Kia: ಕೊರಿಯಾ ಪವರ್ ತೋರಿಸಿದ ಕಿಯಾ.. ಜನ ಮುಗಿಬಿದ್ದು ಖರೀದಿ, ಪ್ರತಿದಿನ 890 ಕಾರುಗಳು ಸೇಲ್ಸ್!

ದಕ್ಷಿಣ ಕೊರಿಯಾ ಮೂಲದ ಕಿಯಾ (Kia) ಜನಮೆಚ್ಚಿದ ಕಾರು ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಕಂಪನಿಯ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿವೆ. ಒಟ್ಟು 27,603 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 890 ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ ಬರೋಬ್ಬರಿ 25,025 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 10.3% ಪ್ರಗತಿಯಾಗಿದೆ.

2025ರ ಡಿಸೆಂಬರ್‌ನಲ್ಲಿ 18,659 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ವಿಶ್ಲೇಷಿಸಿದಾಗ ತಿಂಗಳಿಂದ ತಿಂಗಳಿಗೆ (MoM) 47.9% ಬೆಳವಣಿಗೆಯಾಗಿದೆ. ಹೊಸ ತಲೆಮಾರಿನ ಸೆಲ್ಟೋಸ್‌ಗೆ ಗ್ರಾಹಕರಿನಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋನೆಟ್‌ಗೂ ನಿರಂತರವಾಗಿ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ಯಾರೆನ್ಸ್ ಕ್ಲಾವಿಸ್ ಹಾಗೂ ಕ್ಲಾವಿಸ್ ಇವಿಗಳಿಗೆ ಸಹ ಖರೀದಿದಾರರು ಮನಸೊತ್ತಿದ್ದಾರೆ. ಹೀಗಾಗಿ ವರ್ಷಾರಂಭದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಕಾಣಲಾಗಿದೆ ಎಂದು ಕಂಪನಿಯು ಹೇಳಿದೆ.

Kia India January 2026 Sales Every Day 890 Cars Delivery

ಈಚೆಗೆ ಬಿಡುಗಡೆಯಾದ ನೂತನ ಕಿಯಾ ಸೆಲ್ಟೋಸ್ (Kia Seltos) ವಿಶೇಷತೆಗಳೇನು:

ಈ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಾಗುತ್ತದೆ. ಕನಿಷ್ಠ ರೂ.10,99 ಲಕ್ಷ ಹಾಗೂ ಗರಿಷ್ಠ ರೂ.19,99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್‌ಟಿಇ, ಹೆಚ್‌ಟಿಇ (ಒ), ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ (ಎ), ಜಿಟಿಎಕ್ಸ್ ಹಾಗೂ ಜಿಟಿಎಕ್ಸ್ (ಎ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮ್ಯಾಗ್ಮಾ ರೆಡ್, ಐವರಿ ಸಿಲ್ವರ್ ಗ್ಲೋಸ್, ಇಂಪೀರಿಯಲ್ ಬ್ಲೂ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಬಣ್ಣಗಳೊಂದಿಗೂ ದೊರೆಯುತ್ತದೆ. ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,690 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Kia India January 2026 Sales Every Day 890 Cars Delivery

ಹೊಸ 'ಸೆಲ್ಟೋಸ್' ಎಸ್‌ಯುವಿ ಶಕ್ತಿಯುತವಾದ 3 ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 144 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್,160 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 253 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಇನ್ನೊಂದು 1.5-ಲೀಟರ್ ಡೀಸೆಲ್ ಎಂಜಿನ್, 116 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 250 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 20 ಕಿಲೋಮೀಟರ್‌ವರೆಗೆ ಮೈಲೇಜ್‌ ಕೊಡುತ್ತದೆ.

Kia India January 2026 Sales Every Day 890 Cars Delivery

ಈ ಕಾರು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 447 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ 'ಸೆಲ್ಟೋಸ್' ಎಸ್‌ಯುವಿ ಇನ್ಫೋಟೈನ್‌ಮೆಂಟ್‌ ಸಿಸ್ಟಮ್ - ಡ್ರೈವರ್ಸ್ ಡಿಸ್‌ಪ್ಲೇಗಾಗಿ ತಲಾ 12.3-ಇಂಚಿನ ಡುಯಲ್ ಸ್ಕ್ರೀನ್‌ ಸೆಟಪ್, ಸನ್‌ರೂಫ್, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನ್ನು ಹೊಂದಿದೆ.

Image Source link: Youtube

More from DriveSpark

Article Published On: Monday, February 2, 2026, 8:28 [IST]
English summary
Kia india january 2026 sales every day 890 cars delivery
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+