ರೈತರಿಗಾಗಿ ಕರ್ನಾಟಕದಲ್ಲಿ ಹೊಸ ಮಹೀಂದ್ರಾ ರೋಟವೇಟರ್ ಬಿಡುಗಡೆ: ವಿಶೇಷತೆಗಳೇನು?
ಭಾರತದ ಪ್ರಮುಖ ಟ್ರ್ಯಾಕ್ಟರ್ ಕಂಪನಿ ಮತ್ತು ಭಾರತದ ಅತಿದೊಡ್ಡ ಕೃಷಿ ಯಂತ್ರೋಪಕರಣ ಹಾಗೂ ರೋಟವೇಟರ್ ತಯಾರಕರಲ್ಲಿ ಒಂದಾದ ಮಹೀಂದ್ರಾ (Mahindra) ಕಂಪನಿಯು, ಕರ್ನಾಟಕದಲ್ಲಿ ತನ್ನ ಹೊಸ ಮಹೀಂದ್ರಾ ರೋಟವೇಟರ್ ಸರಣಿ (Mahindra Rotavator Series) ಯನ್ನು ಬಿಡುಗಡೆ ಮಾಡಿದೆ. ಬೋಲ್ಡ್ ನ್ಯೂ ಲುಕ್ ಮತ್ತು ಆಕರ್ಷಕವಾದ ಮಾಸ್ಟ್ ವಿನ್ಯಾಸದ ವೈಶಿಷ್ಟ್ಯವನ್ನು ಹೊಂದಿರುವ ಹೊಸ ಮಹೀಂದ್ರಾ ರೋಟವೇಟರ್ ಸರಣಿಯು ಹೆವಿ ಡ್ಯೂಟಿ ಕಾರ್ಯಕ್ಷಮತೆ ಒದಗಿಸುತ್ತದೆ. ಜೊತೆಗೆ ಅತ್ಯಂತ ಸೊಗಸಾದ ನೋಟವನ್ನು ಹೊಂದಿರುವುದು ವಿಶೇಷವಾಗಿದೆ.
ಹೊಸ ರೋಟವೇಟರ್ ಸರಣಿಯು ಹೆವಿ ಡ್ಯೂಟಿ ರೋಟವೇಟರ್ ವಿಭಾಗದ ಅಡಿಯಲ್ಲಿ ಲಭ್ಯವಿದ್ದು, 4 ರಿಂದ 9 ಅಡಿಗಳವರೆಗಿನ ಸಾಮರ್ಥ್ಯದಲ್ಲಿ ಮಹಾವೇಟರ್ ಮತ್ತು ಮಹಾವೇಟರ್ ಹೆಚ್‌ಡಿ ದೊರೆಯುತ್ತದೆ. ಸಮಗ್ರ ಮಾರುಕಟ್ಟೆ ವಿಶ್ಲೇಷಣೆ ಬಳಿಕ ಮತ್ತು ರೈತರ ಪ್ರತಿಕ್ರಿಯೆಯ ಆಧಾರದ ಮೇಲೆ ಅಭಿವೃದ್ಧಿಪಡಿಸಲಾದ ಮಹೀಂದ್ರಾದ ಹೊಸ ರೋಟವೇಟರ್ ಸರಣಿಯು ಉನ್ನತ ರಚನಾತ್ಮಕ ಸಮಗ್ರತೆ ಮತ್ತು ದೀರ್ಘ ಬಾಳಿಕೆಯನ್ನು ನೀಡುತ್ತದೆ.

ಹೊಸ ಉತ್ಪನ್ನ ಶ್ರೇಣಿಯು ಹೆವಿ ಡ್ಯೂಟಿ ಉಳುಮೆ ಕಾರ್ಯಾಚರಣೆಗಳು ಮತ್ತು ಸವೆತವನ್ನು ಎದುರಿಸಲು ಹೆಚ್ಚಿನ ಬಲವನ್ನು ನೀಡುತ್ತದೆ. ಸುಧಾರಿತ ಸ್ಥಿರತೆ ಮತ್ತು ನಿರ್ವಹಣಾ ಸಾಮರ್ಥ್ಯ ಹೊಂದಿರುವ ಈ ಶ್ರೇಣಿಯು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಠಿಣ ಮತ್ತು ಅಸಮರ್ಪಕವಾದ ಕೃಷಿ ಪ್ರದೇಶಗಳಲ್ಲಿ ದೀರ್ಘ ಕಾಲದಲ್ಲಿ ಉತ್ತಮ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ಹೊಸ ಲುಕ್‌ನ ರೋಟವೇಟರ್ ಸರಣಿಯ ಕುರಿತು ಮಾತನಾಡಿದ ಮಹೀಂದ್ರಾ ಫಾರ್ಮ್ ಈಕ್ವಿಪ್ ಮೆಂಟ್ ಬಿಸಿನೆಸ್ ಹಾಗೂ ಫಾರ್ಮ್ ಮೆಷಿನರಿ ಬಿಸಿನೆಸ್ ಹೆಡ್ ಡಾ. ಅನುಷಾ ಕೋದಂಡರಾಮನ್ ಮಾತನಾಡಿ, "ಕೃಷಿ ಉತ್ಪಾದಕತೆಗೆ ಕೃಷಿ ಯಾಂತ್ರೀಕರಣವು ಅತ್ಯಗತ್ಯ ಮತ್ತು ಕೃಷಿ ಭೂಮಿಯನ್ನು ಸಮರ್ಥವಾಗಿ ಸಿದ್ಧಪಡಿಸುವಲ್ಲಿ ರೋಟವೇಟರ್ ಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ.
ಮಹೀಂದ್ರಾ ರೋಟವೇಟರ್‌ಗಳನ್ನು ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ರೈತರ ಜೀವನೋಪಾಯಕ್ಕೆ ಬೆಂಬಲ ನೀಡುವ ಕೃಷಿ ಉಪಕರಣಗಳ ಮೇಲಿನ ಅವರ ಮಾಲೀಕತ್ವದ ಭಾವನೆಯನ್ನು ಟ್ರ್ಯಾಕ್ಟರ್ ಗಳ ಆಚೆಗೂ ಹೆಚ್ಚಿಸುತ್ತದೆ. ಪ್ರಾರಂಭದಲ್ಲಿ 4 ರಿಂದ 9 ಅಡಿ ವಿಭಾಗದಲ್ಲಿ ನೀಡಲಾಗುವ ಹೊಸ ಲುಕ್ ನ ರೋಟವೇಟರ್ ಗಳು ಕರ್ನಾಟಕದಾದ್ಯಂತ ಮಹೀಂದ್ರಾದ ವ್ಯಾಪಕ ಡೀಲರ್ ಜಾಲದ ಮೂಲಕ ಹಂತಹಂತವಾಗಿ ರೈತರನ್ನು ತಲುಪಲಿವೆ" ಎಂದು ಹೇಳಿದರು.
ಹೊಸದಾಗಿ ವಿನ್ಯಾಸಗೊಳಿಸಲಾದ ರೋಟವೇಟರ್ ಶ್ರೇಣಿಯು ಮಹೀಂದ್ರಾದ ಪ್ರಸ್ತುತ ರೋಟವೇಟರ್ ಮಾಡೆಲ್‌ಗಳ ಸ್ಥಾನವನ್ನು ತುಂಬಲಿದ್ದರೂ, ಮಹೀಂದ್ರಾ ತನ್ನ ಅಸ್ತಿತ್ವದಲ್ಲಿರುವ ಮಾಡೆಲ್ ಲೈನ್- ಅಪ್ ಅನ್ನು ನೀಡುವುದನ್ನು ಮುಂದುವರಿಸುತ್ತದೆ. ಈ ಮೂಲಕ ವೈವಿಧ್ಯಮಯ ಕೃಷಿ ಅಗತ್ಯಗಳು ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸುವ ಸಂಪೂರ್ಣ ಪೋರ್ಟ್‌ಫೋಲಿಯೋವನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ದೇಶದ ಹೆಮ್ಮೆಯನ್ನು ಸಾರಲು ಮಹೀಂದ್ರಾ ನಮ್ಮ ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣದಿಂದ ಸ್ಫೂರ್ತಿ ಪಡೆದ ಮೆಟಾಲಿಕ್ ಆರೆಂಜ್, ಎವರೆಸ್ಟ್ ವೈಟ್ ಮತ್ತು ಮೆಟಾಲಿಕ್ ಗ್ರೀನ್ ಬಣ್ಣಗಳಲ್ಲಿ ಸೀಮಿತ ಆವೃತ್ತಿಯ ಮಹೀಂದ್ರಾ ರೋಟವೇಟರ್‌ಗಳನ್ನು ಸಹ ಒದಗಿಸುತ್ತಿದೆ. ಮಹಾವೇಟರ್ ಹೆಚ್‌ಡಿ, ಸೂಪರ್ ವೇಟರ್ ಮತ್ತು ಗೈರೋವೇಟರ್ ಝಡ್ಎಲ್ಎಕ್ಸ್+ ವೇರಿಯೆಂಟ್ ಗಳಲ್ಲಿ ಲಭ್ಯವಿರುವ ಈ ಆವೃತ್ತಿಯು ಭಾರತದ ಕೃಷಿ ಸಮುದಾಯದ ಶಕ್ತಿ ಮತ್ತು ದೃಢತೆಗೆ ಸಲ್ಲುತ್ತಿರುವ ಗೌರವ ಸಮರ್ಪಣೆಯಾಗಿದೆ ಎಂದು ಹೇಳಿದೆ.
ಮಹೀಂದ್ರಾ ಇಂಟೆಲಿಜೆಂಟ್ ರೋಟವೇಟರ್ ಅನ್ನು ಸಹ ನೀಡುತ್ತಿದ್ದು, ಇದು ಟೆಜ್- ಇ ಬ್ರ್ಯಾಂಡ್ ಹೆಸರಿನಲ್ಲಿ ಪೇಟೆಂಟ್ ಪಡೆದ ವಿನೂತನ ಆವಿಷ್ಕಾರವಾಗಿದೆ. ರೋಟವೇಟರ್‌ನಲ್ಲಿ ಸಂಯೋಜಿಸಲಾದ ಬ್ಲೂಟೂತ್ ತಂತ್ರಜ್ಞಾನದೊಂದಿಗೆ, ಈ ಇಂಟೆಲಿಜೆಂಟ್ ರೋಟವೇಟರ್ ಹೊಲದಿಂದ ನೈಜ ಸಮಯದ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್‌ಗೆ ರವಾನಿಸುತ್ತದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನವು ಉಳುಮೆಯ ಹಳೆಯ ಸಂಪ್ರದಾಯದ ಜೊತೆ ಮಿಳಿತಗೊಂಡಿದ್ದು, ನಿಖರ ಕೃಷಿಗೆ ಹೊಸ ರೂಪ ನೀಡಲಿದೆ.
ಮಹೀಂದ್ರಾ ದೇಶದ ಅತಿದೊಡ್ಡ ರೋಟವೇಟರ್ ತಯಾರಕರಲ್ಲಿ ಒಂದಾಗಿದ್ದು, ಕಂಪನಿಯ ವ್ಯಾಪಕ ರೋಟವೇಟರ್ ಶ್ರೇಣಿಯನ್ನು ವಿಶ್ವದರ್ಜೆಯ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ. ಮೇಡ್ ಇನ್ ಇಂಡಿಯಾ ಮಹೀಂದ್ರಾ ರೋಟವೇಟರ್‌ಗಳನ್ನು ಪಂಜಾಬ್ ಮತ್ತು ತೆಲಂಗಾಣದ ಜಹೀರಾಬಾದ್‌ನಲ್ಲಿರುವ ಉತ್ಪಾದನಾ ಘಟಕಗಳಲ್ಲಿ ತಯಾರಿಸಲಾಗುತ್ತದೆ.


Click it and Unblock the Notifications








