Maruti: ಬಹುನಿರೀಕ್ಷಿತ ಹೊಸ ಮಾರುತಿ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೆ ಸಜ್ಜು!

ಮಾರುತಿ ಬ್ರೆಝಾ ಫೇಸ್‌ಲಿಫ್ಟ್ (Maruti Brezza Facelift) ಬಿಡುಗಡೆಗೆ ಸಜ್ಜಾಗುತ್ತಿದ್ದು, ಈಗಾಗಲೇ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಕೊಂಡಿದೆ. ದೇಶದ ವಿವಿಧೆಡೆ ಟೆಸ್ಟಿಂಗ್ ಮಾಡಲ್ ಕಾಣಿಸಿಕೊಂಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವು ಮೂಲಗಳ ಪ್ರಕಾರ, ಅಧಿಕೃತ ಬಿಡುಗಡೆಯು ಜುಲೈ ಅಥವಾ ಅಕ್ಟೋಬರ್ 2026ರ ನಡುವೆ ಆಗಬಹುದು ಎಂದು ಹೇಳಿವೆ. ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಬ್ರೆಝಾ ಕಾರಿಗೆ ಈಗ ಫೇಸ್‌ಲಿಫ್ಟ್ ತುಂಬಾ ಮುಖ್ಯವಾಗಿದೆ. ಈಗಾಗಲೇ ಪ್ರತಿಸ್ಪರ್ಧಿಗಳು ಆಧುನಿಕ ಡಿಸೈನ್, ಆಕರ್ಷಕ ಫೀಚರ್ಸ್‌ನೊಂದಿಗೆ ಮುನ್ನುಗ್ಗುತ್ತಿದ್ದು, ಇವಕ್ಕೆ ಪೈಪೋಟಿ ನೀಡಲು ಹೊಸ ಫೇಸ್‌ಲಿಫ್ಟ್ ಬ್ರೆಝಾ ಯಾವೆಲ್ಲ ಅಪ್‌ಡೇಟ್ ಪಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.

ನಿರೀಕ್ಷಿತ ಫೀಚರ್ಸ್ ಮತ್ತು ಅಪ್‌ಡೇಟ್‌ಗಳು

ಮುಂಬರಲಿರುವ ಹೊಸ ಮಾರುತಿ ಸುಜುಕಿ ಭ್ರೆಝಾ ಫೇಸ್‌ಲಿಫ್ಟ್ ಎಸ್‌ಯುವಿ ಗಮನಾರ್ಹವಾದ ಬಾಹ್ಯ ಬದಲಾವಣೆಗಳನ್ನು ಪಡೆದಿದೆ. ಇದರಲ್ಲಿ ರೀ-ಡಿಸೈನ್ ಮಾಡಲಾದ ಹೆಡ್‌ಲೈಟ್‌ಗಳು ಮತ್ತು ಟೈಲ್-ಲ್ಯಾಂಪ್‌ಗಳು, ನವೀಕರಿಸಿದ ಬಂಪರ್‌ಗಳು ಮತ್ತು ಹೊಸ ಅಲಾಯ್ ವೀಲ್ ವಿನ್ಯಾಸಗಳು ಸೇರಿವೆ. ಸಂಪೂರ್ಣ ಬದಲಾವಣೆಯಲ್ಲದಿದ್ದರೂ, ಟ್ರೆಂಡಿಗೆ ತಕ್ಕಂತೆ ವಾಹನದ ಡಿಸೈನ್ ಅಪ್‌ಡೇಟ್ ಮಾಡಲಾಗಿದೆ.

Maruti Suzuki Brezza Facelift Expected Launch Price Details

ಇಂಟೀರಿಯರ್ ಬದಲಾವಣೆ ವಿಷಯಕ್ಕೆ ಬಂದರೆ, ಕ್ಯಾಬಿನ್ ದೊಡ್ಡದಾದ 10.1-ಇಂಚಿನ ಟಚ್‌ಸ್ಕ್ರೀನ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪವರ್ಡ್ ಡ್ರೈವರ್ ಸೀಟ್ ಮತ್ತು ಹೆಚ್ಚು ಪ್ರೀಮಿಯಂ ಅನುಭವಕ್ಕಾಗಿ ಸುಧಾರಿತ ವಸ್ತುಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಲೆವೆಲ್ 2 ADAS, ಲೇನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಸೇಫ್ಟಿ ಫೀಚರ್ಸ್ ಕೂಡ ಇರಬಹುದು.

ಎಂಜಿನ್ ಮತ್ತು ಪರ್ಫಾಮೆನ್ಸ್:

ಬ್ರೆಝಾ ಫೇಸ್‌ಲಿಫ್ಟ್ 103 ಎಚ್‌ಪಿ ಪವರ್ ಮತ್ತು 137 ಎನ್‌ಎಂ ಟಾರ್ಕ್ ಉತ್ಪಾದಿಸುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 88 ಎಚ್‌ಪಿ ಪವರ್ ಉತ್ಪಾದಿಸುವ ಸಿಎನ್‌ಜಿ ಆಯ್ಕೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಮೈಲ್ಡ್ - ಹೈಬ್ರಿಡ್ ಎಂಜಿನ್ ಪರಿಚಯಿಸಬಹುದು ಆದರೆ ಬೆಲೆ ಸ್ವಲ್ಪ ಹೆಚ್ಚಾಗಬಹುದು. ಎಂಜಿನ್ ಪರಿಷ್ಕರಣೆಗಳ ಮೂಲಕ ಇಂಧನ ದಕ್ಷತೆಯ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.

maruti-suzuki-brezza-facelift-expected-launch-price-details

ಹೊಸ ಫೇಸ್‌ಲಿಫ್ಟ್ ಬ್ರೆಝಾ ಬೆಲೆ ರೂ.9 ಲಕ್ಷದಿಂದ 13 ಲಕ್ಷ (ಎಕ್ಸ್-ಶೋರೂಂ)ಕ್ಕೆ ಬಿಡುಗಡೆಯಾಗಬಹದು ಎಂದು ನಿರೀಕ್ಷಿಸಲಾಗಿದೆ. ಇದು ಹುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ. ವರ್ಧಿತ ಸುರಕ್ಷತೆ, ಸೌಕರ್ಯ ಮತ್ತು ಆಧುನಿಕ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ನೀಡುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮಾರುತಿ ಭ್ರೆಝಾ ಸ್ಥಾನವನ್ನು ಬಲಪಡಿಸುವ ಗುರಿಯಿದೆ.

ಡಿಮ್ಯಾಂಡ್ ಇದೆ, ಆದರೂ ಫೇಸ್‌ಲಿಫ್ಟ್ ಬೇಕು:

ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇದರಲ್ಲಿ ಮುಖ್ಯವಾಗಿ ಬ್ರೆಝಾ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಮುಂದುವರೆಯಲು ಪ್ರತಿಸ್ಟರ್ಧಿಗಳೊಂದಿಗೆ ಸೆಣಸಾಡುತ್ತಿದೆ. ಈ ಕಾರಿನ ಕಡಿಮೆ ಬೆಲೆ, ಉತ್ತಮ ಫೀಚರ್ಸ್, ಆಕರ್ಷಕ ಡಿಸೈನ್, ಐದು ಮಂದಿಗೆ ಆರಾಮ ಪ್ರಯಾಣ ಸೇರಿದಂತೆ ಅತ್ಯುತ್ತಮ ಮೈಲೇಜ್ ನೀಡುವುದರಿಂದ ಮಾರುತಿ ಬ್ರೆಝಾ ಸದ್ಯ ಭಾರತದಲ್ಲಿ ಹೆಚ್ಚಾಗಿ ಮಾರಾಟ ಕಾಣುತ್ತಿದೆ.

Maruti Suzuki Brezza Facelift Expected Launch Price Details

ಅಂದಹಾಗೆ ಭಾರತದಲ್ಲಿ ಮಾರುತಿ ಸುಜುಕಿ ಬ್ರೆಝಾ 2026 ಜನವರಿ ತಿಂಗಳಲ್ಲಿ ಬರೋಬ್ಬರಿ 17,486 ಯುನಿಟ್‌ ವಾಹನಗಳು ಮಾರಾಟವಾಗಿವೆ. ಕೇವಲ ಒಂದು ತಿಂಗಳಲ್ಲಿ 17,486 ಯೂನಿಟ್‌ ವಾಹನಗಳೆಂದರೆ ಪ್ರತಿ ದಿನ ಸುಮಾರು 564 ಕಾರುಗಳನ್ನು ಡೆಲಿವರಿ ನೀಡಿರಬಹುದು. ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಮಾರುತಿ ಬ್ರೆಝಾ ಕಾರು ಯಾವ ಮಟ್ಟಿಗೆ ಭಾರತೀಯ ಗ್ರಾಹಕರನ್ನು ಸೆಳೆದಿದೆ ಎಂಬುದನ್ನು ತಿಳಿಯಬಹುದು.

ಆದರೆ ಬ್ರೆಝಾ ಫೇಸ್‌ಲಿಫ್ಟ್‌ ಬಿಡುಗಡೆಯಾದರೆ ಈ ಮಾರಾಟವು ಇನ್ನೂ ಹೆಚ್ಚಾಗಬಹುದು. ಅಲ್ಲದೇ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಬ್ರೆಝಾ ಕಾರಿಗೆ ಈಗ ಫೇಸ್‌ಲಿಫ್ಟ್ ತುಂಬಾ ಮುಖ್ಯವಾಗಿದೆ. ಬಿಡುಗಡೆ ಬಳಿಕ ಈ ಕಾರು ಯಾವ ಮಟ್ಟಿಗೆ ಸದ್ದು ಮಾಡಲಿದೆ ಕಾದುನೋಡಬೇಕಿದೆ. ಹೊಸ ಮುಂಬರಲಿರುವ ಮಾರುತಿ ಬ್ರೆಝಾ ಕುರತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Monday, February 16, 2026, 14:54 [IST]
English summary
Maruti suzuki brezza facelift expected launch price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+