Mahindra: ನಿನ್ನೆ ಬಿಡುಗಡೆಯಾಗಿದೆ ಮಹೀಂದ್ರಾದ ಹೊಸ ಬ್ರಹ್ಮಾಸ್ತ್ರ: ಟಾಪ್-5 ಮುಖ್ಯಾಂಶಗಳಿವು!
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ (Mahindra), ನಿನ್ನೆಯಷ್ಟೆ ಇತ್ತೀಚಿನ ಟ್ರೆಂಡ್ ಸೆಟರ್ ಆಗಿರುವ ಹೊಸ XUV 7XO ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆಯು ರೂ. 13.66 ಲಕ್ಷ (ಎಕ್ಸ್-ಶೋರೂಂ) ಹಾಗೂ ಟಾಪ್ ವೇರಿಯೆಂಟ್ ರೂ. 24.11 ಲಕ್ಷ (ಎಕ್ಸ್-ಶೋರೂಂ) ಇದೆ. ಅಂದಹಾಗೆ ಈ ಹೊಸ XUV 7XO ಎಸ್‌ಯುವಿ ಮಹೀಂದ್ರಾದ ಹಳೆಯ XUV 700 ಎಸ್‌ಯುವಿಯ ಅಪ್‌ಡೇಟೆಡ್ ಮಾಡಲ್ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೊಸ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿದೆ.
ಕೋಸ್ಟ್-ಟು-ಕೋಸ್ಟ್ 31.24 ಸೆಂ.ಮೀ ಟ್ರಿಪಲ್ HD ಸ್ಕ್ರೀನ್‌ಗಳು, ಇಂಟೆಲಿಜೆಂಟ್ ಅಡ್ರಿನಾಕ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಚಾಟ್‌ಜಿಪಿಟಿಯೊಂದಿಗೆ ಅಲೆಕ್ಸಾ ಬಿಲ್ಟ್-ಇನ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು 75 ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. AX7, AX7T, AX7L ವೇರಿಯೆಂಟ್‌ಗಳ ಡೆಲಿವರಿಯು ಜನವರಿ 14, 2026 ರಿಂದ ಆರಂಭವಾಗಲಿದೆ. ಹಾಗೆಯೇ AX, AX3, AX5 ವೇರಿಯೆಂಟ್‌ಗಳು ಏಪ್ರಿಲ್ 2026 ರಿಂದ ಪ್ರಾರಂಭವಾಗುತ್ತದೆ.

ಕಾರಿನ ಪ್ರಮುಖ ಮುಖ್ಯಾಂಶಗಳು
ಅಭಿವ್ಯಕ್ತ ವಿನ್ಯಾಸ: ರತ್ನದಂತಹ ಟ್ಯಾಲನ್ ಅಕ್ಸೆಂಟ್‌ಗಳೊಂದಿಗೆ ಪೂರ್ಣ-ಅಗಲದ ಗ್ರಿಲ್, DRL ಗಳೊಂದಿಗೆ ಬೈ-LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಡೈಮೆಂಡ್-ಪ್ರೇರಿತ ಕ್ಲಿಯರ್ ಲೆನ್ಸ್ LED ಟೈಲ್‌ಲ್ಯಾಂಪ್‌ಗಳು, R19 ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಸೂಪರ್ - ಪ್ರೀಮಿಯಂ ಹೈ - ಗ್ಲಾಸ್ ಪಿಯಾನೋ-ಬ್ಲಾಕ್ ಫಿನಿಶ್ 'ಟಫ್ - ಪ್ರೀಮಿಯಂ' ಡಿಸೈನ್ ಹೊಂದಿದೆ.
ಅನುಭವದ ತಂತ್ರಜ್ಞಾನ: ಕೋಸ್ಟ್- ಟು -ಕೋಸ್ಟ್ 31.24cm ಟ್ರಿಪಲ್ HD ಸ್ಕ್ರೀನ್‌ಗಳು, ಭಾರತದ ಮೊದಲ ಡಾಲ್ಬಿ ವಿಷನ್ ಮತ್ತು ಅಟ್ಮಾಸ್‌ನೊಂದಿಗೆ 16 ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, ಡಿಜಿಟಲ್ ವೀಡಿಯೊ ರೆಕಾರ್ಡಿಂಗ್‌ನೊಂದಿಗೆ 540-ಡಿಗ್ರಿ ಕ್ಯಾಮೆರಾ, ಡೈನಾಮಿಕ್ ದೃಶ್ಯೀಕರಣದೊಂದಿಗೆ ADAS ಲೆವೆಲ್ 2, ಫ್ರೇಮ್‌ಲೆಸ್ ಎಲೆಕ್ಟ್ರೋಕ್ರೋಮಿಕ್ IRVM ಮತ್ತು ಮೆಮೊರಿ ORVM ಜೊತೆಗೆ ರಿವರ್ಸ್‌ಗಾಗಿ ಆಟೋ ಟಿಲ್ಟ್, ಅಪ್ರೋಚ್ ಅನ್‌ಲಾಕ್ ಮತ್ತು ವಾಕ್ ಅವೇ ಲಾಕ್ ಒದಗಿಸಲಾಗಿದೆ.

ಪ್ರತಿಯೊಂದು ಚಲನೆಯಲ್ಲೂ ಸುಗಮ: ಕ್ರಾಂತಿಕಾರಿ DAVINCI ಡ್ಯಾಂಪಿಂಗ್ ತಂತ್ರಜ್ಞಾನದ ಜಾಗತಿಕ ಚೊಚ್ಚಲವಾಗಿ ಪರಿಚಯಿಸಲಾದ ಮುಂಭಾಗದ ಮ್ಯಾಕ್‌ಫರ್ಸನ್ ಸ್ಟ್ರಟ್ ಮತ್ತು ಮಲ್ಟಿ - ಲಿಂಕ್ ಹಿಂಭಾಗದ ಇಂಡಿಪೆಂಡೆಂಟ್ ಸಸ್ಪೆನ್ಷನ್ ಜೊತೆಗೆ ಫ್ರೀಕ್ವೆನ್ಸಿ ಸೆಲೆಕ್ಟಿವ್ ಡ್ಯಾಂಪಿಂಗ್ ಮತ್ತು ಸ್ಟೆಬಿಲೈಸರ್ ಬಾರ್ ಅತ್ಯುತ್ತಮ ಸವಾರಿ ಮತ್ತು ನಿರ್ವಹಣೆಯನ್ನು ನೀಡುತ್ತದೆ ಎಂದು ಮಹೀಂದ್ರಾ ತಿಳಿಸಿದೆ.
ಅತ್ಯುತ್ತಮ ಐಷಾರಾಮಿ ಅನುಭವ: 4 - ವೇ ಬಾಸ್ ಮೋಡ್‌ನೊಂದಿಗೆ 6 - ವೇ ಪವರ್ಡ್ ಕೋ - ಡ್ರೈವರ್ ಸೀಟ್, ಮುಂಭಾಗದ ಸೀಟ್ ಮತ್ತು ಹಿಂಭಾಗದ ವೆಂಟಿಲೇಟೆಡ್ ಸೀಟ್‌ಗಳು, BYOD, ಫಸ್ಟ್- ಇನ್ -ಸೆಗ್ಮೆಂಟ್ ಪ್ಲಶ್ ಪ್ಯಾಡ್‌ಗಳೊಂದಿಗೆ ಹೈ ಡೆನ್ಸಿಟಿ ಸೀಟ್ ಫೋಮ್ ಕಾರಿನೊಳಗೆ ಪ್ರಯಾಣಿಕರಿಗೆ ವಿಮಾನದಂತಹ ಸೌಕರ್ಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅಧಿಕೃತ SUV: ಪ್ರಸ್ತುತ ಭಾರತದಲ್ಲಿ ಕೇವಲ ಎಸ್‌ಯುವಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಮಹೀಂದ್ರಾ, ತನ್ನ ಸೆಗ್ಮೆಂಟ್‌ನಲ್ಲಿಯೇ ಅತ್ಯುತ್ತಮ 2L mStallion TGDi ಪೆಟ್ರೋಲ್ ಎಂಜಿನ್ ಮತ್ತು 2.2L mHawk ಟರ್ಬೊ - ಡೀಸೆಲ್ ಎಂಜಿನ್ ಆಯ್ಕೆಗಳು, ಡೀಸೆಲ್‌ನಲ್ಲಿ ಮೊದಲ - ಸೆಗ್ಮೆಂಟ್ ಆಲ್ - ವೀಲ್ ಡ್ರೈವ್ (AWD) ಸಿಸ್ಟಮ್ ನೀಡುತ್ತಿರುವುದು ವಿಶೇಷ.
ಸುಧಾರಿತ ಸುರಕ್ಷತೆ ಮತ್ತು ಪರ್ಫಾಮೆನ್ಸ್: ಡೈನಾಮಿಕ್ ದೃಶ್ಯೀಕರಣದೊಂದಿಗೆ ಲೆವೆಲ್ 2 ADAS, 540 - ಡಿಗ್ರಿ ಸರೌಂಡ್ ಕ್ಯಾಮೆರಾ, 120 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು (75 ಸ್ಟ್ಯಾಂಡರ್ಡ್) ಮತ್ತು AWD ಆಯ್ಕೆಯೊಂದಿಗೆ ವಿಭಾಗದಲ್ಲಿ ಅತ್ಯುತ್ತಮ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ನೀಡಲಾಗಿದೆ. ಒಟ್ಟಾರೆ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಜನವರಿ 14, 2026 ರಿಂದ ಹಂತ ಹಂತದ ವಿತರಣೆಗಳು ಪ್ರಾರಂಭವಾಗಲಿವೆ.


Click it and Unblock the Notifications








