Mahindra: ಸೈಲೆಂಟ್ ಆಗಿ ಬಿಡುಗಡೆಯಾಗಿದೆ ಮಹೀಂದ್ರಾ XUV 3XO EV: ವಿಶೇಷತೆಗಳೇನು?
ಜನಪ್ರಿಯ ಕಾರು ತಯಾರಕರಾದ ಮಹೀಂದ್ರಾ, ನಿನ್ನೆ (6 ಜನವರಿ) ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' (Mahindra XUV 3XO EV) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಏಪ್ರಿಲ್ 2024 ರಲ್ಲಿ ಬಿಡುಗಡೆಯಾದ ಇಂಧನ ಚಾಲಿತ XUV 3XO ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ನಗರ ವಿನ್ಯಾಸ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸ್ಪೋರ್ಟಿ ಡಿಸೈನ್ ಜೊತೆಗೆ ಪ್ರಾಯೋಗಿಕತೆಯನ್ನು ಬಯಸುವ ಗ್ರಾಹಕರಿಗಾಗಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಹೀಂದ್ರಾ ತಿಳಿಸಿದೆ.
ಈ ಕಾರು ಎರಡು ವೇರಿಯಂಟ್‌ಗಳನ್ನು ಹೊಂದಿದ್ದು, AX5 ಬೆಲೆ ರೂ 13.89 ಲಕ್ಷ (ಎಕ್ಸ್ ಶೊರೂಂ) ವಿದ್ದರೆ, AX7L ರೂ. 14.96 ಲಕ್ಷ (ಎಕ್ಸ್ ಶೊರೂಂ) ಇದೆ. ಹೊಸ XUV 3XO EV ಕಾರಿನಲ್ಲಿ ಪವರ್‌ಫುಲ್ ಮೋಟಾರ್ ಅಳವಡಿಸಲಾಗಿದ್ದು, 110 kW ಪವರ್ ಹಾಗೂ 310 Nm ಟಾರ್ಕ್ ಹೊರಹಾಕುತ್ತದೆ. ಕೇವಲ 8.3 ಸೆಕೆಂಡುಗಳಲ್ಲಿ 100ಕಿ.ಮೀ ವೇಗ ತಲುಪಬಲ್ಲದು, ತನ್ನ ವಿಭಾಗದಲ್ಲಿಯೇ ವೇಗದ ಎಲೆಕ್ಟ್ರಿಕ್ ಕಾರಾಗಿದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' ವಿಷಯಕ್ಕೆ ಬಂದರೆ ಕಾರಿನಲ್ಲಿ 39.4 kWh ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಇದನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿ 285ಕಿ.ಮೀ ಓಡಿಸಬಹುದು. ಸೂಪರ್‌ಫಾಸ್ಟ್ ಚಾರ್ಜಿಂಗ್ (50 kW DC ಚಾರ್ಜರ್) ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು. ಐಚ್ಛಿಕ 7.2 kW ವಾಲ್ ಚಾರ್ಜರ್ ರೂ. 50,000 ಹೆಚ್ಚುವರಿ ವೆಚ್ಚದಲ್ಲಿ ಖರೀದಿಸಬಹುದು ಎಂದು ಮಹೀಂದ್ರಾ ತಿಳಿಸಿದೆ.
ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' ಸುರಕ್ಷತೆ ವಿಷಯಕ್ಕೆ ಬಂದರೆ, ರಿಯರ್ ವ್ಯೂವ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 6 ಏರ್‌ಬ್ಯಾಗ್‌ಗಳು, ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (TPMS), ಕ್ರೂಸ್ ಕಂಟ್ರೋಲ್ ಸ್ಟಾಂಡರ್ಡ್ (AX5 ವೇರಿಯೆಂಟ್‌ನಲ್ಲಿ ಸಿಗಲಿವೆ) ಆಗಿ ಸಿಗಲಿವೆ.

ಟಾಪ್ ವೇರಿಯೆಂಟ್ ಆದ AX7L ನಲ್ಲಿ ಹೈ-ಬೀಮ್ ಅಸಿಸ್ಟ್, ಸ್ಟಾಪ್ & ಗೋ ಜೊತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪೈಲಟ್ ಅಸಿಸ್ಟ್, 360-ಡಿಗ್ರಿ ಕ್ಯಾಮರಾ, ಪಾರ್ಕಿಂಗ್ ಅಸಿಸ್ಟ್ ಸಿಸ್ಟಮ್, ಲೆವಲ್-2 ADAS, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಡಿಪಾರ್ಚರ್ ಪ್ರೊಟೆಕ್ಷನ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಆಟೋ ಎಮರ್ಜನ್ಸಿ ಬ್ರೇಕಿಂಗ್, ಆಟೋ ಎಮರ್ಜನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಸೇಫ್ಟಿ ಫೀಚರ್ಸ ಸಿಗಲಿವೆ.
ಫೀಚರ್ಸ್ ವಿಷಯಕ್ಕೆ ಬಂದರೆ ಟ್ವಿನ್ HD 10.25 ಇಂಚಿನ ಇನ್ಫೋಟೈನ್‌ಮೆಂಟ್ ಮತ್ತು 10.25ಇಂಚಿನ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6 ಸ್ಪೀಕರ್‌ಗಳು + ಸ್ಟೀರಿಂಗ್ ಆಡಿಯೊ ಕಂಟ್ರೋಲ್, ಲೆಥೆರೆಟ್ ಸ್ಟೀರಿಂಗ್, ಸಿಂಗಲ್ ಪೇನ್ ಸನ್‌ರೂಫ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್ ವೈರ್‌ಲೆಸ್ ಚಾರ್ಜರ್, ಮುಂಭಾಗ ಮತ್ತು ಹಿಂಭಾಗದ USB ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಆಟೋ ಹೆಡ್‌ಲ್ಯಾಂಪ್, ಆಟೋ ರೈನ್ ಸೆನ್ಸಿಂಗ್ ವೈಪರ್, ಎಲೆಕ್ಟ್ರಿಕ್ ORVM, ಹಿಂಭಾಗದ ಡಿಫಾಗರ್, 60:40 ಸ್ಪ್ಲಿಟ್ ಹಿಂಭಾಗದ ಸೀಟ್, ಹಿಂಭಾಗದ AC ವೆಂಟ್‌ಗಳು, R16 ಡೈಮಂಡ್ ಕಟ್ ಅಲಾಯ್ ವೀಲ್‌ಗಳು, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED DRL, ಇನ್ಫಿನಿಟಿ LED ಟೈಲ್ ಲ್ಯಾಂಪ್, ರೂಫ್ ರೈಲ್ಸ್ ಮತ್ತು ಹಿಂಭಾಗದ ಸ್ಪಾಯ್ಲರ್ ಪಡೆದುಕೊಂಡಿದೆ.
ಏಪ್ರಿಲ್ 2024 ರಲ್ಲಿ ಬಿಡುಗಡೆಯಾದ ಇಂಧನ ಚಾಲಿತ XUV 3XO, ವಿಭಾಗ-ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದಾಗಿನಿಂದ ಇದು 1.8 ಲಕ್ಷ ಕಾರುಗಳ ಮಾರಾಟವನ್ನು ತಲುಪಿದೆ. ಇದೀಗ XUV 3XO EV ವಾಹನ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








