ಸುರಕ್ಷಿತ ಕಾರು ಬೇಕೆ? ಭಾರತ್ ಎನ್‌ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆರ್ನಾ: ಇನ್ನು ಚಿಂತೆಯಿಲ್ಲ!
ಹ್ಯುಂಡೈ ವೆರ್ನಾ (Hyundai Verna) ಕಾರು ಭಾರತ್ ಎನ್‌ಸಿಎಪಿ (Bharat NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಪಂಚತಾರಾ (5-ಸ್ಟಾರ್) ಸೇಫ್ಟಿ ರೇಟಿಂಗ್ ಪಡೆದುಕೊಂಡಿದ್ದು, ಕಾರು ಪ್ರಿಯರ ಸುರಕ್ಷತೆಯ ಚಿಂತೆಯನ್ನು ದೂರ ಮಾಡಿದೆ. 2026ರ ಈ ವರದಿಯ ಪ್ರಕಾರ, ವಯಸ್ಕರ ಸುರಕ್ಷತೆಯಲ್ಲಿ (Adult Protection) 32ಕ್ಕೆ 28.22 ಅಂಕ ಹಾಗೂ ಮಕ್ಕಳ ಸುರಕ್ಷತೆಯಲ್ಲಿ (Child Protection) 49ಕ್ಕೆ 44 ಅಂಕಗಳನ್ನು ಗಳಿಸಿದೆ. 1.5 ಲೀಟರ್ ಟರ್ಬೊ ಜಿಡಿಐ ಡಿಸಿಟಿ ಮತ್ತು 1.5 MPi iVT ವೇರಿಯೆಂಟ್ ಆಧಾರಿಸಿ ಈ ಟೆಸ್ಟ್ ನಡೆಸಲಾಗಿದೆ. ಇದರೊಂದಿಗೆ ವೆರ್ನಾ, ಭಾರತದ ಅತ್ಯಂತ ಸುರಕ್ಷಿತ ಸೆಡಾನ್ ಕಾರುಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಜುಲೈ 2026ರಲ್ಲಿ ನಡೆದ ಈ ಕ್ರ್ಯಾಶ್ ಟೆಸ್ಟ್‌ನಲ್ಲಿ 1.5 MPi ಮ್ಯಾನುವಲ್, iVT ಹಾಗೂ 1.5 ಟರ್ಬೊ ಜಿಡಿಐ ಮ್ಯಾನುವಲ್ ಅಥವಾ DCT ಎಲ್ಲಾ ವೇರಿಯೆಂಟ್‌ಗಳನ್ನೂ ಪರಿಗಣಿಸಲಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಕರ್ಟನ್ ಏರ್‌ಬ್ಯಾಗ್‌ಗಳು, ಪಾದಚಾರಿಗಳ ಸುರಕ್ಷತೆ (Pedestrian Protection) ಮತ್ತು ಸೀಟ್-ಬೆಲ್ಟ್ ರಿಮೈಂಡರ್ ವೈಶಿಷ್ಟ್ಯಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಅಂದರೆ, ಕೇವಲ ಸುರಕ್ಷತಾ ಫೀಚರ್ಸ್‌ಗಾಗಿ ಗ್ರಾಹಕರು ದುಬಾರಿ ಟಾಪ್-ಎಂಡ್ ಆವೃತ್ತಿಯನ್ನೇ ಖರೀದಿಸಬೇಕಾದ ಅಗತ್ಯವಿಲ್ಲ.

ಹ್ಯುಂಡೈ ವೆರ್ನಾ ಭಾರತ್ ಎನ್‌ಸಿಎಪಿ ಸ್ಕೋರ್ ಮತ್ತು ವೇರಿಯೆಂಟ್ ವಿವರ
ಸ್ಕೋರ್ ವಿವರಗಳನ್ನು ಗಮನಿಸಿದರೆ: ಫ್ರಂಟಲ್ ಆಫ್‌ಸೆಟ್ ಟೆಸ್ಟ್‌ನಲ್ಲಿ 16ಕ್ಕೆ 12.45, ಸೈಡ್-ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ 16ಕ್ಕೆ 15.77 ಅಂಕಗಳು ಲಭಿಸಿದ್ದು, ಸೈಡ್-ಪೋಲ್ ಟೆಸ್ಟ್ ‘OK’ ಎಂದಿದೆ. ದೇಹದ ಭಾಗಗಳ ರಕ್ಷಣೆಯಲ್ಲಿ ಹಸಿರು ಮತ್ತು ಹಳದಿ ಬಣ್ಣಗಳ ಸಂಕೇತ ಕಂಡುಬಂದಿದ್ದು, ಉತ್ತಮ ಸುರಕ್ಷತಾ ವ್ಯವಸ್ಥೆಯನ್ನು ಇದು ತೋರಿಸುತ್ತದೆ. ಇಎಸ್‌ಸಿ ಸ್ಟ್ಯಾಂಡರ್ಡ್ ಆಗಿರುವುದರಿಂದ ಭಾರತ್ ಎನ್‌ಸಿಎಪಿ ಈ ಎಲ್ಲಾ ಎಂಜಿನ್-ಗೇರ್‌ಬಾಕ್ಸ್ ಕಾಂಬಿನೇಷನ್‌ಗಳಿಗೂ 5-ಸ್ಟಾರ್ ರೇಟಿಂಗ್ ನೀಡಿದೆ.
ಮಕ್ಕಳ ಸೀಟ್ ಸುರಕ್ಷತೆ, ISOFIX ಮತ್ತು ಏರ್‌ಬ್ಯಾಗ್ ಸ್ವಿಚ್‌ಗಳ ಸಂಪೂರ್ಣ ವಿವರ
ಹಿಂಭಾಗದ ಎರಡೂ ಬದಿಯ ಸೀಟ್‌ಗಳಲ್ಲಿ ISOFIX ಮತ್ತು i-Size ಆಂಕರ್‌ಗಳನ್ನು ನೀಡಲಾಗಿದ್ದರೆ, ಮುಂಭಾಗದ ಪ್ಯಾಸೆಂಜರ್ ಏರ್‌ಬ್ಯಾಗ್ ಆಫ್ ಮಾಡಲು ಮ್ಯಾನುವಲ್ ಸ್ವಿಚ್ ನೀಡಲಾಗಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ 18 ತಿಂಗಳು ಮತ್ತು 3 ವರ್ಷದ ಮಕ್ಕಳ ಆಕಾರದ ಡಮ್ಮಿಗಳನ್ನು ಹಿಂಭಾಗಕ್ಕೆ ಮುಖ ಮಾಡಿ (rearward-facing) ಕುಳ್ಳಿರಿಸಿ 'Joie i-Spin 360e' ಚೈಲ್ಡ್ ಸೀಟ್ ಬಳಸಿ ಪರೀಕ್ಷಿಸಲಾಗಿದ್ದು, ಡೈನಾಮಿಕ್ ಟೆಸ್ಟ್‌ನಲ್ಲಿ ಪೂರ್ಣ ಅಂಕಗಳನ್ನು ಪಡೆದುಕೊಂಡಿದೆ. ಮಕ್ಕಳಿರುವ ಕುಟುಂಬಗಳು ಹಿಂಭಾಗದಲ್ಲೇ ಚೈಲ್ಡ್ ಸೀಟ್ ಬಳಸುವುದು ಸೂಕ್ತ ಹಾಗೂ ಅಗತ್ಯವಿದ್ದಾಗ ಮಾತ್ರ ಮುಂಭಾಗದ ಏರ್‌ಬ್ಯಾಗ್ ಆಫ್ ಮಾಡಿ.
ವೆರ್ನಾ VS ಸಿಟಿ, ವರ್ಟಸ್, ಸ್ಲಾವಿಯಾ: ಸುರಕ್ಷತೆಯ ಹೋಲಿಕೆ
| ಮಾಡೆಲ್ | ಕ್ರ್ಯಾಶ್ ಟೆಸ್ಟ್ ಪ್ರೋಗ್ರಾಂ | ಎಒಪಿ ಸ್ಕೋರ್ (ವಯಸ್ಕರು) | ಸಿಒಪಿ ಸ್ಕೋರ್ (ಮಕ್ಕಳು) | ಫ್ರಂಟ್ ಏರ್‌ಬ್ಯಾಗ್ ಕಟ್‌ಆಫ್ | ಐಸೋಫಿಕ್ಸ್ (ಹಿಂಭಾಗ) |
|---|---|---|---|---|---|
| ಹ್ಯುಂಡೈ ವೆರ್ನಾ | ಭಾರತ್ ಎನ್‌ಸಿಎಪಿ | 28.22/32 | 44/49 | ಮ್ಯಾನುವಲ್ ಸ್ವಿಚ್: ಇದೆ | ಇದೆ |
| ಫೋಕ್ಸ್‌ವೇಗನ್ ವರ್ಟಸ್ | ಗ್ಲೋಬಲ್ ಎನ್‌ಸಿಎಪಿ | 29.71/34 | 42/49 | ಲಭ್ಯವಿಲ್ಲ | ಇದೆ |
| ಸ್ಕೋಡಾ ಸ್ಲಾವಿಯಾ | ಗ್ಲೋಬಲ್ ಎನ್‌ಸಿಎಪಿ | 29.71/34 | 42/49 | ಲಭ್ಯವಿಲ್ಲ | ಇದೆ |
| ಹೊಂಡಾ ಸಿಟಿ | ಭಾರತ್ ಎನ್‌ಸಿಎಪಿ | ರೇಟಿಂಗ್ ಪಡೆದಿಲ್ಲ | ರೇಟಿಂಗ್ ಪಡೆದಿಲ್ಲ | — | — |
ವರ್ಟಸ್ ಮತ್ತು ಸ್ಲಾವಿಯಾ ಕಾರುಗಳು ಗ್ಲೋಬಲ್ ಎನ್‌ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ವಯಸ್ಕರ ರಕ್ಷಣೆಯ ಅಂಕಗಳಲ್ಲಿ ಕೊಂಚ ಮುಂದಿವೆ. ಆದರೆ, ಗ್ಲೋಬಲ್ ಎನ್‌ಸಿಎಪಿ ಮತ್ತು ಭಾರತ್ ಎನ್‌ಸಿಎಪಿ ಪರೀಕ್ಷಾ ನಿಯಮಗಳು ವಿಭಿನ್ನವಾಗಿರುತ್ತವೆ. ಇನ್ನು ಹೊಂಡಾ ಸಿಟಿ ಕಾರು ಭಾರತದಲ್ಲಿ ಭಾರತ್ ಎನ್‌ಸಿಎಪಿ ರೇಟಿಂಗ್ ಪಡೆದಿಲ್ಲ. ಆದ್ದರಿಂದ, ವಿಭಿನ್ನ ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳನ್ನು ನೇರವಾಗಿ ಹೋಲಿಸುವುದು ಸರಿಯಲ್ಲ.
₹20 ಲಕ್ಷದೊಳಗಿನ ಬಜೆಟ್‌ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಸೀಟ್ ವ್ಯವಸ್ಥೆಗೆ ಆದ್ಯತೆ ನೀಡುವ ನಗರ ಪ್ರದೇಶದ ಕುಟುಂಬಗಳಿಗೆ ಹ್ಯುಂಡೈ ವೆರ್ನಾ ಅತ್ಯುತ್ತಮ ಆಯ್ಕೆ. ಹೈವೇಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವವರು ವೆರ್ನಾ, ವರ್ಟಸ್ ಅಥವಾ ಸ್ಲಾವಿಯಾ ಕಾರುಗಳನ್ನು ಪರಿಗಣಿಸಬಹುದು, ಇವೆಲ್ಲವೂ 5-ಸ್ಟಾರ್ ಸುರಕ್ಷತೆ ಹೊಂದಿವೆ. ಕಾರು ಖರೀದಿಸುವಾಗ ಕೇವಲ ಗ್ಯಾಜೆಟ್‌ಗಳು ಅಥವಾ ಎಂಜಿನ್ ಸಾಮರ್ಥ್ಯಕ್ಕೆ ಮಾತ್ರವಲ್ಲದೆ, 6 ಏರ್‌ಬ್ಯಾಗ್‌ಗಳು, ಎಸ್‌ಸಿ (ESC) ಮತ್ತು ಚೈಲ್ಡ್ ಸೇಫ್ಟಿ ವೈಶಿಷ್ಟ್ಯಗಳಿಗೆ ಮೊದಲ ಆದ್ಯತೆ ನೀಡುವುದು ಜಾಣತನ.


Click it and Unblock the Notifications
