Jeep: ನಿನ್ನೆಯಷ್ಟೆ ಬಿಡುಗಡೆಯಾಗಿದೆ ಹೊಸ 7-ಸೀಟರ್ ಎಸ್‌ಯುವಿ: ಹೇಗಿದೆ, ಬೆಲೆಯೆಷ್ಟು?

ಪ್ರಮುಖ ಪ್ರೀಮಿಯಂ ಎಸ್‌ಯುವಿ ತಯಾರಕ ಕಂಪನಿಯಾಗಿರುವ 'ಜೀಪ್' ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಮೆರಿಡಿಯನ್ ಟ್ರ್ಯಾಕ್ ಎಡಿಷನ್ (Meridian 'Track Edition') ಬಿಡುಗಡೆ ಮಾಡಿದೆ. ಮೆರಿಡಿಯನ್ ಓವರ್‌ಲ್ಯಾಂಡ್‌ನಲ್ಲಿ ನಿರ್ಮಿಸಲಾದ ಟ್ರ್ಯಾಕ್ ಎಡಿಷನ್ ಎಸ್‌ಯುವಿ, ಗ್ರಾಹಕರಿಗೆ 7-ಸೀಟರ್ ಆಯ್ಕೆ ನೀಡುತ್ತದೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಡೀಸೆಲ್ ಆರ್ಕಿಟೆಕ್ಚರ್‌ನಿಂದ ಚಾಲಿತವಾಗಿರುವ ಇದರ ಪವರ್‌ಫುಲ್ 2.0L ಮಲ್ಟಿಜೆಟ್ II ಡೀಸೆಲ್ ಎಂಜಿನ್, 170 HP ಪವರ್ ಮತ್ತು 350 Nm ಟಾರ್ಕ್ ಹೊರಹಾಕುತ್ತದೆ. ಈ ಎಸ್‌ಯುವಿ ಕುರಿತ ಬೆಲೆ ಸೇರಿದಂತೆ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಹೊಸ ಜೀಪ್ ಮೆರಿಡಿಯನ್ ಟ್ರ್ಯಾಕ್ ಎಡಿಷನ್ ಫೀಚರ್ಸ್ ವಿಷಯಕ್ಕೆ ಬಂದರೆ, ಇದರಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 10.1 ಇಂಚಿನ ಯುಕನೆಕ್ಟ್, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೆಮೊರಿಯೊಂದಿಗೆ 12-ವೇ ಪವರ್ಡ್ ವೆಂಟಿಲೇಟೆಡ್ ಸೀಟುಗಳು ಮತ್ತು 10+ ಸಕ್ರಿಯ ಸುರಕ್ಷತಾ ಫೀಚರ್‌ಗಳೊಂದಿಗೆ ಲೆವೆಲ್ 2 ADAS ನೀಡಲಾಗಿದೆ. ಜೊತೆಗೆ ಪ್ರೀಮಿಯಂ ಆಲ್ಪೈನ್ ಆಡಿಯೊ ಸಿಸ್ಟಮ್, ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್ ಇದೆ.

jeep-meridian-track-edition-price-features-engine-details

ಇಂಟೀರಿಯರ್‌ನಲ್ಲಿ ಟ್ರ್ಯಾಕ್ ಎಡಿಷನ್ ಪ್ರೀಮಿಯಂ ವಸ್ತುಗಳೊಂದಿಗೆ ಡಿಸೈನ್‌ ಮಾಡಲಾಗಿದೆ. ಸ್ಯೂಡ್ ಇನ್ಸರ್ಟ್‌ಗಳೊಂದಿಗೆ ಡ್ಯುಯಲ್-ಟೋನ್ ಟ್ಯುಪೆಲೊ ಇಂಟೀರಿಯರ್, ಪಿಯಾನೋ ಬ್ಲಾಕ್ ಬೆಜೆಲ್‌ಗಳೊಂದಿಗೆ ಡಾರ್ಕ್ ಎಸ್ಪ್ರೆಸೊ ಅಕ್ಸೆಂಟ್‌ಗಳು, ಕಾರ್ಟಿನಾ ಲೆಥರೆಟ್ ಸ್ಟೀರಿಂಗ್ ವೀಲ್, ಸೀಟುಗಳು ಮತ್ತು ಬೋಲ್ಸ್ಟರ್‌ಗಳ ಮೇಲೆ ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಕ್ವಿಲ್ಟಿಂಗ್, ಅಪ್ಲಿಕ್ಯೂಗಳನ್ನು ಕ್ಯಾಬಿನ್ ಮತ್ತು ಮ್ಯಾಟ್‌ಗಳಾದ್ಯಂತ ನೀಡಲಾಗಿದೆ.

ಈ ಕಾರಿನಲ್ಲಿ ಒಟ್ಟು ಮೂರು ಸಾಲಿನ ಸೀಟುಗಳಿದ್ದು, ಗ್ರಾಹಕರಿಗೆ 7-ಸೀಟರ್ ಆಯ್ಕೆ ನೀಡುತ್ತದೆ. ವಿಶೇಷವಾಗಿ ಹೊಸ 140 ಎಂಎಂ ಫುಲ್ಲಿ - ಫ್ರಂಟ್ ಸ್ಲೈಡಿಂಗ್ ಎರಡನೇ ಸಾಲಿನ ಸೀಟಿನೊಂದಿಗೆ ಅತ್ಯಂತ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ಹಾಗೆಯೇ ಮೂರನೇ ಸಾಲಿನ ಸೀಟನ್ನು ಪ್ರವೇಶಸಲು ತುಂಬಾ ಸುಲಭವಾಗಿದ್ದು, ಪ್ರಯಾಣಿಕರಿಗೆ ಹೊಂದಿಕೊಳ್ಳುವ ಸ್ಥಳವನ್ನು ನೀಡುತ್ತದೆ. ಲಾಂಗ್ ಡ್ರೈವ್‌ನಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಸೌಕರ್ಯಯುತ ಪ್ರಯಾಣ ಮಾಡಬಹುದು ಎಂದು ಕಂಪನಿ ಭರವಸೆ ನೀಡಿದೆ.

jeep-meridian-track-edition-price-features-engine-details

ಇದರ 2.0L ಮಲ್ಟಿಜೆಟ್ II ಡೀಸೆಲ್ ಎಂಜಿನ್, 170 HP ಪವರ್ ಮತ್ತು 350 Nm ಟಾರ್ಕ್ ಹೊರಹಾಕುತ್ತದೆ. ಇದರ ಜೊತೆಗೆ ಜೀಪ್‌ನ ಸೆಲೆಕ್ಟ್ -ಟೆರೈನ್ ಸಿಸ್ಟಮ್ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. 2WD ಮತ್ತು 4WD ನಲ್ಲಿ ಮೊದಲ 9-ಸ್ಪೀಡ್ AT ಟ್ರಾನ್ಸ್‌ಮಿಷನ್‌ಗೆ ಟ್ಯೂನ್ ಮಾಡಲಾಗಿದೆ.

ಬೆಲೆ ವಿಷಯಕ್ಕೆ ಬಂದರೆ ಜೀಪ್ ಮೆರಿಡಿಯನ್ ಟ್ರ್ಯಾಕ್ ಎಡಿಷನ್ ಬುಕಿಂಗ್‌ಗಳು ಈಗ ಭಾರತದಾದ್ಯಂತ ಜೀಪ್ ಡೀಲರ್‌ಶಿಪ್‌ಗಳಲ್ಲಿ ತೆರೆದಿವೆ. ಮೆರಿಡಿಯನ್ ಟ್ರ್ಯಾಕ್ AT ವೇರಿಯೆಂಟ್ ಬೆಲೆ ರೂ. 35,95,000 (ಎಕ್ಸ್‌ ಶೋರೂಂ), ಮೆರಿಡಿಯನ್ ಟ್ರ್ಯಾಕ್ AT 4X4 ವೇರಿಯೆಂಟ್ ಬೆಲೆಯು ರೂ. 37,82,000 (ಎಕ್ಸ್‌ ಶೋರೂಂ) ಇದೆ. 9,200 ರೂಪಾಯಿಗಳ ಹೆಚ್ಚುವರಿ ಕಡ್ಡಾಯ AXS ಪ್ಯಾಕ್ ಅನ್ವಯಿಸುತ್ತದೆ.

jeep-meridian-track-edition-price-features-engine-details

ಈ ಹೊಸ ಎಸ್‌ಯುವಿ ಸೀಮಿತವಾಗಿ (limited ‑ run) ಸಿಗಲಿದ್ದು, ಮೆರಿಡಿಯನ್‌ನ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸಲು ನಿರ್ಮಿಸಲಾಗಿದೆ. ಈ ಮಾಡಲ್ ಜೀಪ್ ಕಾನ್ಫಿಡೆನ್ಸ್-7 ನೊಂದಿಗೆ ಬರುತ್ತದೆ. ಅಂದರೆ ಇದು ಓನರ್‌ಷಿಪ್ ಕಾರ್ಯಕ್ರಮವಾಗಿದ್ದು, ಏಳು ವರ್ಷಗಳವರೆಗೆ ವಾರೆಂಟಿ, ಖಚಿತವಾದ ಮರು-ಖರೀದಿ, ಮೇಂಟೇನನ್ಸ್ ಪ್ಯಾಕೇಜ್‌ಗಳು, ರೋಡ್‌ಸೈಡ್ ಅಸಿಸ್ಟನ್ಸ್ ಮತ್ತು ಆದ್ಯತೆಯ ಸೇವೆಯನ್ನು ಒದಗಿಸುವುದಾಗಿ ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 17, 2026, 12:24 [IST]
English summary
Jeep meridian track edition price features engine details
Read more on jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+