ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಬುಕಿಂಗ್ಸ್ ಗಳಿಸುತ್ತಿರುವ ಮಹೀಂದ್ರಾ XEV 9S ವಿಶೇಷತೆಗಳು
ಮಹೀಂದ್ರಾ ಕಂಪನಿಯು ಇತ್ತೀಚೆಗೆ XEV 9S ಎಂಬ ಎಲೆಕ್ಟ್ರಿಕ್ 7-ಸೀಟರ್ SUV ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಸಾಮೂಹಿಕ-ಮಾರುಕಟ್ಟೆ ಎಲೆಕ್ಟ್ರಿಕ್ ಮೂರು-ಸಾಲು SUV ಆಗಿದೆ. ಮೂರು ಸಾಲುಗಳಲ್ಲಿ ಏಳು ಪ್ರಯಾಣಿಕರಿಗೆ ಕೂರಲು ಆಸನಗಳನ್ನು ನೀಡುತ್ತದೆ. ದೊಡ್ಡ ಕುಟುಂಬಕ್ಕೆ ಸಾಕಷ್ಟು ಸ್ಥಳಾವಕಾಶದೊಂದಿಗೆ ಪೂರ್ಣ-ಗಾತ್ರದ SUV ಅನುಭವವನ್ನು ಹುಡುಕುತ್ತಿರುವ ಖರೀದಿದಾರರನ್ನು ಇದು ಆಕರ್ಷಿಸುತ್ತದೆ. ಉತ್ತಮ ರಸ್ತೆ ಉಪಸ್ಥಿತಿ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಅನುಭವ ನೀಡುತ್ತದೆ. ಬೆಲೆಗಳು ರೂ. 19.95 ಲಕ್ಷದಿಂದ ಪ್ರಾರಂಭವಾಗುತ್ತವೆ. ಇದರ ಡಿಸೈನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಬೈ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಮುಂಭಾಗದ ಕ್ಲೋಸ್ಡ್ ಗ್ರಿಲ್ ಮೇಲೆ ಮಹೀಂದ್ರಾದ ಇವಿ ಲೋಗೋ ನೀಡಲಾಗಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ, ಡ್ಯಾಶ್‌ಬೋರ್ಡ್ ಟ್ರಿಪಲ್-ಸ್ಕ್ರೀನ್ ವಿನ್ಯಾಸವನ್ನು ಒಳಗೊಂಡಿದೆ. ಈ ಸೆಟಪ್ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮೀಸಲಾದ ಪ್ರಯಾಣಿಕರ ಸ್ಕ್ರೀನ್ ಒಳಗೊಂಡಿದೆ. ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಡ್ರೈವರ್ ಮತ್ತು ಕೋ-ಪ್ಯಾಸಿಂಜರ್ ಸೀಟ್‌ಗಳನ್ನು ನೀಡಲಾಗಿದೆ. ಮುಂಭಾಗ ಮತ್ತು ಎರಡನೇ ಸಾಲಿನ ಸೀಟ್‌ಗಳು ಎರಡೂ ವೆಂಟಿಲೇಟೆಡ್ ಸೀಟ್‌ಗಳಾಗಿವೆ.
ಸ್ಟೀರಿಂಗ್ ವೀಲ್ ಫ್ಲಾಟ್-ಬಾಟಮ್ ವಿನ್ಯಾಸವನ್ನು ಹೊಂದಿದ್ದು, ಕಂಟ್ರೋಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ರೀಜೆನ್ ಬ್ರೇಕಿಂಗ್‌ಗಾಗಿ ಬಟನ್‌ಗಳೂ ಇವೆ. "ಬಾಸ್ ಮೋಡ್" ಬಟನ್ ಹಿಂಭಾಗದ ಪ್ರಯಾಣಿಕರಿಗೆ ಹೆಚ್ಚಿನ ಲೆಗ್‌ರೂಮ್‌ಗಾಗಿ ಮುಂಭಾಗದ ಪ್ರಯಾಣಿಕರ ಆಸನವನ್ನು ಹೊಂದಿಸಲು ಅನುಮತಿಸುತ್ತದೆ. ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು ಮತ್ತು ಅನುಕೂಲಕರ 12V ಸಾಕೆಟ್‌ಗಳು ಸಹ ಲಭ್ಯವಿದೆ. ಆಡಿಯೊಗಾಗಿ, 16-ಸ್ಪೀಕರ್ ಹರ್ಮನ್ ಕಾರ್ಡನ್ ವಾಯಿಸ್ ಸಿಸ್ಟಮ್ ಹೊಂದಿದೆ.

ಕಾರಿನಲ್ಲಿ ಎರಡನೇ ಸಾಲು ಐಷಾರಾಮಿಯಾಗಿದ್ದು, 2ನೇ ಸಾಲಿನ ಕಿಟಕಿಗಳಿಗೆ ಸನ್‌ಶೇಡ್, ಅಕೌಸ್ಟಿಕ್ "ಲ್ಯಾಮಿನೇಟೆಡ್" ಗ್ಲಾಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್ಡ್ ಬಾಸ್ ಮೋಡ್, ವೆಂಟಿಲೇಟೆಡ್ 2 ನೇ ಸಾಲಿನ ಸೀಟ್‌ಗಳು, ರಿಕ್ಲೈನ್ ಮತ್ತು ಸ್ಲೈಡಿಂಗ್ ಹೊಂದಾಣಿಕೆ, 3 ಮೋಡ್‌ಗಳೊಂದಿಗೆ ಲೈವ್ ಯುವರ್‌ಮೂಡ್ ನಂತಹ ಆಧುನಿಕ ಫೀಚರ್ಸ್ ನೀಡಲಾಗಿದೆ.
XEV 9S ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಸಜ್ಜುಗೊಂಡಿದೆ, 59kWh ಮತ್ತು ದೊಡ್ಡ 79kWh ಪ್ಯಾಕ್, ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಅಂದಾಜು 521 ಕಿ.ಮೀ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಇದು ನಗರ ಚಾಲನೆ ಮತ್ತು ಹೆದ್ದಾರಿ ಎರಡಕ್ಕೂ ಸೂಕ್ತವಾದ ಸುಗಮ ಸವಾರಿಗಾಗಿ ಆಪ್ಟಿಮೈಸ್ ಮಾಡಿದ ಸಿಂಗಲ್ ಸ್ಪೀಡ್ ಎಲೆಕ್ಟ್ರಿಕ್ ಮೋಟರ್ ಒಳಗೊಂಡಿದೆ.

ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, 5 ರಾಡಾರ್‌ಗಳು ಮತ್ತು 1 ವಿಷನ್ ಕ್ಯಾಮೆರಾದೊಂದಿಗೆ L2+ ADAS, ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ DOMS (ಐಡೆಂಟಿಟಿ), Secure360 Pro - ಹೊಸ ಲೈವ್ ಸಂವಹನ ವೈಶಿಷ್ಟ್ಯದೊಂದಿಗೆ ಲೈವ್ ವೀಕ್ಷಣೆ ಮತ್ತು ರೆಕಾರ್ಡಿಂಗ್ ಸೇರಿದಂತೆ 140ಕ್ಕೂ ಹೆಚ್ಚು ಫೀಚರ್ಸ್‌ನೊಂದಿಗೆ ಡಿಜಿಟಲ್ ಕೀ, NFC, ಚಾರ್ಜ್ ಶೆಡ್ಯೂಲರ್ ನೀಡಲಾಗಿದೆ.
ಈ ಕಾರು ತುಂಬಾ ಪವರ್‌ಫುಲ್ ಆಗಿದ್ದು, 210 kW ಪವರ್ ಹಾಗೂ 380 Nm ಟಾರ್ಕ್ ಹೊರಹಾಕುತ್ತದೆ. ಇದರ ವರ್ಗದಲ್ಲಿಯೇ ವೇಗವಾದ 7-ಆಸನಗಳ SUV (7.0 ಸೆಕೆಂಡುಗಳಲ್ಲಿ 0-100 ಕಿಮೀ/ಗಂ) ಆಗಿದೆ. ಇದರ ಟಾಪ್ ಸ್ಪೀಡ್ 202 ಕಿ.ಮೀ ಇದೆ. ಕಾರಿನ ಉದ್ದಳತೆ ವಿಷಯಕ್ಕೆ ಬಂದರೆ ಕಮಾಂಡ್ ಸೀಟ್ ಸ್ಥಾನದೊಂದಿಗೆ 205 mm (222 mm ಬ್ಯಾಟರಿ ಗ್ರೌಂಡ್ ಕ್ಲಿಯರೆನ್ಸ್) ನ ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.


Click it and Unblock the Notifications








