Acer Faster Awards 2026: ಹತ್ತಾರು ಪ್ರಶಸ್ತಿ ಘೋಷಣೆ.. ವರ್ಷದ ಕಾರು & ಬೈಕ್ ಯಾವುದು ಗೊತ್ತಾ?

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಕೊಡಲಾಗುವ 5ನೇ ಆವೃತ್ತಿ ಫಾಸ್ಟರ್ ಪ್ರಶಸ್ತಿ (Acer Faster Awards - 2026) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಎಸ್‌ಯುವಿ ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ (TVS Apache RTX) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಸುಜುಕಿ ಆಕ್ಸೆಸ್ (Suzuki Access) ವರ್ಷದ ಸ್ಕೂಟರ್ ಆಗಿ ಹೊರಹೊಮ್ಮಿದೆ.

Mahindra XEV 9E TVS Apache RTX And Wins Suzuki Access Acer Faster Awards 2026 Details

2026ರ ಏಸರ್ ಫಾಸ್ಟರ್ ಪ್ರಶಸ್ತಿ ಪಟ್ಟಿ ಇಲ್ಲಿದೆ:

ವರ್ಷದ ಆಟೋ ಅಭಿಯಾನ ಪ್ರಶಸ್ತಿ (Auto Campaign of the Year): ಸ್ಕೋಡಾ ಇಂಡಿಯಾ - ಆಕ್ಟೇವಿಯಾ ಆರ್‌ಎಸ್ (ಚಾಣಕ್ಯ ಕ್ಯಾಂಪೈನ್).

ಸಿಎಸ್ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಇನಿಶಿಯೇಟಿವ್ಸ್ ಪ್ರಶಸ್ತಿ (CSR Initiatives Award): ಹೋಂಡಾ ಇಂಡಿಯಾ ಫೌಂಡೇಶನ್.

ಗೌರವ ಪ್ರಶಸ್ತಿ (Award of Honor): ಸಂಜಯ್ 'ಹಾರ್ಡಿ' ಶರ್ಮಾ (ಮರಣೋತ್ತರ).

ವರ್ಷದ ಮೋಟಾರ್‌ಸ್ಪೋರ್ಟ್ ವ್ಯಕ್ತಿ ಪ್ರಶಸ್ತಿ (Motorsports Personality of the Year): ಕುಶ್ ಮೈನಿ.

ವರ್ಷದ ಪಿಆರ್ (ಸಾರ್ವಜನಿಕ ಸಂಪರ್ಕ) ವ್ಯಕ್ತಿ (PR Personality of the Year): ಶ್ರೀನಿವಾಸ್ ಕೃಷ್ಣನ್, ಎಸ್‌ವಿಪಿ, ಅಡ್‌ಫ್ಯಾಕ್ಟರ್ಸ್ ಪಿಆರ್.

ವರ್ಷದ ಸಂವಹನ ವ್ಯಕ್ತಿ (Communications Personality of the Year): ಆನಂದ್ ವಿ, ವಿನ್‌ಫಾಸ್ಟ್ ಇಂಡಿಯಾ.

ವರ್ಷದ ಪಿಆರ್ (ಸಾರ್ವಜನಿಕ ಸಂಪರ್ಕ) ತಂಡ (PR Team of the Year): ಪಿಆರ್ ಪಂಡಿತ್ ಹವಾಸ್ ರೆಡ್ - ಆಟೋ ವಿಭಾಗ.

ವರ್ಷದ ಸಂವಹನ ತಂಡ (Communications Team of the Year): ವಿನ್‌ಫಾಸ್ಟ್ ಇಂಡಿಯಾ.

ವರ್ಷದ ಉದ್ಯಮ ವ್ಯಕ್ತಿ ಪ್ರಶಸ್ತಿ (Industry Personality of the Year): ತರುಣ್ ಗರ್ಗ್, ಎಂಡಿ ಮತ್ತು ಸಿಇಒ, ಹುಂಡೈ ಮೋಟಾರ್ ಇಂಡಿಯಾ.

ವರ್ಷದ ತಂತ್ರಜ್ಞಾನ ಪ್ರಶಸ್ತಿ (Technology of the Year): ಮಹೀಂದ್ರಾ ಇಂಗ್ಲೋ (INGLO) ಪ್ಲಾಟ್‌ಫಾರ್ಮ್.

ವರ್ಷದ ಹೊಸ ಸ್ಪರ್ಧಿ (New Entrant of the Year): ವಿನ್‌ಫಾಸ್ಟ್ ಇಂಡಿಯಾ.

ವರ್ಷದ ನವೀಕರಣ ಪ್ರಶಸ್ತಿ (2 ವೀಲರ್ - ದ್ವಿಚಕ್ರ ವಾಹನ) Update of the Year (Two-Wheeler): ಹಾರ್ಲೆ-ಡೇವಿಡ್ಸನ್ ಎಕ್ಸ್440 ಟಿ.

ವರ್ಷದ ನವೀಕರಣ (4 ವೀಲರ್ - ನಾಲ್ಕು ಚಕ್ರದ ವಾಹನ) Update of the Year (Four-Wheeler): ಕಿಯಾ ಕ್ಯಾರೆನ್ಸ್ ಕ್ಲಾವಿಸ್.

ವರ್ಷದ ವಿನ್ಯಾಸ ಪ್ರಶಸ್ತಿ (Design of the Year): ಟಾಟಾ ಸಿಯೆರಾ.

ವರ್ಷದ ಎಲೆಕ್ಟ್ರಿಕ್ 2 ವೀಲರ್ (Electric Two-Wheeler of the Year): ಅಲ್ಟ್ರಾವೈಲೆಟ್ ಎಕ್ಸ್47.

ವರ್ಷದ ಎಲೆಕ್ಟ್ರಿಕ್ ಕಾರು (Electric Car of the Year): ಮಹೀಂದ್ರಾ ಎಕ್ಸ್ಇವಿ 9ಇ.

ವರ್ಷದ ಪ್ರೀಮಿಯಂ ಮೋಟಾರ್‌ಸೈಕಲ್‌ (Premium Motorcycle of the Year): ಡುಕಾಟಿ ಮಲ್ಟಿಸ್ಟ್ರಾಡಾ ವಿ4.

ವರ್ಷದ ಪ್ರೀಮಿಯಂ ಕಾರು (Premium Car of the Year): ಬಿಎಂಡಬ್ಲ್ಯೂ ಎಕ್ಸ್3.

ಟೈಮ್‌ಲೆಸ್ ಐಕಾನ್ 2 ವೀಲರ್ (Timeless Icon - Two-Wheeler): ಹೋಂಡಾ ಆಕ್ಟಿವಾ.

ಟೈಮ್‌ಲೆಸ್ ಐಕಾನ್ 4 ವೀಲರ್ (Timeless Icon - Four-Wheeler): ಟೊಯೊಟಾ ಇನ್ನೋವಾ.

ವೀಕ್ಷಕರ ಆಯ್ಕೆ ಪ್ರಶಸ್ತಿ (Viewers' Choice Award): ಮಾರುತಿ ಸುಜುಕಿ ವಿಕ್ಟೋರಿಸ್.

ವರ್ಷದ ಸ್ಕೂಟರ್ (Scooter of the Year): ಸುಜುಕಿ ಆಕ್ಸೆಸ್.

ವರ್ಷದ ಮೋಟಾರ್‌ಸೈಕಲ್‌ (Motorcycle of the Year): ಟಿವಿಎಸ್ ಅಪಾಚೆ ಆರ್‌ಟಿಎಕ್ಸ್.

ವರ್ಷದ ಕಾರು (Car of the Year): ಮಹೀಂದ್ರಾ ಎಕ್ಸ್ಇವಿ 9ಇ.

Mahindra XEV 9E TVS Apache RTX And Wins Suzuki Access Acer Faster Awards 2026 Details

ಜ್ಯೂರಿ ಸದಸ್ಯರ ಪಟ್ಟಿ:

ಈ ಆಯ್ಕೆ ಸಮಿತಿಯಲ್ಲಿ ಗಾಡಿವಾಡಿಯ ಗೌರವ್ ಯಾದವ್, ಡ್ರೈವ್‌ಸ್ಪಾರ್ಕ್‌ನ ಪ್ರಮೀತ್ ಘೋಷ್, ಪೈಲಟ್‌ ಆನ್‌ವೀಲ್ಸ್‌ನ ರೋಷನ್ ಜೋಸೆಫ್, ಕಾರ್‌ಬ್ಲಾಗ್‌ಇಂಡಿಯಾದ ರೋಹಿತ್ ಖುರಾನಾ, ಮೋಟರಾಯ್ಡ್‌ನ ಅಮಿತ್ ಛಂಗಾನಿ ಹಾಗೂ ಗೇರ್‌ಫ್ಲಿಕ್‌ನ ನರೇನ್ ಶರ್ಮಾ ಇದ್ದಾರೆ. ಪ್ರತಿಯೊಂದು ವಾಹನವನ್ನು ಕಡ್ಡಾಯವಾಗಿ ಪರಿಶೀಲಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಇದೇ ಕಾರ್ಯಕ್ರಮಕ್ಕೆ 'ಏಸರ್ ಇಂಡಿಯಾ' ಟೈಟಲ್ ಸ್ಪಾನ್ಸರ್ ಮಾಡಿದ್ದು, 'ಸ್ಪಾರ್ಕ್ ಮಿಂಡಾ ಲಿಮಿಟೆಡ್' ಅಸೋಸಿಯೇಟ್ ಸ್ಪಾನ್ಸರ್ ಆಗಿದೆ.

Mahindra XEV 9E TVS Apache RTX And Wins Suzuki Access Acer Faster Awards 2026 Details

ಫಾಸ್ಟರ್ ಕುರಿತ ಸಂಕ್ಷಿಪ್ತ ವಿವರ:

ಇದು ಆಟೋಮೋಟಿವ್ ಮಾಧ್ಯಮಗಳ ಸಂಘಟನೆಯಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ 250 ಮಿಲಿಯನ್‌ಗಿಂತಲೂ ಹೆಚ್ಚಿನ ಮಾಸಿಕ ಡಿಜಿಟಲ್ ಓದುಗರನ್ನು ಯಶಸ್ವಿಯಾಗಿ ತಲುಪುತ್ತಿದೆ. ವಿಶೇಷವಾಗಿ ನಮ್ಮ 'ಡ್ರೈವ್‌ಸ್ಪಾರ್ಕ್' ಪೋರ್ಟಲ್ ಇದೇ ಫಾಸ್ಟರ್ ಒಕ್ಕೂಟದ ಭಾಗವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

More from DriveSpark

Article Published On: Thursday, February 26, 2026, 14:52 [IST]
English summary
Mahindra xev 9e tvs apache rtx and wins suzuki access faster awards 2026 details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+