34 Km ಮೈಲೇಜ್.. ರೂ.4.70 ಲಕ್ಷ, ಆಫೀಸ್‌ಗೆ ಹೋಗೋರಿಗೆ ಫರ್ಫೆಕ್ಟ್ ಚಾಯ್ಸ್.. ಆದ್ರೂ ಗ್ರಾಹಕರು ಕೊಳ್ಳುತ್ತಿಲ್ಲ!
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ 2026ರ ಫೆಬ್ರವರಿಯಲ್ಲಿಯೂ ಮುಂದುವರಿದಿದೆ. ಕೇವಲ 862 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,226 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ -80% ಇಳಿಮುಖವಾಗಿದೆ.
ನೂತನ 'ಮಾರುತಿ ಸೆಲೆರಿಯೊ' ಮಾರಾಟವು ಕಡಿಮೆಯಾಗಲು ನಾನಾ ಕಾರಣಗಳಿವೆ. ಬಹುಮುಖ್ಯವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಹಾಗೂ ಎಂಪಿವಿಗಳು ಪ್ರಾಬಲ್ಯ ಮೆರೆಯುತ್ತಿವೆ. ಖರೀದಿದಾರರು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಜೊತೆಗೆ ಹಲವು ವೈಶಿಷ್ಟ್ಯಗಳ ಕೊರತೆಯೂ ಇದೆ. ಹೀಗಾಗಿ, ಮಾರಾಟ ಸಂಖ್ಯೆ ಇಳಿಕೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

'ಮಾರುತಿ ಸುಜುಕಿ ಸೆಲೆರಿಯೊ' ವಿಶೇಷತೆಗಳೇನು:
ಈ ಕಾರು ಕೈಗೆಟುಕುವ ಬೆಲೆಯಲ್ಲಿಯೂ ಸಿಗಲಿದ್ದು, ಎಲ್ಲ ವರ್ಗದ ಜನರು ಕೊಂಡುಕೊಳ್ಳಬಹುದು. ಕನಿಷ್ಠ ರೂ.4.70 ಲಕ್ಷ ಹಾಗೂ ಗರಿಷ್ಠ ರೂ.6.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಲ್ಎಕ್ಸ್ಐ (LXi), ವಿಎಕ್ಸ್ಐ (LXi), ಜಡ್ಎಕ್ಸ್ಐ (ZXi) ಹಾಗೂ ಜಡ್ಎಕ್ಸ್ಐ ಪ್ಲಸ್ (ZXi Plus) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಸಾಧ್ಯವಾಗುವಂತೆ ದೊಡ್ಡದಾದ 15-ಇಂಚಿನ ಅಲಾಯ್ ವೀಲ್‌ಗಳು & ಉತ್ತಮವಾದ ಟೈರ್‌ಗಳನ್ನು ಹೊಂದಿದೆ.

ನೂತನ 'ಸೆಲೆರಿಯೊ' ಸಾಕಷ್ಟು ವಿಶಾಲವಾಗಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,435 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಕೆಫೀನ್ ಬ್ರೌನ್, ಆರ್ಕ್ಟಿಕ್ ವೈಟ್, ಪರ್ಲ್ ಬ್ಲೂಯಿಶ್ ಬ್ಲ್ಯಾಕ್, ಸಾಲಿಡ್ ಫೈರ್ ರೆಡ್ ಹಾಗೂ ಗ್ಲಿಸ್ಟನಿಂಗ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 313 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1-ಲೀ. ಪೆಟ್ರೋಲ್ ಎಂಜಿನ್, 66 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1-ಲೀ. ಸಿಎನ್‌ಜಿ ಎಂಜಿನ್, 56.7 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 82.1 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇದು ರೂಪಾಂತರಗಳಿಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಯಾವುದೇ ಸಾಮಾನ್ಯ ಬೈಕ್‌ಗಳಿಗೆ ಕಮ್ಮಿಯಿಲ್ಲದ ರೀತಿಯಲ್ಲಿ 24 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 15.05 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ 'ಮಾರುತಿ ಸೆಲೆರಿಯೊ' 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಸೆಂಟ್ರಲ್ ಲಾಕಿಂಗ್, ರೇರ್-ಎಸಿ ವೆಂಟ್‌ಗಳು ಹಾಗೂ ಮ್ಯಾನುವಲ್ ಎಸಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.


Click it and Unblock the Notifications








