Maruti Suzuki: ಬಡವರ ಕಾರಿದು.. 4.70 ಲಕ್ಷ ರೂಪಾಯಿ, 34 Km ಮೈಲೇಜ್.. 5-ಸೀಟರ್!

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ಉತ್ತಮ ಇಂಧನ ದಕ್ಷತೆಯಿಂದಲೂ ಖ್ಯಾತಿ ಗಳಿಸಿದ್ದು, ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸೆಲೆರಿಯೊ' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಹ್ಯಾಚ್‌ಬ್ಯಾಕ್‌ನ ಬೆಲೆ ಎಷ್ಟು.. ಕಾರ್ಯಕ್ಷಮತೆ ಹೇಗಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants):

ನೂತನ 'ಮಾರುತಿ ಸೆಲೆರಿಯೊ' ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.4.70 ಲಕ್ಷದಿಂದ ರೂ.6.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಎಲ್ಎಕ್ಸ್ಐ (LXi), ವಿಎಕ್ಸ್ಐ (VXi), ಝಡ್ಎಕ್ಸ್ಐ (ZXi) ಹಾಗೂ ಝಡ್ಎಕ್ಸ್ಐ ಪ್ಲಸ್ (ZXi Plus) ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.

Maruti Suzuki Celerio Car Price Design Colours Engine Mileage Features And All Details

ವಿನ್ಯಾಸ & ಬಣ್ಣಗಳು (Design & Colors):

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 15-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ, ಗ್ಲಿಸ್ಟನಿಂಗ್ ಗ್ರೇ, ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಕೆಫೀನ್ ಬ್ರೌನ್ ಮತ್ತು ಪರ್ಲ್ ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಸುತ್ತಳತೆ (Dimensions):

ಈ ಕಾರು ಹ್ಯಾಚ್‌ಬ್ಯಾಕ್ ವಿಭಾಗಕ್ಕೂ ಸೇರಿದ್ದರೂ ಹೆಚ್ಚು ವಿಶಾಲವಾಗಿದೆ. 3,695 ಮಿ.ಮೀ ಉದ್ದ, 1,655 ಮಿ.ಮೀ ಅಗಲ ಹಾಗೂ 1,555 ಮಿ.ಮೀ ಎತ್ತರವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,435 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 1,260 ಕೆಜಿ ತೂಕವಿದೆ.

Maruti Suzuki Celerio Car Price Design Colours Engine Mileage Features And All Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಹೊಸ 'ಸೆಲೆರಿಯೊ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾರಾಟ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಕೊಂಡೊಯ್ಯಲು 313 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

ಕಾರ್ಯಕ್ಷಮತೆ (Performance):

ಇದು ಶಕ್ತಿಶಾಲಿಯುತ 2 ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 1-ಲೀ. ಪೆಟ್ರೋಲ್ ಎಂಜಿನ್, 68.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 91 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1-ಲೀ. ಸಿಎನ್‌ಜಿ ಎಂಜಿನ್, 57 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 82 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Maruti Suzuki Celerio Car Price Design Colours Engine Mileage Features And All Details

ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24 ರಿಂದ 34 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ವೈಶಿಷ್ಟ್ಯಗಳು (Features):

ನೂತನ 'ಮಾರುತಿ ಸುಜುಕಿ ಸೆಲೆರಿಯೊ' ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) & ರಿವರ್ಸ್ ಪಾರ್ಕಿಂಗ್ ಸೆನ್ಸರ್‌ನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿ ಕಾರುಗಳು (Rival Cars):

ಇದಕ್ಕೆ ಸಾಲು - ಸಾಲು ಎದುರಾಳಿಯಾಗಿವೆ. ಟಾಟಾ ಟಿಯಾಗೊ, ಟಾಟಾ ಪಂಚ್, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಟಾಟಾ ಆಲ್ಟ್ರೋಜ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Thursday, January 15, 2026, 14:12 [IST]
English summary
Maruti suzuki celerio car price design colours engine mileage features and all details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+