ ಮೇಲೆ ನಗದು ರಿಯಾಯಿತಿಗಳು ಸೀಮಿತವಾಗಿದ್ದು, ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾಗುತ್ತವೆ. ಹೀಗಾಗಿ ಬುಕಿಂಗ್ ಮಾಡುವ ಮುನ್ನ VIN-ಆಧಾರಿತ ಡೆಲಿವರಿ ಸಮಯ ಮತ್ತು ಫೈನಾನ್ಸ್ ಆಫರ್‌ಗಳನ್ನು ಖಚಿತಪಡಿಸಿಕೊಳ್ಳಿ.

ನಿಮಗ್ಯಾವುದು ಸೂಕ್ತ? ನಗರದಲ್ಲೇ ಹೆಚ್ಚು ಆಟೋಮ್ಯಾಟಿಕ್ ಕಾರು ಚಲಾಯಿಸುವುದಾದರೆ, ಸ್ಮೂತ್ ಚಾಲನೆ ಹಾಗೂ ADAS ಫೀಚರ್ ಇರುವ XUV 3XO AX5 ಲಕ್ಸುರಿ ಪೆಟ್ರೋಲ್ AT ಉತ್ತಮ ಆಯ್ಕೆ. ಬಜೆಟ್ ಸ್ನೇಹಿ ಸಿಟಿ ಪ್ರಯಾಣಕ್ಕೆ ವೆನ್ಯೂ 1.2 HX5 MT ಸೂಕ್ತ. ಇನ್ನು ಹೆಚ್ಚು ಹೈವೇ ಡ್ರೈವಿಂಗ್ ಮಾಡುವವರಿಗೆ ವೆನ್ಯೂ 1.5 ಡೀಸೆಲ್ MT (HX7/HX8) ದೀರ್ಘ ಪ್ರಯಾಣಕ್ಕೆ ಸಹಕಾರಿ. ಗರಿಷ್ಠ ಮೈಲೇಜ್ ಬಯಸುವವರಿಗೆ XUV 3XO ಡೀಸೆಲ್ AMT ಅತ್ಯುತ್ತಮ. ಸುರಕ್ಷತೆ ಹಾಗೂ ADAS ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ನೀಡುವವರು ವೆನ್ಯೂ HX10 ಅಥವಾ XUV 3XO AX7 ಲಕ್ಸುರಿ ವೇರಿಯೆಂಟ್ ಶಾರ್ಟ್‌ಲಿಸ್ಟ್ ಮಾಡಿಕೊಳ್ಳಬಹುದು.

Article Published On: Thursday, September 10, 2026, 18:17 [IST]
Read more on car comparison suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+