ಸೆಪ್ಟೆಂಬರ್ 4ಕ್ಕೆ ಕಿಯಾ ಸೊರೆಂಟೊ ಎಂಟ್ರಿ: ಬುಕಿಂಗ್ ಆರಂಭ, ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ!
ಪ್ರಿಮಿಯಂ 3-ಸಾಲಿನ ಸೀಟಿಂಗ್ ಹೊಂದಿರುವ ಸೊರೆಂಟೊ (Sorento) ಎಸ್‌ಯುವಿ ಮೂಲಕ ಕಿಯಾ ಸಂಸ್ಥೆಯು ಸೆಪ್ಟೆಂಬರ್ 4 ರಂದು ಭಾರತದ ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ನೀಡುತ್ತಿದೆ. ಶೋರೂಮ್‌ಗಳು ಮತ್ತು ಕಿಯಾ ಅಧಿಕೃತ ವೆಬ್‌ಸೈಟ್ ಮೂಲಕ 25,000 ರೂಪಾಯಿ ಮುಂಗಡ ಹಣ ನೀಡಿ ಗ್ರಾಹಕರು ಈ ಕಾರನ್ನು ಈಗಲೇ ಬುಕ್ ಮಾಡಬಹುದು. ಇದು ಹೈಬ್ರಿಡ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸಿಗಲಿದ್ದು, ಆಲ್-ವೀಲ್ ಡ್ರೈವ್ (AWD) ಫೀಚರ್ ಕೂಡ ಇರಲಿದೆ. ಇದು ಭಾರತದಲ್ಲಿ ಕಿಯಾ ಸಂಸ್ಥೆಯ ಮೊದಲ ಹೈಬ್ರಿಡ್ ಎಸ್‌ಯುವಿ ಆಗಿದ್ದು, 6 ಅಥವಾ 7 ಸೀಟರ್ ಮಾದರಿಯಲ್ಲಿ ಸಿಗಲಿದೆ. ಸೆಲ್ಟೋಸ್ ಮತ್ತು ಕರೆನ್ಸ್ ಕಾರುಗಳಿಗಿಂತ ಮೇಲಿನ ಕ್ರಮಾಂಕದಲ್ಲಿ, ಕಂಪನಿಯ ಫ್ಲ್ಯಾಗ್‌ಶಿಪ್ ಮಾಡೆಲ್ ಆಗಿ ಇದು ಮಾರುಕಟ್ಟೆಗೆ ಬರಲಿದೆ.
ಟೊಯೋಟಾ ಫಾರ್ಚೂನರ್ ಮತ್ತು ಎಂಜಿ ಗ್ಲೋಸ್ಟರ್ ಕಾರು ಖರೀದಿಸಲು ಬಯಸುವ ಗ್ರಾಹಕರನ್ನು ಕಿಯಾ ಪ್ರಮುಖವಾಗಿ ಟಾರ್ಗೆಟ್ ಮಾಡಿದೆ. ಇದರ ಜೊತೆಗೆ ಸ್ಕೋಡಾ ಕೋಡಿಯಾಕ್, ಜೀಪ್ ಮೆರಿಡಿಯನ್ ಮತ್ತು ಮಹೀಂದ್ರಾ XUV 7XO ಪ್ರಿಯರ ಗಮನ ಸೆಳೆಯಲು ಸೊರೆಂಟೊ ಸಜ್ಜಾಗಿದೆ. ಭಾರತದಲ್ಲಿ ಕಿಯಾ ಕಂಪನಿಯ ಪ್ರಮುಖ ಇಂಟರ್ನಲ್ ಕಾಂಬಸ್ಟನ್ (ICE) ಎಸ್‌ಯುವಿ ಆಗಿ ಇದು ಇರಲಿದೆ. ಲಾಂಚ್ ವೇಳೆಯಷ್ಟೇ ಅಧಿಕೃತ ಬೆಲೆಯನ್ನು ಕಂಪನಿ ಪ್ರಕಟಿಸಲಿದ್ದು, ಸದ್ಯಕ್ಕಂತೂ ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡಿಲ್ಲ. ಆರಂಭಿಕ ಅಂದಾಜು ಬೆಲೆಗಳು ಭಿನ್ನವಾಗಿದ್ದು, ನಿಮ್ಮ ನಗರದ ಆನ್-ರೋಡ್ ಬೆಲೆ ಹೊರಬಿದ್ದ ಮೇಲೆಯೇ ಪೂರ್ಣ ವೆಚ್ಚದ ಅಂದಾಜು ಸಿಗಲಿದೆ.

ಕಿಯಾ ಸೊರೆಂಟೊ ಇಂಡಿಯಾ ಲಾಂಚ್: ವೇರಿಯೆಂಟ್ಸ್, ಹೈಬ್ರಿಡ್ ಮತ್ತು ಡೀಸೆಲ್ ಎವಿಡಿ ಮಾಹಿತಿ
ಮಾಧ್ಯಮಗಳ ವರದಿ ಪ್ರಕಾರ, ಭಾರತಕ್ಕೆ ಬರಲಿರುವ ಕಾರಿನ ಎಂಜಿನ್ ಆಯ್ಕೆಗಳು ಜಾಗತಿಕ ಮಾರುಕಟ್ಟೆಯಲ್ಲಿರುವಂತೆಯೇ ಇರಲಿವೆ. ಇದರಲ್ಲಿ 1.6-ಲೀಟರ್ ಟರ್ಬೊ-ಪೆಟ್ರೋಲ್ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್ ಸುಮಾರು 238 ಹೆಚ್‌ಪಿ ಪವರ್ ಮತ್ತು 380 ಎನ್ಎಮ್ ಟಾರ್ಕ್ ನೀಡುವ ನಿರೀಕ್ಷೆಯಿದೆ. ಇನ್ನು 2.2-ಲೀಟರ್ ಡೀಸೆಲ್ ಎಂಜಿನ್ 202 ಹೆಚ್‌ಪಿ ಪವರ್ ಹಾಗೂ 441 ಎನ್‌ಎಮ್ ಟಾರ್ಕ್ ಜನರೇಟ್ ಮಾಡಬಲ್ಲದು. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸ್ಟ್ಯಾಂಡರ್ಡ್ ಆಗಿದ್ದು, ಫ್ರಂಟ್-ವೀಲ್ ಡ್ರೈವ್ ಬೇಸ್ ಮಾದರಿಯಲ್ಲಿರಲಿದೆ. ಎವಿಡಿ (AWD) ಇರುವುದು ಖಚಿತವಾಗಿದ್ದು, ಭಾರತದಲ್ಲಿ ಡೀಸೆಲ್ ವೇರಿಯೆಂಟ್‌ನಲ್ಲಿ ಇದು ಸಿಗಲಿದೆ ಎಂದು ಹಲವು ವರದಿಗಳು ತಿಳಿಸಿವೆ.
ಕಿಯಾ ಸೊರೆಂಟೊ ಬುಕಿಂಗ್, ಫೀಚರ್ಸ್, ಎಡಿಎಎಸ್ ಮತ್ತು ಡೆಲಿವರಿ ವಿವರ
ಕುಟುಂಬದೊಂದಿಗೆ ಸುಖಕರ ಪ್ರಯಾಣ ಬೆಳೆಸಲು ಕಾರಿನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದೆ. ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು ಹಾಗೂ ಲೆವೆಲ್ 2 ಎಡಿಎಎಸ್ (ADAS) ಭದ್ರತಾ ತಂತ್ರಜ್ಞಾನ ಕಾರಿನಲ್ಲಿರಲಿದೆ. ಜೊತೆಗೆ ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಫೋನ್ ಕನೆಕ್ಟಿವಿಟಿ ಮತ್ತು ರೋಟರಿ ಡ್ರೈವ್ ಸೆಲೆಕ್ಟರ್ ಕೂಡ ಸಿಗಲಿವೆ. ಪ್ರಿ-ಬುಕಿಂಗ್‌ಗೆ 25,000 ರೂಪಾಯಿ ನಿಗದಿಪಡಿಸಲಾಗಿದ್ದು, ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಆರಂಭದಲ್ಲಿ ಕಾರು ಡೆಲಿವರಿ ಆರಂಭವಾಗಲಿದೆ. ಸ್ಥಳೀಯವಾಗಿಯೇ ಉತ್ಪಾದನೆ ಶುರುವಾಗಿರುವುದರಿಂದ ಕಾರಿನ ವೇಟಿಂಗ್ ಪೀರಿಯಡ್ ತೀರಾ ಹೆಚ್ಚಿರಲಾರದು.
ಕಿಯಾ ಸೊರೆಂಟೊ vs ಫಾರ್ಚೂನರ್, ಗ್ಲೋಸ್ಟರ್, XUV 7XO: ಯಾರಿಗೆ ಇದು ಸೂಕ್ತ?
ಫಾರ್ಚೂನರ್ ಕಾರನ್ನು ಇಷ್ಟಪಡುವವರು ಸಾಮಾನ್ಯವಾಗಿ ಅದರ ಆಫ್-ರೋಡ್ ಸಾಮರ್ಥ್ಯ ಮತ್ತು ರಿಸೇಲ್ ವ್ಯಾಲ್ಯೂಗೆ ಆದ್ಯತೆ ನೀಡುತ್ತಾರೆ. ಆದರೆ ಸೊರೆಂಟೊ ತನ್ನ ಸೂಪರ್ ಹೈಬ್ರಿಡ್ ಮೈಲೇಜ್, ಸ್ಮೂತ್ ರೈಡಿಂಗ್ ಅನುಭವ ಮತ್ತು ರಿಚ್ ಫೀಚರ್‌ಗಳ ಮೂಲಕ ಪೈಪೋಟಿ ನೀಡಲಿದೆ. ದೊಡ್ಡ ಜಾಗ ಮತ್ತು ADAS ಬಯಸಿ ಗ್ಲೋಸ್ಟರ್ ಖರೀದಿಸಲು ಯೋಚಿಸುತ್ತಿರುವವರಿಗೆ, ನಗರ ಚಾಲನೆಗೆ ಈ ಸೊರೆಂಟೊ ಸೂಕ್ತ ಎನಿಸಲಿದೆ. ಇನ್ನು ಕೋಡಿಯಾಕ್ ಮತ್ತು ಮೆರಿಡಿಯನ್ ನೀಡುವ ರೋಡ್ ಕಂಫರ್ಟ್‌ಗೆ ಸೊರೆಂಟೊ ಕೂಡ ಕಮ್ಮಿ ಇಲ್ಲ. ಮಹೀಂದ್ರಾ XUV 7XO ಉತ್ತಮ ತಂತ್ರಜ್ಞಾನ ನೀಡಿದರೂ, ಸೊರೆಂಟೊ ಹೈಬ್ರಿಡ್ ಮಾದರಿಯು ದೈನಂದಿನ ರನ್ನಿಂಗ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು.


Click it and Unblock the Notifications