Mahindra: ಹೊಸ ಮಹೀಂದ್ರಾ ಕಾರಿನ ವೇರಿಯೆಂಟ್‌ವಾರು ಫೀಚರ್ಸ್‌ಗಳಿವು.. ಬರೀ 13.66 ಲಕ್ಷ.. ದೊಡ್ಡ ಕುಟುಂಬಕ್ಕೆ ಬೆಸ್ಟ್!
ಮೊನ್ನೆಯಷ್ಟೇ ನೂತನ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ರೂ.13.66 ಲಕ್ಷದಿಂದ ರೂ.24.92 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 6/ 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. ಎಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7, ಎಎಕ್ಸ್7 ಟಿ ಮತ್ತು ಎಎಕ್ಸ್7 ಎಲ್ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ನಾವಿಲ್ಲಿ ಈ ಕಾರಿನ ಪ್ರತಿಯೊಂದು ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದಿವೆ ಎಂಬುದರ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಎಎಕ್ಸ್ (AX):
ಇದು ಆರಂಭಿಕ ಶ್ರೇಣಿ ರೂಪಾಂತರವಾಗಿದೆ. ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಕ್ಲಿಯರ್ ಲೆನ್ಸ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಟ್ರಿಪಲ್ ಸ್ಕ್ರೀನ್ ಸೆಟಪ್, 6-ಸ್ಪೀಕರ್ ಆಡಿಯೋ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 12ವಿ ಚಾರ್ಜಿಂಗ್ ಪೋರ್ಟ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಶಾರ್ಕ್-ಫಿನ್ ಆಂಟೆನಾ, ಸ್ಮಾರ್ಟ್ ಡೋರ್ ಹ್ಯಾಂಡಲ್‌ಗಳು, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, ಮೈಕ್ರೋ ಹೈಬ್ರಿಡ್ ಟೆಕ್, ಪುಶ್-ಬಟನ್ ಸ್ಟಾರ್ಟ್ ಹಾಗೂ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ.

ಎಎಕ್ಸ್3 (AX3):
ಈ ರೂಪಾಂತರವು 'ಎಎಕ್ಸ್'ನಂತೆ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ. ಹೆಚ್ಚುವರಿಯಾಗಿ ರೇರ್ ವ್ಯೂ ಕ್ಯಾಮೆರಾ, ರೇರ್ ವೈಪರ್ & ವಾಷರ್, ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್ ಆಟೋ ಫೋಲ್ಡಿಂಗ್ ಒಆರ್‌ವಿಎಂ ಮತ್ತು ರೇರ್ ಡಿಮಿಸ್ಟರ್‌ನ್ನು ಹೊಂದಿದೆ.
ಎಎಕ್ಸ್5 (AX5):
ಇದೊಂದು ಪ್ರಮುಖ ರೂಪಾಂತರವಾಗಿದೆ. 'ಎಎಕ್ಸ್' ಮತ್ತು 'ಎಎಕ್ಸ್3' ರೀತಿಯಲ್ಲಿಯೇ ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಜೊತೆಗೆ ಡುಯಲ್-ಪೇನ್ ಪನೋರಮಿಕ್ ಸನ್‌ರೂಫ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಟೆಲಿಸ್ಕೋಪಿಕ್-ಅಡ್ಜಸ್ಟೇಬಲ್ ಸ್ಟೀರಿಂಗ್, ಅಲಾಯ್ ವೀಲ್‌ಗಳು, ರೇಡಿಂಗ್ ಲ್ಯಾಂಪ್‌ಗಳು, ಡ್ರೈವರ್ & ಕೋ-ಡ್ರೈವರ್‌ಗಾಗಿ ಸನ್ ವೈಸರ್‌ನ್ನು ಪಡೆದಿದೆ.
ಎಎಕ್ಸ್7 (AX7):
ಈ ರೂಪಾಂತರವು 'ಎಎಕ್ಸ್5'ನಂತೆಯೇ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 18-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಅಡ್ರಿನೊ ಎಕ್ಸ್ ಪ್ಲಸ್, ಟೂ-ಸ್ಪೋಕ್ ಸ್ಟೀರಿಂಗ್, 540-ಡಿಗ್ರಿ ಸರೌಂಡ್ ವ್ಯೂ, ಬ್ಲೈಂಡ್-ವ್ಯೂ ಮಾನಿಟರ್, ಡಿಜಿಟಲ್ ವಿಡಿಯೋ ರೆಕಾರ್ಡಿಂಗ್, ಇಂಟೆಲ್ಲಿ ಕಂಟ್ರೋಲ್‌ಗಳು, ಆಟೋ ಹೆಡ್‌ಲೈಟ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರೈನ್ ಸೆನ್ಸಿಂಗ್ ವೈಪರ್‌ಗಳನ್ನು ಹೊಂದಿದೆ.
ಎಎಕ್ಸ್7 ಟಿ ( AX7 T):
ಇದು 'ಎಎಕ್ಸ್7' ರೀತಿಯಲ್ಲಿಯೇ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೋ, ಡಾಲ್ಬಿ ಅಟ್ಮಾಸ್, ಸ್ಟುಡಿಯೋ ಮತ್ತು 3ಡಿ ಸೌಂಡ್ ಸ್ಟೇಜ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಹೆಡ್‌ಲೈಟ್ ಬೂಸ್ಟರ್, ಫ್ರೇಮ್‌ಲೆಸ್ ಆಟೋ-ಡಿಮ್ಮಿಂಗ್ ಒಆರ್‌ವಿಎಂ, ಫ್ರಂಟ್ ವೈರ್‌ಲೆಸ್ ಚಾರ್ಜರ್ ಮತ್ತು ಎಲೆಕ್ಟ್ರಿಕ್ ಸ್ಮಾರ್ಟ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.
ಎಎಕ್ಸ್7 ಎಲ್ (AX7 L):
ಈ ಗರಿಷ್ಠ ಶ್ರೇಣಿ ರೂಪಾಂತರವು 'ಎಎಕ್ಸ್7'ಗೆ ಹೋಲಿಕೆಯಾಗುತ್ತದೆ. ಅಂದರಂತೆಯೇ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ 19-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಮಲ್ಟಿ ಜೋನ್ ಆಂಬಿಯೆಂಟ್ ಲೈಟಿಂಗ್, ಡಾಲ್ಬಿ ಅಟ್ಮಾಸ್, ಫೋರ್-ವೇ ಪವರ್ಡ್ ಬಾಸ್ ಮೋಡ್, ವೆಂಟಿಲೇಟೆಡ್ ರೇರ್ ಸೀಟ್‌ಗಳು, ರೇರ್ ವೈರ್‌ಲೆಸ್ ಚಾರ್ಜರ್, ಫ್ರಂಟ್ & ರೇರ್ ಸೀಟ್ ಪ್ಯಾಡ್‌ಗಳನ್ನು ಹೊಂದಿದೆ.
ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ ಪವರ್‌ಟ್ರೇನ್ ಹೇಗಿದೆ:
ನೂತನ 'ಎಕ್ಸ್‌ಯುವಿ 7ಎಕ್ಸ್ಒ' ಕಾರು 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಗರಿಷ್ಠ 17 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡಬಲ್ಲದು ಎಂದು ಅಂದಾಜಿಸಲಾಗಿದೆ.


Click it and Unblock the Notifications








