ಭಾರತದಲ್ಲಿ ಕೊರಿಯಾ ಎಸ್‌ಯುವಿ ಅಬ್ಬರ: 6 ಲಕ್ಷ ಮಂದಿ ಖರೀದಿ: ಏನಿದೆ ಈ ಕಾರಿನಲ್ಲಿ?
ಕೊರಿಯಾ ಮೂಲದ ಪ್ರಮುಖ ವಾಹನ ತಯಾರಕರಾದ 'ಕಿಯಾ' (Kia), ತನ್ನ ಜನಪ್ರಿಯ ಮಾಡಲ್ ಆಗಿರುವ ಸೆಲ್ಟೋಸ್‌ನೊಂದಿಗೆ ಹೊಸ ಮೈಲಿಗಲ್ಲನ್ನು ದಾಟಿದೆ. ಈ ಕಾರು 2019 ರಲ್ಲಿ ಬಿಡುಗಡೆಯಾದಾಗಿನಿಂದ, ಬಲವಾದ ಮಾರಾಟವನ್ನು ಕಾಣುತ್ತಾ ಬಂದಿದೆ. ಈಗ ಭಾರತದಲ್ಲಿ ಬರೋಬ್ಬರಿ 6 ಲಕ್ಷ ಮಂದಿ ಈ ಕಾರನ್ನು ಖರೀದಿಸಿದ್ದಾರೆ ಎಂದು ಘೋಷಿಸಿದೆ. ಹ್ಯಾಚ್‌ಬ್ಯಾಕ್ ಅಥವಾ ಸೆಡಾನ್‌ನಿಂದ ಅಪ್‌ಗ್ರೇಡ್ ಆಗುವ ಅನೇಕ ಖರೀದಿದಾರರಿಗೆ ಈ ಕಾರು ಬೆಸ್ಟ್ ಆಯ್ಕೆಯಾಗಿದೆ. ಬರೋಬ್ಬರಿ 6 ಲಕ್ಷ ಮಂದಿಯ ಮನ ಗೆದ್ದಿರುವ ಈ ಕಾರಿನ ಪ್ರಮುಖ ವಿಶೇಷತೆಗಳನ್ನು ನೋಡೋಣ.
ಹೊಸ ಕಿಯಾ ಸೆಲ್ಟೋಸ್‌ನ (Kia Seltos) ಬೆಲೆಗಳು ರೂ. 10.99 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸತತ ಅಪ್‌ಡೇಟ್‌ಗಳ ಮೂಲಕ, ಈ ಕಾರು ಈಗ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ಸ್ (ADAS)ನೊಂದಿಗೆ ವಿಶಾಲವಾದ ಸುರಕ್ಷತಾ ಪ್ಯಾಕೇಜ್ ಪಡೆದುಕೊಂಡಿದೆ.

ಹೊಸ ತಲೆಮಾರಿನ ಸೆಲ್ಟೋಸ್ ಎಸ್‌ಯುವಿ 4,460 ಮಿ.ಮೀ ಉದ್ದ, 1,830 ಮಿ.ಮೀ ಅಗಲ, 2,690 ಮಿ.ಮೀ ವೀಲ್‌ಬೇಸ್‌ನೊಂದಿಗೆ ಇದು ಸಾಟಿಯಿಲ್ಲದ ಇಂಟೀರಿಯರ್ ಸ್ಥಳ ಮತ್ತು ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ. ಒಟ್ಟಾರೆ ತನ್ನ ವಿಭಾಗದಲ್ಲಿಯೇ ದೊಡ್ಡ ಎಸ್‌ಯುವಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ರಾಜಿಯಾಗದ ಸೌಕರ್ಯ, ವಿಸ್ತೃತ ಡಿಜಿಟಲ್ ಇಂಟರ್ಫೇಸ್, ನವೀಕರಿಸಿದ ADAS ಸೂಟ್ ಮತ್ತು ವರ್ಧಿತ ಸುರಕ್ಷತೆ ನೀಡುತ್ತದೆ.
ಇಂಟೀರಿಯರ್‌ನಲ್ಲಿ 30-ಇಂಚಿನ ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಪ್ಯಾನೆಲ್, ಫಸ್ಟ್-ಇನ್-ಸೆಗ್ಮೆಂಟ್ ಸ್ಮಾರ್ಟ್ ಕೀ ಪ್ರಾಕ್ಸಿಮಿಟಿ ಅನ್‌ಲಾಕ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಡಬಲ್ ಡಿ - ಕಟ್ ಡ್ಯುಯಲ್ ಟೋನ್ ಲೆದರೆಟ್ ಸ್ಟೀರಿಂಗ್ ವೀಲ್, ಬೋಸ್ 8 - ಸ್ಪೀಕರ್ ಆಡಿಯೊ ಸಿಸ್ಟಮ್ ನಿಜವಾದ ವೈರ್‌ಲೆಸ್ ಡಿಜಿಟಲ್ ಅನುಭವವನ್ನು ನೀಡುತ್ತದೆ.

ಸುರಕ್ಷತೆ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ದೃಢವಾದ 24 ಸ್ಟ್ಯಾಂಡರ್ಡ್ ಸೇಫ್ಟಿ ಪ್ಯಾಕ್‌ನೊಂದಿಗೆ ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಜೊತೆಗೆ 21 ಸ್ವಾಯತ್ತ ವೈಶಿಷ್ಟ್ಯಗಳೊಂದಿಗೆ ಲೆವೆಲ್-2 ADAS ಹಾಗೂ ವಿವಿಧ ಚಾಲನಾ ಪರಿಸ್ಥಿತಿಗಳಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಪ್ರಯಾಣಿಕರಿಗೆ ಸೇಫ್ಟಿ ಹೆಚ್ಚಿಸುತ್ತದೆ.
ಒಟ್ಟಾರೆ ಸೆಲ್ಟೋಸ್ ತನ್ನ ಬಿಡುಗಡೆಯ ಸಮಯದಲ್ಲಿ ವ್ಯಾಪಕವಾಗಿ ಲಭ್ಯವಿಲ್ಲದ ಫೀಚರ್‌ಗಳು ಮತ್ತು ಸಂರಚನೆಗಳನ್ನು ನೀಡುವ ಮೂಲಕ ಮಿಡ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಟಾಪ್ ವೇರಿಯೆಂಟ್‌ಗಳಿಗೆ ಬಲವಾದ ಬೇಡಿಕೆ ಸೇರಿದಂತೆ ಬೇಸ್ ವೇರಿಯೆಂಟ್‌ಗಳಲ್ಲಿ ಸ್ಥಿರವಾದ ಖರೀದಿಯು ಬೆಳೆಯುತ್ತಿರುವ ಗ್ರಾಹಕರ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಎಂಜಿನ್ ವಿಶೇಷತೆಗಳು: ಹೊಸ ಕಿಯಾ ಸೆಲ್ಟೋಸ್ ಅನ್ನು ಸ್ಮಾರ್ಟ್‌ಸ್ಟ್ರೀಮ್ G1.5 ಪೆಟ್ರೋಲ್, ಸ್ಮಾರ್ಟ್‌ಸ್ಟ್ರೀಮ್ G1.5 T-GDI ಪೆಟ್ರೋಲ್ ಮತ್ತು 1.5L CRDi VGT ಡೀಸೆಲ್ ಎಂಜಿನ್ ಸೇರಿದಂತೆ ಮಲ್ಟಿ ಪವರ್‌ಟ್ರೇನ್ ಶ್ರೇಣಿಯೊಂದಿಗೆ ಬರುತ್ತದೆ. ಇದು ಮಲ್ಟಿ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಜೋಡಿಯಾಗಿದೆ - 6MT, 6iMT, IVT, 7DCT ಮತ್ತು 6AT ಆಯ್ಕೆಗಳನ್ನು ನೀಡಲಾಗಿದೆ.
ಹೆಚ್ಚುವರಿ ಫೀಚರ್ಸ್: ಫಸ್ಟ್-ಇನ್-ಸೆಗ್ಮೆಂಟ್ 10-ವೇ ಪವರ್ ಡ್ರೈವರ್ ಸೀಟ್ ಅಡ್ಜಸ್ಟ್ಮೆಂಟ್ ಮತ್ತು ORVM ಸೆಟ್ಟಿಂಗ್ ಗಳೊಂದಿಗೆ ಸಿಂಕ್ ಮಾಡಲಾದ ಇಂಟಿಗ್ರೇಟೆಡ್ ಮೆಮೊರಿ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೆಲ್ಕಮ್ ರಿಟ್ರಾಕ್ಟ್ ಸೀಟ್ ಫಂಕ್ಷನ್ ಮತ್ತು ಡ್ಯುಯಲ್ ಪೇನ್ ಪನೋರಮಿಕ್ ಸನ್‌ರೂಫ್‌ನಂತಹ ಆರಾಮದಾಯಕ ವೈಶಿಷ್ಟ್ಯಗಳು ದೀರ್ಘ-ದೂರ ಪ್ರಯಾಣಕ್ಕೆ ಸೌಕರ್ಯವನ್ನು ಹೆಚ್ಚಿಸುತ್ತವೆ.


Click it and Unblock the Notifications








