Mahindra: ಮಹೀಂದ್ರಾ XUV700 ಗಿಂತ XUV 7XO ಚೆನ್ನಾಗಿದೆಯೇ? ಈ ಸತ್ಯ ಯಾರೂ ಹೇಳಲ್ಲ!

ಮಹೀಂದ್ರಾದ ಪ್ರೀಮಿಯಂ ಕಾರಾಗಿರುವ XUV700 ಹಲವು ವರ್ಷಗಳಿಂದ ಭಾರತದಲ್ಲಿ ಜನಪ್ರಿಯ ಎಸ್‌ಯುವಿಯಾಗಿ ಮುಂದುವರಿಯುತ್ತಿದೆ. ಈ ಕಾರಿಗೆ ಪ್ರತಿಸ್ಪರ್ದಿಗಳು ಹೆಚ್ಚಾಗಿರುವುದರಿಂದ ಕಂಪನಿಯು XUV700 ಅನ್ನು ಇನ್ನಷ್ಟು ಪ್ರೀಮಿಯಂ ಲುಕ್ ಹಾಗೂ ಆಧುನಿಕ ಫೀಚರ್ಸ್ ನೀಡಿ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ಭದ್ರಪಡಿಸಲು XUV 7XO ಹೆಸರಿನಲ್ಲಿ ಸಂಪೂರ್ಣ ಲುಕ್ ಬದಲಿಸಿ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಹಳೆಯ ಮಾಡಲ್‌ಗೆ ತುಂಬಾ ಅಭಿಮಾನಿಗಳಿದ್ದಾರೆ, ಹೊಸ ಮಾಡಲ್‌ ಹೇಗೆ ಹಳೆಯದಕ್ಕಿಂತ ಭಿನ್ನವಾಗಿದೆ ಎಂಬುದು ಅವರಿಗೆ ತಿಳಿದಿಲ್ಲ. ಹಾಗಾಗಿ ಎರಡೂ ಕಾರುಗಳನ್ನು ಇಲ್ಲಿ ಹೋಳಿಕೆ ಮಾಡಿದ್ದೇವೆ.

ಮಹೀಂದ್ರಾ XUV 7XO ಅನ್ನು XUV700 ನ ವಿಕಸನವಾಗಿ ನೋಡಲಾಗುತ್ತದೆ, ಇದರಲ್ಲಿದ್ದ ಪ್ರಮುಖ ನ್ಯೂನತೆಗಳನ್ನು ಸರಿಪಡಿಸಿಕೊಂಡು XUV 7XO ಎಂಟ್ರಿಕೊಟ್ಟಿದೆ. ಅದೇ ಸಮಯದಲ್ಲಿ ಅದರ ಒಟ್ಟಾರೆ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹೈ-ಟೆಕ್ ತಂತ್ರಜ್ಞಾನ ಮತ್ತು ಸೌಕರ್ಯಗಳೊಂದಿಗೆ ಹೆಜ್ಜೆ ಇಟ್ಟಿದೆ. XUV700 ನ ಮೂಲಭೂತ ಅಂಶಗಳನ್ನು ಇಷ್ಟಪಡುವ ಜೊತೆಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ಬಯಸುವ ಖರೀದಿದಾರರಿಗೆ, XUV 7XO ಬೆಸ್ಟ್‌ ಆಯ್ಕೆಯಾಗಿದೆ.

mahindra-xuv-7xo-vs-xuv700-design-tech-compared

ಫೀಚರ್ಸ್: ಮಹೀಂದ್ರಾ XUV700 ತನ್ನ ಕಾಲಕ್ಕೆ ಆಕರ್ಷಕ ಇಂಟೀರಿಯರ್ ಹಾಗೂ ಅಧುನಿಕ ಫೀಚರ್ಸ್ ಹೊಂದಿತ್ತು, ಈಗ XUV 7XO ಇದಕ್ಕಿಂತ ಪ್ರೀಮಿಯಂ ಇಂಟೀರಿಯರ್ ಹಾಗೂ ಅತ್ಯಾಧುನಿಕ ಫೀಚರ್ಸ್ ‌ನೊಂದಿಗೆ ಸಜ್ಜುಗೊಂಡಿದೆ. ಹೊಸ ಟ್ರಿಪಲ್-ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು, ಪವರ್ಡ್ ಫ್ರಂಟ್ ಸೀಟ್‌ಗಳು, ಮುಂಭಾಗ ಮತ್ತು ಹಿಂಭಾಗಕ್ಕೆ ವೈರ್‌ಲೆಸ್ ಚಾರ್ಜಿಂಗ್, ಅಲೆಕ್ಸಾ ಮತ್ತು ಚಾಟ್‌ಜಿಪಿಟಿ ಇಂಟಿಗ್ರೇಷನ್‌ದಂತಹ ಸುಧಾರಿತ ಸಾಫ್ಟ್‌ವೇರ್ ಒಳಗೊಂಡಿದೆ.

ಡಿಸೈನ್: XUV 7XO ಡಿಸೈನ್ ವಿಷಯದಲ್ಲಿ ತುಂಬಾ ಬದಲಾವಣೆಗಳನ್ನು ತಂದಿದೆ, ಆದರೆ ಒಟ್ಟಾರೆ ಲುಕ್‌ XUV700 ಅನ್ನು ನೋಡಿದಂತೆ ಇರುತ್ತದೆ. XUV 7XO ಈಗ ಹೊಸ LED DRL ಜೊತೆಗೆ ಹೊಸ ಹೆಡ್‌ಲ್ಯಾಂಪ್, ಹೆಚ್ಚು ನೇರವಾದ ಮುಂಭಾಗದ ಗ್ರಿಲ್, ಪರಿಷ್ಕೃತ ಬಂಪರ್‌ಗಳೊಂದಿಗೆ ರೋಡ್ ಪ್ರೆಸೆನ್ಸ್ ಅನ್ನು ಹೆಚ್ಚಿಸಲಾಗಿದೆ. ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು, ದೊಡ್ಡ 19-ಇಂಚಿನ ಏರೋ-ಆಪ್ಟಿಮೈಸ್ಡ್ ವೀಲ್‌ಗಳೊಂದಿಗೆ XUV 7XO ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.

mahindra-xuv-7xo-vs-xuv700-design-tech-compared

ಯಾಂತ್ರಿಕ ಪ್ಯಾಕೇಜ್: ಎಂಜಿನ್ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, XUV 7XO ಕಾರಿನಲ್ಲಿ ಪ್ರಯಾಣಿಕರ ಚಾಲನಾ ಅನುಭವ ಹೆಚ್ಚಿಸಲು ಮಹೀಂದ್ರಾ ಹೊಸ DAVINCI ಡ್ಯಾಂಪರ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಕಾರು ತಯಾರಕರು ಸವಾರಿ ಸೌಕರ್ಯ, ಬಾಡಿ ಕಂಟ್ರೋಲ್ ಮತ್ತು ಕ್ಯಾಬಿನ್ ಶಬ್ದ ಮಟ್ಟಗಳಲ್ಲಿ ಸುಧಾರಣೆಯನ್ನು ತಂದಿದ್ದಾರೆ. XUV700 ಗಿಂತ XUV 7XO ರಸ್ತೆಯಲ್ಲಿ ಹೆಚ್ಚು ಸ್ಥಿರ ಮತ್ತು ಆರಾಮ ಪ್ರಯಾಣ ಅನುಭವ ನೀಡುವುದಾಗಿ ಕಂಪನಿ ತಿಳಿಸಿದೆ.

ಸುರಕ್ಷತೆ: ಸುರಕ್ಷತಾ ದೃಷ್ಟಿಯಿಂದ, XUV 7XO ನಲ್ಲಿ 540-ಡಿಗ್ರಿ ಕ್ಯಾಮೆರಾ ನೀಡಲಾಗಿದ್ದು, ಇದು 360-ಡಿಗ್ರಿ ಸರೌಂಡ್ ವ್ಯೂ ಅನ್ನು ಹೆಚ್ಚುವರಿ ಅಂಡರ್‌ಬಾಡಿ ಮತ್ತು ಬ್ಲೈಂಡ್-ಸ್ಪಾಟ್ ನೋಟದೊಂದಿಗೆ ಸಂಯೋಜಿಸುತ್ತದೆ. SUV ಸುಧಾರಿತ ರಾಡಾರ್ ಮತ್ತು ಕ್ಯಾಮೆರಾ ಹಾರ್ಡ್‌ವೇರ್ ಜೊತೆಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ADAS ದೃಶ್ಯೀಕರಣದೊಂದಿಗೆ ಹೆಚ್ಚು ಸುಧಾರಿತ ಲೆವೆಲ್-2+ ADAS ಸೂಟ್ ಅನ್ನು ಹೊಂದಿದೆ.

mahindra-xuv-7xo-vs-xuv700-design-tech-compared

ಒಟ್ಟಾರೆ ಮಹೀಂದ್ರಾ XUV 7XO ಅನ್ನು XUV700 ಗೆ ಬದಲಿಯಾಗಿ ಇರಿಸಲಾಗಿಲ್ಲ, ಬದಲಿಗೆ ಅದಕ್ಕಿಂತ ಆಕರ್ಷಕವಾಗಿ ನಿರ್ಮಿಸಲಾದ ಹೆಚ್ಚು ಸಮಗ್ರ ಮಿಡ್-ಸೈಕಲ್ ಅಪ್‌ಡೇಟ್‌ ಮಾಡಿದ ಕಾರಾಗಿದೆ. ಮೂಲ ಆಧಾರಗಳು ಒಂದೇ ಆಗಿದ್ದರೂ, ಹೊಸ ನವೀಕರಣಗಳೊಂದಿಗೆ ಪರಿಚಯಿಸಲಾದ ಬದಲಾವಣೆಗಳು ಹೊಸ ಮಾಲೀಕತ್ವದ ಅನುಭವವನ್ನು ಹೆಚ್ಚಿಸುವಷ್ಟು ವಿಶಾಲವಾಗಿವೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 14, 2026, 10:03 [IST]
English summary
Mahindra xuv 7xo vs xuv700 design tech compared
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+