Kia: ಕೊರಿಯಾ ಕಾರಿಗೆ ಫುಲ್ ಡಿಮ್ಯಾಂಡ್... ಜನಕ್ಕೆ ಸಖತ್ ಇಷ್ಟವಾಗಿದೆ SUV: 5 ಲಕ್ಷ ಕಾರುಗಳು ಉಡೀಸ್!
ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಕಿಯಾ ಇಂಡಿಯಾ (Kia India), ಇಂದು ತನ್ನ ಜನಪ್ರಿಯ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾದ ಕಿಯಾ ಸೋನೆಟ್ (Kia Sonet) ಮಹತ್ವದ ಮೈಲಿಗಲ್ಲು ಸಾಧಿಸಿರುವುದಾಗಿ ಘೋಷಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 5 ಲಕ್ಷ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದೆ. ಈ ಮೂಲಕ ಕಿಯಾ ಸೋನೆಟ್ ಬ್ರ್ಯಾಂಡ್‌ನ ಪ್ರಮುಖ ಆಧಾರಸ್ತಂಭವಾಗಿದೆ. ವಿಶಿಷ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಹೈ-ಪರ್ಫಾಮೆನ್ಸ್ ಮತ್ತು ದೈನಂದಿನ ಪ್ರಾಯೋಗಿಕತೆಯೊಂದಿಗೆ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬೆಸ್ಟ್ ಎಸ್‌ಯುವಿಯಾಗಿ ಮುನ್ನುಗ್ಗುತ್ತಿದೆ.
ಕಿಯಾ ಸೋನೆಟ್ ಕೇವಲ ಭಾರತ ಮಾತ್ರವಲ್ಲದೆ, ಇದರ ಯಶಸ್ಸು ಜಾಗತಿಕವಾಗಿಯೂ ವಿಸ್ತರಿಸಿದೆ. MEA, ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಮೆಕ್ಸಿಕೊ ಮತ್ತು APAC ಪ್ರದೇಶ ಸೇರಿದಂತೆ ಸುಮಾರು 70 ಮಾರುಕಟ್ಟೆಗಳಿಗೆ 1,00,000 ಕ್ಕೂ ಹೆಚ್ಚು ಕಾರುಗಳನ್ನು ರಫ್ತು ಮಾಡಲಾಗಿದೆ. ಇದು ಭಾರತ - ನಿರ್ಮಿತ ಕಿಯಾ ಕಾರುಗಳಲ್ಲಿ ಅಂತರರಾಷ್ಟ್ರೀಯ ವಿಶ್ವಾಸವನ್ನು ಬಲಪಡಿಸಿಕೊಂಡಿದೆ.

ಇದು ಸತತ ಎರಡು ವರ್ಷಗಳಿಂದ ವಾರ್ಷಿಕ 1 ಲಕ್ಷ ವಾಹನ ಮಾರಾಟವನ್ನು ಮೀರಿದೆ, ಇದು ನಿರಂತರ ಗ್ರಾಹಕ ವಿಶ್ವಾಸವನ್ನು ಗಳಿಸುತ್ತಿದೆ. ಕಿಯಾ ಕಂಪನಿಯ 'ಮೇಕ್ ಇನ್ ಇಂಡಿಯಾ, ಫಾರ್ ದಿ ವರ್ಲ್ಡ್' ದೃಷ್ಟಿಕೋನದಡಿಯಲ್ಲಿ ಭಾರತದಲ್ಲಿ ತಯಾರಿಸಲ್ಪಟ್ಟ ಸೋನೆಟ್, ವಿಕಸನಗೊಳ್ಳುತ್ತಿರುವ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಸ್ಥಿರವಾಗಿ ಹೊಂದಿಕೊಂಡಿದೆ.
ಕಿಯಾ ಸೋನೆಟ್ ವಿಶೇಷತೆಗಳು
ಕಿಯಾ ಸೊನೆಟ್ ಬೆಲೆಗೆ ಸಂಬಂಧಿಸಿದಂತೆ, ಇದು ರೂ. 7.30 ಲಕ್ಷದಿಂದ ಆರಂಭವಾಗಿ ಟಾಪ್ ಟ್ರಿಮ್ ರೂ. 14.09 ಲಕ್ಷದವರೆಗೆ ಇದೆ. ಬಜೆಟ್ ಪ್ರಜ್ಞೆ ಹೊಂದಿರುವ ಖರೀದಿದಾರರಿಗೆ, ಸೋನೆಟ್ ಪ್ರವೇಶ ಮಟ್ಟದ ಪ್ರಯೋಜನವನ್ನು ಒದಗಿಸುತ್ತದೆ. ಕಿಯಾ ಸೋನೆಟ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ: 1.2L - ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್, 1.0L - ಟರ್ಬೊ ಪೆಟ್ರೋಲ್ ಮತ್ತು 1.5L - ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ವಿಭಿನ್ನ ಚಾಲನಾ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಒದಗಿಸುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಸುಮಾರು 18.4 ಕಿ.ಮೀ ಮೈಲೇಜ್ ನೀಡುತ್ತವೆ. ಡೀಸೆಲ್ ಮ್ಯಾನುವಲ್ 24.1 ಕಿ.ಮೀ ನೀಡಿದರೆ ಡೀಸೆಲ್ ಆಟೋಮ್ಯಾಟಿಕ್ ಸುಮಾರು 19 ಕಿ.ಮೀ ಮತ್ತು ಪೆಟ್ರೋಲ್ ಐಎಂಟಿ ವೇರಿಯೆಂಟ್‌ಗಳು ಲೀಟರ್‌ಗೆ 18.4 ಕಿಮೀ ಮೈಲೇಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ಕಿಯಾ ಸೋನೆಟ್ ಯುವ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕಿಯಾ ಕನೆಕ್ಟ್ ಸೂಟ್, ಒಟಿಎ ಅಪ್ಡೇಟ್, ಸೆಂಟ್ರಲ್ ಏರ್ ವೆಂಟ್ಸ್, ಸ್ಮಾರ್ಟ್ ಏರ್ ಪ್ಯೂರಿಫೈಯರ್ ಸಿಸ್ಟಮ್, 4-ವೇ ಪವರ್ ಡ್ರೈವರ್ ಸೀಟ್, 7-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

ಸುರಕ್ಷತೆ ವಿಷಯಕ್ಕೆ ಬಂದರೆ ಕಿಯಾ ಸೋನೆಟ್ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸಾರ್ಸ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್-ವೀಲ್ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಅಪಘಾತವನ್ನು ತಪ್ಪಿಸಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.
ಕಿಯಾ ಭಾರತದ 369 ನಗರಗಳಲ್ಲಿ 821 ಟಚ್ ಪಾಯಿಂಟ್‌ಗಳೊಂದಿಗೆ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊ ಮತ್ತು ಬ್ರ್ಯಾಂಡ್ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ, ಸೋನೆಟ್ ಗ್ರಾಹಕರ ನಂಬಿಕೆ, ಜಾಗತಿಕ ಪ್ರಸ್ತುತತೆ ಮತ್ತು ನಾವೀನ್ಯತೆ-ನೇತೃತ್ವದ, ಗ್ರಾಹಕ - ಕೇಂದ್ರಿತ ಬೆಳವಣಿಗೆಯ ಮೇಲೆ ಕಿಯಾ ಗಮನಹರಿಸುವ ನಿರ್ಣಾಯಕ ಸಂಕೇತವಾಗಿ ಉಳಿದಿದೆ ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications








