ಮಾರುತಿ ಇ-ವಿಟಾರಾ VS ಟೊಯೊಟಾ ಎಬೆಲ್ಲಾ: ಯಾವುದು ಬೆಸ್ಟ್, ಹೇಗಿವೆ ಕಾರುಗಳು?
ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e-vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದೇ ಕಾರನ್ನು ಟೊಯೋಟಾ ಕೂಡಾ ಎಬೆಲ್ಲಾ (Toyota Ebella) ಹೆಸರಿನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದೆ. ಮಾರುತಿ ಸುಜುಕಿ ಇ-ವಿಟಾರಾ ಮತ್ತು ಟೊಯೋಟಾ ಎಬೆಲ್ಲಾ ಅವರ ಜಾಗತಿಕ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ಮೊದಲ ಎಲೆಕ್ಟ್ರಿಕ್ ಮಾಡಲ್‌ಗಳಾಗಿವೆ. ಎರಡೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದರೂ, ಎರಡರ ನಡುವೆ ಕೆಲವು ವ್ಯತ್ಯಾಸಗಳಿವೆ. ಈ ಲೇಖನದಲ್ಲಿ, ಅವುಗಳನ್ನು ಪ್ರತ್ಯೇಕಿಸುವ ಅಂಶಗಳನ್ನು ನಾವು ಹತ್ತಿರದಿಂದ ನೋಡೋಣ.
ಡಿಸೈನ್ ವ್ಯತ್ಯಾಸಗಳು
ಇ-ವಿಟಾರಾ ಮತ್ತು ಎಬೆಲ್ಲಾ ಮುಖ್ಯವಾಗಿ ಮುಂಭಾಗದಲ್ಲಿ ಭಿನ್ನವಾಗಿದ್ದರೂ, ಬದಿ ಮತ್ತು ಹಿಂಭಾಗವು ಹೆಚ್ಚಾಗಿ ಒಂದೇ ರೀತಿ ಇರುತ್ತದೆ. ಎಬೆಲ್ಲಾ ಸೆಗ್ಮೆಂಟೆಡ್ DRLಗಳು ಮತ್ತು ಸುಗಮ ಬಂಪರ್ ಫಿನಿಶ್ ಹೊಂದಿದೆ ಮತ್ತು ಫಾಗ್ ಲೈಟ್‌ಗಳನ್ನು ಪಡೆದಿಲ್ಲ. ಇ-ವಿಟಾರಾ Y-ಆಕಾರದ LED DRLಗಳು, ಬಂಪರ್ ಕ್ಲಾಡಿಂಗ್ ಮತ್ತು ಫಾಗ್ ಲೈಟ್‌ಗಳನ್ನು ಹೊಂದಿದೆ.

ಎರಡೂ ಮಾಡಲ್‌ಗಳು ಒಂದೇ ರೀತಿಯ ಏರೋ-ಆಪ್ಟಿಮೈಸ್ಡ್ ವೀಲ್ ಡಿಸೈನ್, ಸಿ-ಪಿಲ್ಲರ್-ಮೌಂಟೆಡ್ ಡೋರ್ ಹ್ಯಾಂಡಲ್‌ಗಳು, ಬಾಗಿಲುಗಳು ಮತ್ತು ವೀಲ್ ಆರ್ಚ್‌ಗಳ ಉದ್ದಕ್ಕೂ ಕ್ಲಾಡಿಂಗ್ ಒಂದೇ ರೀತಿ ಇವೆ. ಎಬೆಲ್ಲಾ 'BEV' ಬ್ಯಾಡ್ಜಿಂಗ್ ಅನ್ನು ಹೊಂದಿದೆ, ಹಿಂಭಾಗದಲ್ಲಿ ಬದಲಾವಣೆಗಳು ಸ್ವಲ್ಪ ಪರಿಷ್ಕೃತ ಟೈಲ್-ಲೈಟ್ ಸಿಗ್ನೇಚರ್‌ಗೆ ಸೀಮಿತವಾಗಿವೆ. ಇಳಿಜಾರಾದ ರೂಫ್ ಲೈನ್ ಮತ್ತು ಬಂಪರ್ ವಿನ್ಯಾಸ ಮಾತ್ರ ಒಂದೇ ಆಗಿದೆ.
ಇಂಟೀರಿಯರ್ ಮತ್ತು ಫೀಚರ್ಸ್
ಎರಡೂ ಕಾರುಗಳಲ್ಲಿನ ಫೀಚರ್ಸ್‌ಗಳಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲಿತ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಕ್ಲೌಡ್-ಆಧಾರಿತ ನ್ಯಾವಿಗೇಷನ್, ಪನೋರಮಿಕ್ ಸನ್‌ರೂಫ್, 12 ಬಣ್ಣ ಆಯ್ಕೆಗಳೊಂದಿಗೆ ಆಂಬಿಯೆಂಟ್ ಲೈಟಿಂಗ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ನೀಡಲಾಗಿದೆ. ಎರಡೂ ಗ್ರೇ-ಬ್ಲಾಕ್ ಇಂಟೀರಿಯರ್ ಥೀಮ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಪಡೆಯುತ್ತವೆ.

ಸುರಕ್ಷತೆಯ ವಿಷಯದಲ್ಲಿ, ಎರಡೂ ಕಾರುಗಳು ಪ್ರಮಾಣಿತವಾಗಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಇಎಸ್‌ಪಿ, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಕಾರ್ಯಗಳಾದ ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸೇರಿದಂತೆ ಹೆಚ್ಚಿನವುಗಳನ್ನು ಪಡೆಯುತ್ತದೆ. ಇದರ ಹೊರತಾಗಿ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋಮೇಟಿಕ್ ಕ್ಲೈಮೆಟ್ ಕಂಟ್ರೋಲ್, ಮಲ್ಟಿ ಯುಎಸ್‌ಬಿ ಪೋರ್ಟ್‌ಗಳು ಇವೆ.
ಬ್ಯಾಟರಿ ಮತ್ತು ರೇಂಜ್
ಎರಡೂ ಎಸ್‌ಯುವಿಗಳು 49kWh ಮತ್ತು 61kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತವೆ. ಈ ಬ್ಯಾಟರಿಗಳು BYD ಮೂಲದ LFP (ಲಿಥಿಯಂ ಐರನ್-ಫಾಸ್ಫೇಟ್) 'ಬ್ಲೇಡ್' ಸೆಲ್‌ಗಳನ್ನು ಹೊಂದಿವೆ. 49kWh ಬ್ಯಾಟರಿಯು ಮುಂಭಾಗದ ಆಕ್ಸಲ್‌ನಲ್ಲಿ ಇರಿಸಲಾದ ಒಂದೇ ಮೋಟಾರ್‌ನೊಂದಿಗೆ ಜೋಡಿಯಾಗಿ ಬರುತ್ತದೆ, ಇದು 144hp ಪವರ್ ಉತ್ಪಾದಿಸುತ್ತದೆ.

ದೊಡ್ಡ 61kWh ಬ್ಯಾಟರಿಯು ಸಿಂಗಲ್-ಮೋಟಾರ್‌ನೊಂದಿಗೆ, 174hp ಪವರ್ ಹೊರಹಾಕುತ್ತದೆ. ಎರಡೂ ಮೋಟಾರ್‌ಗಳು ಒಂದೇ ರೀತಿಯ 189Nm ಟಾರ್ಕ್ ಉತ್ಪಾದಿಸುತ್ತವೆ. ರೇಂಜ್ ಬಗ್ಗೆ ಹೇಳುವುದಾದರೆ, 49 kWh ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನೊಂದಿಗೆ 440 ಕಿ.ಮೀ ರೇಂಜ್ ನೀಡುತ್ತದೆ, ದೊಡ್ಡ 61 kWh ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 543 ಕಿ.ಮೀ ರೇಂಜ್ ನೀಡುತ್ತದೆ.
ಬೆಲೆ: ಮಾರುತಿ ಸುಜುಕಿ ಇ-ವಿಟಾರಾ ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೆಲೆಯು ರೂ. 15.99 ಲಕ್ಷದಿಂದ ರೂ. 19.79 ಲಕ್ಷ (ಎಲ್ಲ ಬೆಲೆಗಳು ಎಕ್ಸ್-ಶೋರೂಂ) ಇದೆ. ಆದರೆ ಟೊಯೋಟಾ ಎಬೆಲ್ಲಾ ಕಾರಿನ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಇ-ವಿಟಾರಾ ಕಾರಿನ ಬೆಲೆಗಿಂತ ಸ್ವಲ್ಪ ಹೆಚ್ಚಿನ ಬೆಲೆ ಇರಬಹುದು ನಿರೀಕ್ಷಿಸಲಾಗಿದೆ.


Click it and Unblock the Notifications








