JSW: ಕಾರು ಮಾರುಕಟ್ಟೆ ಶೇಕ್.. ಮತ್ತೊಂದು ಭಾರತದ ಬ್ರ್ಯಾಂಡ್ ಎಂಟ್ರಿ.. ಹೊಸ ಎಸ್‌ಯುವಿ ಬಿಡುಗಡೆಗೆ ಸಜ್ಜು!

ಭಾರತದ ಉಕ್ಕು ಮತ್ತು ಸಿಮೆಂಟ್ ಉದ್ಯಮದಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ (JSW Group) ದೊಡ್ಡ ಹೆಸರನ್ನು ಮಾಡಿದೆ. ಸದ್ಯ ತನ್ನದೇ ಅಂಗಸಂಸ್ಥೆ ಜೆಎಸ್‌ಡಬ್ಲ್ಯೂ ಮೋಟಾರ್ಸ್ (JSW Motors) ಮೂಲಕ ದೇಶೀಯ ವಾಹನೋದ್ಯಮಕ್ಕೆ ಸ್ವತಂತ್ರವಾಗಿ ಪ್ರವೇಶಿಸಲು ಹಣಿಯಾಗುತ್ತಿದೆ. ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಈ ನೂತನ ಕಾರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ 'ಜೆಟೂರ್ ಟಿ2'ನ್ನು ರೀ-ಬ್ಯಾಡ್ಜ್ ಮಾಡೆಲ್ ಆಗಿರಲಿದೆ ಎಂದು ಹೇಳಲಾಗಿದೆ. ಇದು ಚೀನಾದ 'ಚೆರಿ ಆಟೋಮೊಬೈಲ್' ಒಡೆತನದಲ್ಲಿದೆ.

ಜೆಎಸ್‌ಡಬ್ಲ್ಯೂ ಮೋಟಾರ್ಸ್ 'ಜೆಟೂರ್ ಟಿ2' ಎನ್ನಲಾದ ಎಸ್‌ಯುವಿಯ ಟೀಸರ್‌ ಚಿತ್ರವಿರುವ ಜಾಹೀರಾತನ್ನು ಖಾಸಗಿ ಪತ್ರಿಕೆ 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟಿಸಿದೆ. ಅದಕ್ಕೆ 'ಭವಿಷ್ಯವು ಕರೆಯುತ್ತಿದೆ. ನೀವು ಈ ಅಭಿಯಾನಕ್ಕೆ ಸೇರುವಿರಾ?' ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಇದರೊಂದಿಗೆ ಕಂಪನಿಯು ಹೊಸ ಡೀಲರ್‌ಶಿಪ್‌ಗಳನ್ನು ತೆರೆಯಲು ಆಸಕ್ತರ ಹುಡುಕಾಟದಲ್ಲಿದೆ.

JSW Motors Teases 1st New Suv Jetour T2 Details

ಎಲ್ಲವು ಅಂದುಕೊಂಡಂತೆ ಜರುಗಿದರೆ, ಈ ದೀಪಾವಳಿ ಹಬ್ಬದ ವೇಳೆಗೆ ನೂತನ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಸಾಮಾನ್ಯ ರಸ್ತೆ ಮಾತ್ರವಲ್ಲದೆ, ಆಫ್-ರೋಡ್ ಚಾಲನೆಗೂ ಹೇಳಿ ಮಾಡಿಸಿದ ರೀತಿಯಲ್ಲಿರಲಿದ್ದು, ರೂ.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಈ ಎಸ್‌ಯುವಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿರಲಿದೆ. ಅಗಲವಾಗಿರುವ ಗ್ರಿಲ್ ಹಾಗೂ ದಪ್ಪನಾದ ಬಂಪರ್‌ನ್ನು ಪಡೆದಿರಲಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿರಲಿದೆ. ಜೊತೆಗೆ ಆಕರ್ಷಕವಾದ ಬಣ್ಣಗಳೊಂದಿಗೂ ದೊರೆಯುವ ಸಾಧ್ಯತೆಯಿದೆ.

JSW Motors Teases 1st New Suv Jetour T2 Details

ಇದು ಸಾಕಷ್ಟು ವಿಶಾಲವಾಗಿರಲಿದೆ. 4,785 ಮಿ.ಮೀ ಉದ್ದ, 2,006 ಮಿ.ಮೀ ಅಗಲ ಮತ್ತು 1,880 ಮಿ.ಮೀ ಎತ್ತರವಿರಲಿದೆ. 220 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,800 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿರಲಿದೆ. ಸರಿ ಸುಮಾರು 2,194 ಕೆಜಿ ತೂಕವಿರಲಿದೆ ಎಂದು ಹೇಳಲಾಗಿದೆ.

ಹೊಸ ಕಾರು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿರಲಿದೆ. ಇದರ 1.5-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್‌, 184 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 290 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಹೊರಹಾಕಲಿದೆ.

ಮತ್ತೊಂದು 1.5-ಲೀಟರ್ ಪ್ಲಗ್-ಇನ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್, 156 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 220 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಉತ್ಪಾದಿಸಲಿದೆ. ಇನ್ನೊಂದು 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 254 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 390 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಹೊರಹಾಕಲಿದೆ. ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಈ ಎಸ್‌ಯುವಿಯು 5 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಹಾಗೂ 12-ಸ್ಪೀಕರ್ ಸೋನಿ ಆಡಿಯೊ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.

ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 6 ರಿಂದ 10-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್, ಡಿಸೆಂಟ್ ಅಸಿಸ್ಟ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿರುವ ಸಾಧ್ಯತೆಯಿದೆ.

ಜೆಎಸ್‌ಡಬ್ಲ್ಯೂ ಗ್ರೂಪ್ ಸಹಭಾಗಿತ್ವದಲ್ಲಿ ಬಂದ ಈ ಕಾರು ನಂ.1:

ಈಗಾಗಲೇ ಜೆಎಸ್‌ಡಬ್ಲ್ಯೂ ಗ್ರೂಪ್ ಹಾಗೂ ಎಂಜಿ ಮೋಟಾರ್ ವ್ಯಾಪಾರ ಪಾಲುದಾರಿಕೆ ಹೊಂದಿವೆ. ಇವೆರೆಡು ಕಂಪನಿಗಳ ಸಹಯೋಗದಲ್ಲಿ ಮಾರಾಟಕ್ಕೆ ಬಂದ 'ವಿಂಡ್ಸರ್ ಇವಿ' ನಂಬರ್ 1 ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರು ರೂ.14 ಲಕ್ಷದಿಂದ ರೂ.18.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ.

More from DriveSpark

Article Published On: Wednesday, February 25, 2026, 22:21 [IST]
English summary
Jsw motors teases 1st new suv jetour t2 details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+