Kia: ಹೊಸ 6-ಸೀಟರ್ ಕಾರು ಬಿಡುಗಡೆ: ಪೆಟ್ರೋಲ್‌ ಇಲ್ಲದೆ 490 ಕಿ.ಮೀ ಓಡಿಸಬಹುದು: ಬೆಲೆಯೆಷ್ಟು?

ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಕಿಯಾ ಇಂಡಿಯಾ, ತನ್ನ ಕ್ಯಾರೆನ್ಸ್ ಕ್ಲಾವಿಸ್ ಎಲೆಕ್ಟ್ರಿಕ್ (Kia Carens Clavis EV) ಕಾರನ್ನು 'ಮಾಡೆಲ್ ಇಯರ್ 2026 (MY26)' ಮೂಲಕ ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಈ ಅಪ್‌ಡೇಟ್‌ಗಳಲ್ಲಿ ಈಗಿರುವ 7-ಸೀಟರ್ ಆಯ್ಕೆಯ ಜೊತೆಗೆ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳೊಂದಿಗೆ 6-ಸೀಟರ್ ಅನ್ನು ಪರಿಚಯಿಸಲಾಗಿದೆ. ಜೊತೆಗೆ ಹೊಸ ಟ್ರಿಮ್‌ಗಳು ಮತ್ತು ರಿಫ್ರೆಶ್ ಮಾಡಿದ ಡಿಸೈನ್ ಪ್ಯಾಕ್ ಅಪ್‌ಡೇಟ್‌ಗಳೊಂದಿಗೆ ವಿಸ್ತರಿಸಲಾಗಿದೆ. ಒಟ್ಟಾರೆ ಈ ಅಪ್‌ಡೇಟ್‌ಗಳು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಿಯಾದ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸಿವೆ ಎಂದು ಕಿಯಾ ಹೇಳಿದೆ.

ಕಿಯಾ ಇಂಡಿಯಾ ತನ್ನ ಕ್ಯಾರೆನ್ಸ್ ಕ್ಲಾವಿಸ್ ಇವಿ ಸಿರೀಸ್ ಅನ್ನು ಈಗ ಹೊಸ ಜಿಟಿ-ಲೈನ್ ಮತ್ತು ಎಕ್ಸ್-ಲೈನ್ (GT-Line & X-Line) ವೇರಿಯೆಂಟ್‌ಗಳ ಪರಿಚಯದೊಂದಿಗೆ ವಿಸ್ತರಿಸಿದೆ. ಇದನ್ನು 6 - ಮತ್ತು 7 - ಸೀಟರ್‌ಗಳ ಸಂರಚನೆಗಳಲ್ಲಿ ನೀಡಲಾಗುತ್ತದೆ. ಇದು ಕಾರಿಗೆ ವಿಶಿಷ್ಟವಾದ SUV - ಪ್ರೇರಿತ ಸ್ಟೈಲಿಂಗ್ ಅಂಶಗಳನ್ನು ಮತ್ತು ವರ್ಧಿತ ಡಿಸೈನ್ ಆಕರ್ಷಣೆಯನ್ನು ತರುತ್ತದೆ.

kia-carens-clavis-ev-gt-line-xline-trims-and-6-seater-launched

ಹೊಸದಾಗಿ ಪರಿಚಯಿಸಲಾದ GT-ಲೈನ್ ವೇರಿಯೆಂಟ್‌ಗಳು (GTX & GTX+) ಹೊಸ ಅಲಾಯ್ ವೀಲ್ ಡಿಸೈನ್, ಲೈಮ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಮೆಟಲ್ ಪೆಡಲ್‌ಗಳು ಸೇರಿದಂತೆ ವಿಶಿಷ್ಟ ಡಿಸೈನ್ ಅಪ್‌ಡೇಟ್‌ಗಳೊಂದಿಗೆ ಕಾರುನ್ನು ಸ್ಪೋರ್ಟಿಯರ್ ಆಗಿ ಕಾಣುವಂತೆ ಮಾಡುತ್ತವೆ. ಡಿಜಿಟಲ್ ಕೀ ಮತ್ತು ಬ್ಯಾಟರಿ ಹೀಟರ್ ತಂತ್ರಜ್ಞಾನದಂತಹ ಅತ್ಯಾಧಿನಿಕ ತಂತ್ರಜ್ಞಾನದ ಫೀಚರ್‌ಗಳನ್ನು GTX+ ಮತ್ತು X-ಲೈನ್ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.

ಸ್ಟ್ಯಾಂಡರ್ಡ್ ರೇಂಜ್ ವೇರಿಯೆಂಟ್‌ಗಳು ಹೊಸದಾಗಿ ವಿನ್ಯಾಸಗೊಳಿಸಲಾದ R16 40.56 cm (16") ಬ್ಲಾಕ್ ಹೈ ಗ್ಲೋಸ್ ಏರೋ ಅಲಾಯ್ ವೀಲ್‌ಗಳೊಂದಿಗೆ ಸಜ್ಜುಗೊಂಡಿವೆ. ಪ್ರಯಾಣಿಕರ ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ಕಾರಿನಲ್ಲಿ ಈಗ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳೊಂದಿಗೆ ಹೊಸ 6-ಸೀಟರ್ ಸಂರಚನೆಯನ್ನು ನೀಡಲಾಗುತ್ತಿದೆ. 6-ಸೀಟರ್ ಸಂರಚನೆಯು HTX (E), HTX, HTX+, GTX, GTX+ ಮತ್ತು X-ಲೈನ್ ಸೇರಿದಂತೆ ಆಯ್ದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

kia-carens-clavis-ev-gt-line-xline-trims-and-6-seater-launched

ಹಾಗೆಯೇ 7-ಸೀಟರ್ ಆಯ್ಕೆಯು GTX, GTX+ ಮತ್ತು X-ಲೈನ್ ಟ್ರಿಮ್‌ಗಳಲ್ಲಿಯೂ ಲಭ್ಯವಿದ್ದು, ದೊಡ್ಡ ಕುಟುಂಬಗಳ ಪ್ರಯಾಣಕ್ಕೆ ನಮ್ಯತೆಯನ್ನು ನೀಡುತ್ತದೆ. ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಸೇರಿದಂತೆ 18 ಸುಧಾರಿತ ಫೀಚರ್‌ಗಳೊಂದಿಗೆ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲಾಗಿದೆ.

ಇಂಟೀರಿಯರ್‌ನಲ್ಲಿ 26.62 ಇಂಚಿನ ಡ್ಯುಯಲ್ ಡಿಸ್ಪ್ಲೇ, 85ಕ್ಕೂ ಹೆಚ್ಚು ಕನೆಕ್ಟೆಡ್ ಕಾರ್ ಫೀಚರ್ಸ್, ಪನೋರಮಿಕ್ ಸನ್‌ರೂಪ್‌ನೊಂದಿಗೆ ಬರುತ್ತದೆ. ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ ಈಗ ಏಳು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಗ್ಲೇಸಿಯರ್ ವೈಟ್ ಪರ್ಲ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಪ್ಯೂಟರ್ ಆಲಿವ್, ಇಂಪೀರಿಯಲ್ ಬ್ಲೂ, ಐವರಿ ಸಿಲ್ವರ್ ಮ್ಯಾಟ್ ಮತ್ತು ನ್ಯೂ ಡಾರ್ಕ್ ಗನ್ ಮೆಟಲ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು.

kia-carens-clavis-ev-gt-line-xline-trims-and-6-seater-launched

ಕಾರಿನಲ್ಲಿ 51.4 kWh ಮತ್ತು 42 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ನೀಡಲಾಗಿದ್ದು, 51.4 kWh ಬ್ಯಾಟರಿ ಪ್ಯಾಕ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 490 ಕಿ.ಮೀ ಓಡಿಸಬಹುದು. ಹಾಗೆಯೇ 42 kWh ಬ್ಯಾಟರಿ ಹೊಂದಿರುವ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ 404 ಕಿ.ಮೀ ಓಡಿಸಬಹುದು. ಕೇವಲ 39 ನಿಮಿಷಗಳಲ್ಲಿ 10% ರಿಂದ 80% ವರೆಗೆ ವೇಗವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಹೊಸ 42 kWh ಬ್ಯಾಟರಿ ಪ್ಯಾಕ್‌ ಹೊಂದಿರುವ 6-ಸೀಟರ್ ಕಾರಿನ ಬೆಲೆಯು ರೂ.19.99 ಲಕ್ಷದಿಂದ ರೂ.20.49 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ. ಹಾಗೆಯೇ 51.4 kWh ಬ್ಯಾಟರಿ ಪ್ಯಾಕ್‌ ಹೊಂದಿರುವ 6-ಸೀಟರ್ ಕಾರಿನ ಬೆಲೆಯು ರೂ.21.99 ಲಕ್ಷದಿಂದ ರೂ.24.99 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ. 7-ಸೀಟರ್ ಬೆಲೆಗಳು ರೂ.17.99 ಲಕ್ಷದಿಂದ ರೂ.24.99 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ.

More from DriveSpark

Article Published On: Friday, March 20, 2026, 10:22 [IST]
English summary
Kia carens clavis ev gt line xline trims and 6 seater launched
Read more on kia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+