Mahindra: ಒಂದೇ ದಿನ 20,500 ಕೋಟಿ ಬಾಚಿಕೊಂಡ ಮಹೀಂದ್ರಾ: ಮಾರುಕಟ್ಟೆ ಶೇಕ್ ಮಾಡಿವೆ 2 ಕಾರುಗಳು!
ಪ್ರಮುಖ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ, ಇತ್ತೀಚೆಗೆ ಬಿಡುಗಡೆ ಮಾಡಿದ್ದ XEV 9S ಮತ್ತು XUV 7XO ಎಸ್‌ಯುವಿಗಳಿಗಾಗಿ ಇಂದು ಬುಕಿಂಗ್‌ಗಳನ್ನು ಪ್ರಾರಂಭಿಸಿದ್ದು, ಬರೋಬ್ಬರಿ 93,689 ಮಂದಿ ಈ ಕಾರುಗಳನ್ನು ಬುಕ್ ಮಾಡಿದ್ದಾರೆ. ಇವು ಜನವರಿ 14, 2026 ರಂದು ಮಧ್ಯಾಹ್ನ 2.00 ಗಂಟೆಯವರೆಗೆ ಹರಿದುಬಂದಿರುವ ಬುಕಿಂಗ್ಸ್ ಆಗಿವೆ. ಎರಡೂ ವಾಹನಗಳ ಬುಕಿಂಗ್ ಮೌಲ್ಯವು ರೂ. 20,500 ಕೋಟಿಗೂ ಹೆಚ್ಚು (ಎಕ್ಸ್-ಶೋರೂಂ ಬೆಲೆಯಲ್ಲಿ ಲೆಕ್ಕಹಾಕಲಾಗಿದೆ) ಎಂದು ಮಹೀಂದ್ರಾ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಹೀಂದ್ರಾ ಕಂಪನಿಯು ಭಾರತೀಯ ಕಾರು ಮಾರುಕಟ್ಟೆ ಪದೆ ಪದೇ ಮಾತನಾಡುವಂತಹ ಎಸ್‌ಯುವಿಗಳನ್ನು ನಿರ್ಮಿಸುವ ಮತ್ತು ಬಲವಾದ ಕಾರುಗಳ ಉತ್ಪಾದನೆ ಸೇರಿದಂತೆ ಸದಾ ಹೊಸತನದೊಂದಿಗೆ ಭಾರತೀಯ ಎಸ್‌ಯುವಿ ಮಾರುಕಟ್ಟೆಯ ರಾಜನಾಗಿ ಮುಂದುವರಿಯುತ್ತಿದೆ. ಗ್ರಾಹಕರ ಬೆಂಬಲವಿಲ್ಲದೆ ಬ್ರಾಂಡ್ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇಂದು ಹೊಸ ಕಾರುಗಳಿಗೆ ಹರಿದುಬಂದ ಬುಕಿಂಗ್ಸ್ ಆಗಿವೆ.

ಹೊಸ XEV 9S ಮತ್ತು XUV 7XO ನೊಂದಿಗೆ, ಗ್ರಾಹಕರಿಗೆ ಎಲೆಕ್ಟ್ರಿಕ್, ಡೀಸೆಲ್ ಮತ್ತು ಪೆಟ್ರೋಲ್ ಪವರ್‌ಟ್ರೇನ್‌ಗಳಲ್ಲಿ ಬಲವಾದ ಆಯ್ಕೆಗಳನ್ನು ನೀಡುವ ಮೂಲಕ ಮಹೀಂದ್ರಾ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇವು ಗ್ರಾಹಕರ ವಿಭಿನ್ನ ಬಳಕೆಯ ಅಗತ್ಯಗಳಿಗೆ ಅನುಗುಣವಾಗಿವೆ. ಹೊಸ XEV 9S ಡೆಲಿವರಿಗಳು ಜನವರಿ 26, 2026 ರಿಂದ ಪ್ರಾರಂಭವಾಗಲಿವೆ. ಹೊಸ XUV 7XO ಡೆಲಿವರಿಗಳು ಇಂದಿನಿಂದ ಪ್ರಾರಂಭವಾಗಿದೆ.
ಮಹೀಂದ್ರಾ XEV 9S ವಿಶೇಷತೆಗಳು
ಹೊಸ ಮಹೀಂದ್ರಾ XEV 9S ಎಲೆಕ್ಟ್ರಿಕ್ 7-ಸೀಟರ್ SUV ಆಗಿದ್ದು, ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುತ್ತದೆ. ಇದರ ಬೆಲೆಗಳು ರೂ. 19.95 ಲಕ್ಷದಿಂದ ಪ್ರಾರಂಭವಾಗುತ್ತವೆ. ಈ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲದು. 4,076 ಲೀಟರ್‌ನ ಅತಿದೊಡ್ಡ ಕ್ಯಾಬಿನ್ ಸ್ಪೇಸ್, 527 ಲೀಟರ್ ವರೆಗಿನ ಬೂಟ್ ಸ್ಪೇಸ್, 150 ಲೀಟರ್‌ನ ಅತ್ಯುತ್ತಮ ಫ್ರಂಕ್ ಸ್ಪೇಸ್ ಒದಗಿಸಲಾಗಿದೆ.

ಈ ಕಾರು ತುಂಬಾ ಪವರ್‌ಫುಲ್ ಆಗಿದ್ದು, 210 kW ಪವರ್ ಹಾಗೂ 380 Nm ಟಾರ್ಕ್ ಹೊರಹಾಕುತ್ತದೆ. ಇದರ ವರ್ಗದಲ್ಲಿಯೇ ವೇಗವಾದ 7-ಆಸನಗಳ SUV (7.0 ಸೆಕೆಂಡುಗಳಲ್ಲಿ 0-100 ಕಿಮೀ/ಗಂ) ಆಗಿದೆ. ಇದರ ಟಾಪ್ ಸ್ಪೀಡ್ 202 ಕಿ.ಮೀ ಇದೆ. ಎರಡನೇ ಸಾಲು ಐಷಾರಾಮಿಯಾಗಿದ್ದು, 2ನೇ ಸಾಲಿನಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ರಿಕ್ಲೈನ್ಮತ್ತು ಸ್ಲೈಡಿಂಗ್ ಹೊಂದಾಣಿಕೆ, ವೈರ್‌ಲೆಸ್ ಫೋನ್ ಚಾರ್ಜಿಂಗ್ ನಂತಹ ಆಧುನಿಕ ಫೀಚರ್ಸ್ ನೀಡಲಾಗಿದೆ.
ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, 5 ರಾಡಾರ್‌ಗಳು ಮತ್ತು 1 ವಿಷನ್ ಕ್ಯಾಮೆರಾದೊಂದಿಗೆ L2+ ADAS, ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ DOMS (ಐಡೆಂಟಿಟಿ), Secure360 Pro - ಹೊಸ ಲೈವ್ ಸಂವಹನ ವೈಶಿಷ್ಟ್ಯದೊಂದಿಗೆ ಲೈವ್ ವೀಕ್ಷಣೆ ಮತ್ತು ರೆಕಾರ್ಡಿಂಗ್ ಸೇರಿದಂತೆ 140ಕ್ಕೂ ಹೆಚ್ಚು ಫೀಚರ್ಸ್‌ನೊಂದಿಗೆ ಡಿಜಿಟಲ್ ಕೀ, NFC, ಚಾರ್ಜ್ ಶೆಡ್ಯೂಲರ್ ನೀಡಲಾಗಿದೆ.
ಮಹೀಂದ್ರಾ XUV 7XO ವಿಶೇಷತೆಗಳು
ಹೊಸ ಮಹೀಂದ್ರಾ XUV 7XO ಎಸ್‌ಯುವಿಯು ಬೆಲೆಗಳು ರೂ.13.66 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಈ ಕಾರಿನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ 12.3-ಇಂಚಿನ ಕೋ-ಡ್ರೈವರ್ ಎಂಟರ್‌ಟೈನ್‌ಮೆಂಟ್ ಸಿಸ್ಟಮ್‌ಗಾಗಿ 'ಟ್ರಿಪಲ್ ಸ್ಕ್ರೀನ್' ಸೆಟಪ್ ಸಹ ಇದೆ.

ಹಾಗೆಯೇ ಈ ಕಾರು 540-ಡಿಗ್ರಿ ಕ್ಯಾಮೆರಾ, ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಹಾಗೂ ವೆಂಟಿಲೇಟೆಡ್ ರೇರ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಇಎಸ್‌ಸಿ, ಲೆವೆಲ್-2 ಎಡಿಎಎಸ್ ನಂತಹ ಫೀಚರ್‌ಗಳನ್ನು ಒಳಗೊಂಡಿದೆ.
ಈ ಕಾರು 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ 200 ಪಿಎಸ್ ಪವರ್ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಇದು 185 ಪಿಎಸ್ ಪವರ್ ಮತ್ತು 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ & 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಆಯ್ಕೆ ನೀಡಲಾಗಿದೆ.


Click it and Unblock the Notifications








