Mahindra: ದೈತ್ಯ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜು: ಬೆಲೆಯೆಷ್ಟು, ವಿಶೇಷತೆಗಳೇನು?
ಭಾರತದಲ್ಲಿ ಎಸ್‌ಯುವಿ ಕ್ರೇಜ್ ಹೆಚ್ಚಿಸಿದ್ದ ಸ್ಕಾರ್ಪಿಯೋ ತನ್ನ ರಗಡ್ ಲುಕ್‌ನೊಂದಿಗೆ ಹಿಂದೆಂದೂ ಕಾಣದ ಅಭಿಮಾನಿಗಳೊಂದಿಗೆ ಎಸ್‌ಯುವಿ ಮಾರುಕಟ್ಟೆಯನ್ನು ಶೇಕ್ ಮಾಡಿತ್ತು. ಎಸ್‌ಯುವಿ ಮಾರುಕಟ್ಟೆ ಬೇಡಿಕೆ ಪಡೆದುಕೊಳ್ಳುತ್ತಿದ್ದಂತೆ ಬಹುತೇಕ ಎಲ್ಲಾ ಬ್ರಾಂಡ್‌ಗಳು ಎಸ್‌ಯುವಿಗಳನ್ನು ಪರಿಚಯಿಸಲು ಮುಂದಾದವು. ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಮಹೀಂದ್ರಾ ಕೂಡ ತನ್ನ ಹೊಸ ಪೀಳಿಗೆಯ ಸ್ಕಾರ್ಪಿಯೋ-ಎನ್ (Mahindra Scorpio-N) ಎಸ್‌ಯುವಿಯನ್ನು ಮೊದಲ ಬಾರಿಗೆ 2022 ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಈಗ ಇದೇ ಎಸ್‌ಯುವಿಗೆ ಫೇಸ್‌ಲಿಫ್ಟ್ ನೀಡಲು ಕಂಪನಿ ಮುಂದಾಗಿದೆ. ಎಲ್ಲವು ಅಂದುಕೊಂಡಂತಾದರೆ 2026 ಏಪ್ರಿಲ್‌ನಲ್ಲಿ ಹೊಸ ಅಪ್‌ಡೇಟೆಡ್ ಸ್ಕಾರ್ಪಿಯೋ-ಎನ್ ಬಿಡುಗಡೆಯಾಗಲಿದೆ.
ಈಗಾಗಲೇ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ ಮಾಡಲ್ ಅನ್ನು ಭಾರತೀಯ ರಸ್ತೆಗಳಲ್ಲಿ ಮರೆಮಾಚಿ ಟೆಸ್ಟ್ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಸಿರುವ ಮುಂಬರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್‌ನ ನಿರೀಕ್ಷಿತ ಡಿಸೈನ್, ಫೀಚರ್ಸ್ ಮತ್ತು ಎಂಜಿನ್ ಬಗ್ಗೆ ನಮಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ನಿರೀಕ್ಷಿತ ಎಂಜಿನ್: 2026ರ ಮಹೀಂದ್ರಾ ಸ್ಕಾರ್ಪಿಯೊ-ಎನ್ ಫೇಸ್‌ಲಿಫ್ಟ್ ಕಾರಿನ ಎಂಜಿನ್ ಯಾವುದೇ ಬದಲಾವಣೆಗೆ ಒಳಗಾಗುವುದಿಲ್ಲ ಎಂದು ತಿಳಿದುಬಂದಿದೆ. ಈಗ ಮಾರಾಟದಲ್ಲಿರುವ ಹಳೆಯ ಮಹೀಂದ್ರಾ ಸ್ಕಾರ್ಪಿಯೊ-ಎನ್ ಪ್ರಸ್ತುತ 2.0-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನ ಆಯ್ಕೆಗಳೊಂದಿಗೆ ಬರುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಮುಂದುವರೆಸಲಾಗುವುದು.
ನಿರೀಕ್ಷಿತ ಡಿಸೈನ್: ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ ಮಾಡಲ್ ಅನ್ನು ಟೆಸ್ಟಿಂಗ್ ಮಾಡುವಾಗ ಕಾಣಿಸಿಕೊಂಡಿದ್ದು, ಡಿಸೈನ್ ಬಗ್ಗೆ ಹಲವಾರು ಪ್ರಮುಖ ವಿವರಗಳು ಬಹಿರಂಗವಾಗಿವೆ. ಮುಂಭಾಗದಲ್ಲಿ, ಇದು ಡಬಲ್-ಬ್ಯಾರೆಲ್ ಎಲ್‌ಇಡಿ ಹೆಡ್‌ಲೈಟ್‌ಗಳ ಸೆಟ್, ಅದೇ ಕ್ರೋಮ್ ಸರೌಂಡ್ ಫಾಗ್ ಲ್ಯಾಂಪ್‌ಗಳು ಮತ್ತು ಗ್ರಿಲ್ ಅನ್ನು ಹೊಂದಿದೆ. ಒಟ್ಟಾರೆ ಮುಂಭಾಗದ ಲುಕ್ ತುಂಬಾ ಸ್ಪೋರ್ಟಿ ಹಾಗೂ ರಗಡ್ ಆಗಿ ಕಾಣುತ್ತದೆ.

ಉಳಿದಂತೆ ಮುಂಭಾಗದಲ್ಲಿ ರೀ-ಡಿಸೈನ್ ಮಾಡಲಾದ ಗ್ರಿಲ್, ಮುಂಭಾಗ ಮತ್ತು ಹಿಂಭಾಗದಲ್ಲಿ ರೀ-ಡಿಸೈನ್ ಮಾಡಲಾದ ಬಂಪರ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಎಸ್‌ಯುವಿಯ ಹಿಂಭಾಗವು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಮಹೀಂದ್ರಾ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್ ಹೊಸ ಟೈಲ್‌ಲೈಟ್ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ.
ನಿರೀಕ್ಷಿತ ಫೀಚರ್ಸ್: 2026ರ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ ಕ್ಯಾಬಿನ್ ಒಳಗೆ ಹಲವಾರು ಬದಲಾವಣೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈಗಿರುವ 8-ಇಂಚಿನ ಸ್ಕ್ರೀನ್ ಬದಲಾಯಿಸಿ 12.3-ಇಂಚಿನ ಸ್ಕ್ರೀನ್ ನೀಡಬಹುದು. ದೊಡ್ಡ ಮಲ್ಟಿ ಕಲರ್-ಇನ್ಫೋಟೈನ್ಮೆಂಟ್ ಸ್ಕ್ರೀನ್ ಹೊಂದಿರುವ ಅನಲಾಗ್ ಡಯಲ್‌ಗಳನ್ನು ಸಹ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಿಂದ ಬದಲಾಯಿಸಲಾಯಿಸಬಹುದು (10.25-ಇಂಚಿನ ಸ್ಕ್ರೀನ್).

ಮುಂಬರುವ 2026ರ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟುಗಳು, ಫುಲ್ಲಿ - ಡಿಜಿಟಲ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೆಮೊರಿ ಕಾರ್ಯದೊಂದಿಗೆ ಪವರ್ಡ್ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟುಗಳನ್ನು ಒಳಗೊಂಡಿರಲಿದೆ. ಹಾಗೆಯೇ ಸ್ಕಾರ್ಪಿಯೊ-ಎನ್ ಡಾಲ್ಬಿ ಅಟ್ಮಾಸ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಒಳಗೊಂಡಿರುವ ನಿರೀಕ್ಷೆಯಿದೆ.
ಜೊತೆಗೆ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಸೆಟಪ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಇದು ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್, ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ನಂತಹ ಫೀಚರ್ಸ್ ನೀಡುವುದನ್ನು ಮುಂದುವರಿಸಲಿದೆ.
ಉತ್ಪಾದನೆಗೆ ಸಿದ್ಧವಾಗಿರುವ ಈ ಪರೀಕ್ಷಾರ್ಥ ವಾಹನವು, ಈ ವರ್ಷದ ಏಪ್ರಿಲ್ ವೇಳೆಗೆ ಮಹೀಂದ್ರಾ ನವೀಕರಿಸಿದ ಸ್ಕಾರ್ಪಿಯೋ-ಎನ್ ಅನ್ನು ಬಿಡುಗಡೆ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆಲೆಯು ಪ್ರಸ್ತುತ ಬೆಲೆಗಿಂತ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆ, ಅಂದಾಜು ರೂ. 13.49 ಲಕ್ಷದಿಂದ ರೂ. 24.34 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುಬಹುದು.


Click it and Unblock the Notifications








