ಭಾರತದಲ್ಲಿ BMW & Skoda ಸೇರಿ ಈ ಕಂಪನಿ ಕಾರುಗಳು ಮತ್ತಷ್ಟು ಅಗ್ಗವಾಗಲಿವೆ.. ವಿಶ್ವವೇ ತಿರುಗಿ ನೋಡುತ್ತಿದೆ!

ಭಾರತ ಹಾಗೂ ಯುರೋಪ್ ಒಕ್ಕೂಟದ ಮಂಗಳವಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಕನಸು ಸಾಕಾರಗೊಳ್ಳಲು ಬರೋಬ್ಬರಿ 20 ವರ್ಷಗಳವರೆಗೆ ಕಾಯಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಇದೇ ಒಡಂಬಕೆಯನ್ನು 'ಮದರ್ ಆಫ್ ಆಲ್ ಡೀಲ್' ಎಂದು ಕರೆದಿದ್ದಾರೆ. ವಿಶ್ವದಲ್ಲೇ ಭಾರತವು 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಯುರೋಪ್ ಒಕ್ಕೂಟವು 2ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹೀಗಾಗಿ ಈ ಒಪ್ಪಂದವು ಹೆಚ್ಚು ಮಹತ್ವದಿಂದ ಕೂಡಿದ್ದು, ಆಟೋಮೊಬೈಲ್ ಉದ್ಯಮಕ್ಕೆ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದೆ.

ಮುಂಭಾಗ ವರ್ಷಗಳಲ್ಲಿ ಯುರೋಪ್ ಒಕ್ಕೂಟದಿಂದ ಭಾರತಕ್ಕೆ ಆಮದಾಗುವ ಆಡಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ, ಪೋರ್ಷೆ, ಫೆರಾರಿ, ಪೋಕ್ಸ್‌ವ್ಯಾಗನ್ ಹಾಗೂ ಸ್ಕೋಡಾ ಕಂಪನಿಯ ಐಷಾರಾಮಿ ಕಾರುಗಳ ದರವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗಲಿದೆ. ಸದ್ಯ ಯುರೋಪ್ ಒಕ್ಕೂಟದ ದೇಶದಿಂದ ತರಿಸುವ ಕಾರುಗಳ ಮೇಲೆ ಶೇಕಡ 70% ಆಮದು ಶುಲ್ಕವನ್ನು ವಿಧಿಸಲಾಗುತ್ತಿದೆ. ಅದನ್ನು ಕಾಲಕ್ರಮೇಣ ಶೇಕಡ 10% ಇಳಿಸಲಾಗುತ್ತದೆ.

India European Union Free Trade Agreement Audi Mercedes-Benz Bmw And Skoda Cars Price Cut Soon

ಯುರೋಪ್ ಒಕ್ಕೂಟದಲ್ಲಿ ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐರ್ಲೆಂಡ್, ಇಟಲಿ, ಲಾಟ್ವಿಯ, ನೆದರ್‌ಲ್ಯಾಂಡ್ಸ್, ಪೋಲೆಂಡ್ ಹಾಗೂ ಪೋರ್ಚುಗಲ್ ಒಳಗೊಂಡಂತೆ 27 ಸದಸ್ಯ ದೇಶಗಳಿವೆ. ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಆಂಟೋನಿಯೊ ಕೋಸ್ಟಾ ಇದ್ದು, ಯುರೋಪಿಯನ್ ಕಮಿಷನ್‌ನ ಮುಖ್ಯಸ್ಥರಾಗಿ ಉರ್ಸುಲಾ ವಾನ್ ಡೆರ್ ಲೇಯೆನ್ ಅಧಿಕಾರದಲ್ಲಿದ್ದಾರೆ.

ಇಲ್ಲಿದೆ ಯುರೋಪ್ ಒಕ್ಕೂಟದಿಂದ ಭಾರತಕ್ಕೆ ಆಮದಾಗುವ ಒಂದಷ್ಟು ಕಾರುಗಳ ವಿವರ:

ಆಡಿ - Audi (ಜರ್ಮನಿ): ಈ ಕಂಪನಿಯಿಂದಲೂ ಭಾರತಕ್ಕೆ ವಿವಿಧ ಕಾರುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅವುಗಳಲ್ಲಿ ಎ4 (A4), ಎ6 (A6), ಕ್ಯೂ3 (Q3), ಕ್ಯೂ5 (Q5), ಕ್ಯೂ7 (Q7), ಎಸ್5 ಸ್ಪೋರ್ಟ್‌ಬ್ಯಾಕ್ ಹಾಗೂ ಆರ್‌ಎಸ್ 5 (RS 5) ಕಾರುಗಳು ಪ್ರಮುಖವಾಗಿವೆ.

India European Union Free Trade Agreement Audi Mercedes-Benz Bmw And Skoda Cars Price Cut Soon

ಮರ್ಸಿಡಿಸ್ ಬೆಂಜ್ - Mercedes-Benz (ಜರ್ಮನಿ): ಇದು ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶಕ್ಕೆ ಎಎಂಜಿ ಜಿಟಿ (AMG GT), ಎಎಂಜಿ ಎಸ್ 63 ಇ ಪರ್ಫಾಮೆನ್ಸ್ (AMG S 63 E Performance), ಎಎಂಜಿ ಇ 53 ಕ್ಯಾಬ್ರಿಯೊಲೆಟ್ (AMG E 53 Cabriolet) ಹಾಗೂ ಎಎಂಜಿ ಎ 45 ಎಸ್ (AMG A 45 S) ಒಳಗೊಂಡಂತೆ ಹಲವು ಕಾರುಗಳನ್ನು ತರಲಾಗುತ್ತದೆ.

ಬಿಎಂಡಬ್ಲ್ಯೂ - BMW (ಜರ್ಮನಿ): ಈ ಕಂಪನಿಯಿಂದಲೂ ಭಾರತಕ್ಕೆ ಹಲವು ಕಾರುಗಳು ಆಮದಾಗುತ್ತಿವೆ. ಎಂ2 (M2), ಎಂ4 ಕೂಪೆ (M4 Coupe), ಎಂ5 (M5), ಎಂ8 ಕೂಪೆ (M8 Coupe), ಎಕ್ಸ್3 ಎಂ40ಐ (X3 M40i) ಮತ್ತು ಎಕ್ಸ್4 ಎಂ40i (X4 M40i) ಕಾರುಗಳು ಬರುತ್ತಿವೆ.

India European Union Free Trade Agreement Audi Mercedes-Benz Bmw And Skoda Cars Price Cut Soon

ಸ್ಕೋಡಾ - Skoda (ಜೆಕ್ ರಿಪಬ್ಲಿಕ್): ಇದು ಜಗಮೆಚ್ಚಿದ ಕಂಪನಿಯಾಗಿದೆ. ದೇಶಕ್ಕೆ ಆಕ್ಟೇವಿಯಾ ಆರ್‌ಎಸ್ (Octavia RS), ಸೂಪರ್ಬ್ (Superb) ಹಾಗೂ ಕೊಡಿಯಾಕ್ ಆರ್‌ಎಸ್ (Kodiaq RS) ಸೇರಿದಂತೆ ವಿವಿಧ ಕಾರುಗಳನ್ನು ಆಮದು ಮಾಡಿಕೊಲ್ಲಲಾಗುತ್ತಿದೆ.

ಒಟ್ಟಾರೆಯಾಗಿ ಭಾರತ ಮತ್ತು ಯುರೋಪ್ ಒಕ್ಕೂಟದ ಮಧ್ಯೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದ ತುಂಬಾ ಮಹತ್ವದಿಂದ ಕೂಡಿದೆ. ಐಷಾರಾಮಿ ಕಾರುಗಳ ಬೆಲೆಯೂ ರೂ.27 ಲಕ್ಷದಿಂದ ರೂ.1.5 ಕೋಟಿವರೆಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಹೊಚ್ಚ ಹೊಸ ಕಾರು ಖರೀದಿಸಲು ಆಲೋಚಿಸಿರುವವರ ಕನಸು ಸುಲಭವಾಗಿ ನನಸಾಗಲಿದೆ.

More from DriveSpark

Article Published On: Tuesday, January 27, 2026, 23:00 [IST]
English summary
India european union free trade agreement audi mercedes benz bmw and skoda cars price cut soon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+