Mahindra: ಎಲ್ಲಾ ಕಾರುಗಳು ಉಡೀಸ್: ಫುಲ್ ಡಿಮ್ಯಾಂಡ್, ಬುಕಿಂಗ್ ತೆರೆಯಲು ಪಟ್ಟು: ಯಾವುದೀ ಕಾರು?
ದೇಶದ ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯಾಗಿರುವ ಮಹೀಂದ್ರಾ, ಇಂದು BE 6 ಬ್ಯಾಟ್‌ಮ್ಯಾನ್ ಎಡಿಷನ್ ಅನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ವಿಶ್ವದ ಮೊದಲ ಬ್ಯಾಟ್‌ಮ್ಯಾನ್ - ಥೀಮ್ SUV ಆಗಿದ್ದು, ಇದು ತನ್ನ ಮೊದಲ ಬಿಡುಗಡೆಯ ನಂತರ ಅಭಿಮಾನಿಗಳು ಮತ್ತು ಗ್ರಾಹಕರಿಂದ ಅಸಾಧಾರಣ ಬೇಡಿಕೆಯನ್ನು ಪಡೆದಿರುವ ಕಾರಾಗಿ ಜನಪ್ರಿಯತೆ ಪಡೆದಿದೆ. ಈ ಹಿಂದೆ ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಸಹಯೋಗದೊಂದಿಗೆ ಡಿಸೈನ್ ಮಾಡಲಾದ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬಿಡುಗಡೆಯಾದಾಗ ಕೇವಲ 135 ಸೆಕೆಂಡುಗಳಲ್ಲಿ 999 ಯುನಿಟ್ ಕಾರುಗಳು ಮಾರಾಟವಾಗಿದ್ದವು.
ಅಂದಿನಿಂದ, ಕ್ರಿಸ್ಟೋಫರ್ ನೋಲನ್ ಅವರ ದಿ ಡಾರ್ಕ್ ನೈಟ್ ಟ್ರೈಲಜಿಯಿಂದ ಪ್ರೇರಿತವಾದ ಈ SUV, ಸಂಗ್ರಾಹಕರ ನೆಚ್ಚಿನ ಕಾರಾಗಿ ಗಮನ ಸೆಳೆಯುವುದನ್ನು ಮುಂದುವರೆಸಿದೆ. ಮಹೀಂದ್ರಾ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಅಭಿಮಾನಿಗಳಿಂದ ಈ ಕಾರಿನ ಮರು-ಬಿಡುಗಡೆ ಬಗ್ಗೆ ಹಲವು ಕಮೆಂಟ್‌ಗಳು ಬರುತ್ತಲೇ ಇವೆ. ಇವರೆಲ್ಲರು ಬುಕಿಂಗ್ ಮಿಸ್ ಮಾಡಿಕೊಂಡವರಾಗಿದ್ದು, ಮತ್ತೊಮ್ಮೆ ಕಾರನ್ನು ಬಿಡುಗಡೆ ಮಾಡಲು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಮಹೀಂದ್ರಾ ಸೀಮಿತ ಅವಧಿಗೆ BE 6 ಬ್ಯಾಟ್‌ಮ್ಯಾನ್ ಎಡಿಷನ್ ಬುಕಿಂಗ್‌ಗಳನ್ನು ಮತ್ತೆ ಪ್ರಾರಂಭಿಸುತ್ತಿದೆ. ಬುಕಿಂಗ್‌ಗಳು ಮಾರ್ಚ್ 10, 2026 ರಂದು ಬೆಳಿಗ್ಗೆ 11:00 ಗಂಟೆಗೆ (ಒಂದು ದಿನ ಮಾತ್ರ) ಪ್ರಾರಂಭವಾಗುತ್ತವೆ. ಹಾಗೆಯೇ ಡೆಲಿವರಿಗಳು ಏಪ್ರಿಲ್ 10, 2026 ರಂದು ಪ್ರಾರಂಭವಾಗಲಿವೆ ಎಂದು ಮಹೀಂದ್ರಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
BE 6 ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದಾಗ ಯಾರು ಖರೀದಿಸಿದ್ದರೋ, ಅವರು ಈ ಬುಕಿಂಗ್ ಪ್ರಕ್ರಿಯೆಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ. ಹೌದು, ಈಗಾಗಲೇ ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಹೊಂದಿರುವ ಮಾಲೀಕರು ಯಾರಿಗೆ ಕಾರನ್ನು ಡೆಲಿವರಿ ಕೊಡಲು ಸೂಚಿವರೋ ಅವರಿಗೆ ಮೊದಲ ಆದ್ಯತೆಯ ಮೇರೆಗೆ ಬುಕಿಂಗ್‌ಗಳನ್ನು ಪರಿಗಣಿಸಿ ಡೆಲಿವರಿ ನೀಡಲಾಗುವುದು ಎಂದು ಮಹೀಂದ್ರಾ ಹೇಳಿದೆ.

ಅತ್ಯಂತ ಆಕರ್ಷಕ ಹಾಗೂ ಸ್ಪೋರ್ಟಿ ಡಿಸೈನ್‌ನಿಂದ ಪ್ರೇರಿತವಾದ BE 6 ಬ್ಯಾಟ್‌ಮ್ಯಾನ್ ಎಡಿಷನ್ ಕಾರು ಪರ್ಫಾಮೆನ್ಸ್, ಡಿಸೈನ್ ಮತ್ತು ವಿನ್ಯಾಸ ಅಂಶಗಳನ್ನು DC ಯ ಬ್ಯಾಟ್‌ಮ್ಯಾನ್‌ನ ನಿಸ್ಸಂದಿಗ್ಧ ಪಾತ್ರವನ್ನು ಪ್ರತಿಬಿಂಬಿಸುತ್ತದೆ. BE 6 ಬ್ಯಾಟ್‌ಮ್ಯಾನ್ ಎಡಿಷನ್ BE 6 ರ ಟಾಪ್-ಎಂಡ್ ಪ್ಯಾಕ್ ತ್ರೀ 79 kWh ವೇರಿಯೆಂಟ್ ಆಗಿದೆ ಎಂದು ಮಹೀಂದ್ರಾ ತಿಳಿಸಿದೆ.
ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ ಎಲೆಕ್ಟ್ರಿಕ್ ಎಸ್‌ಯುವಿ (Mahindra BE 6 Batman Edition), ರೂ.28.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈ ಬಾರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ಕಾರುಗಳನ್ನು ಉತ್ಪಾದಿಸಲಾಗುವುದು. ಆಸಕ್ತ ಗ್ರಾಹಕರು ಈಗಾಗಲೇ ಖರೀದಿಸಿದ ಮಾಲೀಕರನ್ನು ಸಂಪರ್ಕಿಸುವ ಜೊತೆಗೆ ಬುಕಿಂಗ್ ತೆರೆದ ಕೂಡಲೇ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ.

ಬ್ಯಾಟ್‌ಮ್ಯಾನ್ ಎಡಿಷನ್ ವಿಶೇಷತೆಗಳು
ಪ್ರಮುಖ ವಿನ್ಯಾಸ ಅಂಶಗಳು: ಕಸ್ಟಮ್ ಸ್ಯಾಟಿನ್ ಬ್ಲಾಕ್ ಕಲರ್, ಮುಂಭಾಗದ ಬಾಗಿಲುಗಳಲ್ಲಿ ಕಸ್ಟಮ್ ಬ್ಯಾಟ್‌ಮ್ಯಾನ್ ಡೆಕಲ್, R20 ಅಲಾಯ್ ವೀಲ್‌ಗಳು, ಸ್ಯಾಟಿನ್ ಬ್ಲಾಕ್ ಬಾಡಿ, ಪ್ರೀಮಿಯಂ ಆಲ್ಕೆಮಿ ಗೋಲ್ಡ್ - ಪೇಂಟೆಡ್ ಸಸ್ಪೆನ್ಷನ್ ಮತ್ತು ಬ್ರೇಕ್ ಕ್ಯಾಲಿಪರ್‌ಗಳನ್ನು ಕಾರಿನಲ್ಲಿ ಒದಗಿಸಲಾಗಿದೆ. ದಿ ಡಾರ್ಕ್ ನೈಟ್ ಟ್ರೈಲಜಿ ಬ್ಯಾಟ್ ಎಂಬ್ಲಮ್ ಅನ್ನು ಹೊಂದಿರುವ ಇನ್ಫಿನಿಟಿ ರೂಫ್ ಹಾಗೂ ಪ್ರೊಜೆಕ್ಷನ್‌ನೊಂದಿಗೆ ಕಾರ್ಪೆಟ್ ಲ್ಯಾಂಪ್‌ಗಳು ಇವೆ.
ಇಂಟೀರಿಯರ್ ವಿನ್ಯಾಸ ಅಂಶಗಳು: ಡ್ಯಾಶ್‌ಬೋರ್ಡ್‌ನಲ್ಲಿ ಆಲ್ಕೆಮಿ ಗೋಲ್ಡ್ ಬ್ಯಾಟ್‌ಮ್ಯಾನ್ ಪ್ಲೇಕ್, ಡ್ರೈವರ್ ಕಾಕ್‌ಪಿಟ್ ಸುತ್ತಲೂ ಬ್ರಷ್ ಮಾಡಿದ ಗೋಲ್ಡ್ ಲೆದರ್ ಇನ್ಸಟ್ರೂಮೆಂಟ್ ಪ್ಯಾನಲ್, ಗೋಲ್ಡ್ ಸೆಪಿಯಾ ಅಕ್ಸೆಂಟ್ ಸ್ಟಿಚ್ ಹಾಗೂ ಸ್ಟೀರಿಂಗ್ ವೀಲ್, ಇನ್-ಟಚ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕಸ್ಟಮ್ ಆಲ್ಕೆಮಿ ಗೋಲ್ಡ್ ಕೀ ಫೋಬ್ ನೀಡಲಾಗಿದೆ.


Click it and Unblock the Notifications








